ಅಧಿಕ ಭಾರದ ವಾಹನಗಳ ಓಡಾಟದಿಂದ ಕುಸಿಯುತ್ತಿದೆ ರಸ್ತೆಯ ಸೇತುವೆಗಳು
Team Udayavani, Jul 15, 2017, 3:45 AM IST
ಕೋಟ: ಕೋಟ-ಗೋಳಿಯಂಗಡಿ ಹಾಗೂ ಬ್ರಹ್ಮಾವರ -ಜನ್ನಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುವ ವಾಹನಗಳ ಓಡಾಟ ಹೆಚ್ಚಿದ್ದು ಇದರಿಂದಾಗಿ ಇಲ್ಲಿನ ಪ್ರಮುಖ ಸೇತುವೆಗಳು ಕುಸಿಯುವ ಭೀತಿಯಲ್ಲಿದೆ ಹಾಗೂ ಹೊಸದಾಗಿ ದುರಸ್ತಿಗೊಳಿಸಿದ ರಸ್ತೆ ಕೂಡ ಹಾಳಾಗು¤ತಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.
20 ಟನ್ ಸಾಮರ್ಥ್ಯದ
ರಸ್ತೆಯಲ್ಲಿ 40-45 ಟನ್ ಸಾಗಾಟ
ಬ್ರಹ್ಮಾವರ- ಜನ್ನಾಡಿ ಹಾಗೂ ಕೋಟ ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ 20ಮೆಟ್ರಿಕ್ ಟನ್‌ಗಿಂತ ಅಧಿಕ ಭಾರದ ವಾಹನಗಳ ಓಡಾಟವನ್ನು ಲೋಕೋಪಯೋಗಿ ಇಲಾಖೆ ನಿರ್ಬಂಧಿಸಿದೆ. ಶಿರಿಯಾರ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿ ಈ ಕುರಿತು ಸೂಚನಾಫಲಕವನ್ನು ಅಳವಡಿಸಿದೆ. ಆದರೆ ವಾಹನಗಳು ಈ ಆದೇಶವನ್ನು ಲೆಕ್ಕಿಸದೆ 40- 45 ಟನ್ ಗಿಂತ ಹೆಚ್ಚು ಭಾರದ ಸರಕುಗಳನ್ನು ಇಲ್ಲಿ ಸಾಗಾಟ ನಡೆಸುತ್ತದೆ. ಆದರೆ ಇದನ್ನು ತಡೆಯಲು ಆರ್.ಟಿ.ಒ. ಅಥವಾ ಪೊಲೀಸ್ ಇಲಾಖೆಯಾಗಲಿ ಮುಂದಾಗಿಲ್ಲ.
20 ಮೆಟ್ರಿಕ್ ಟನ್‌ಗಿಂತ ಅಧಿಕ ಭಾರದ ವಾಹನಗಳ ಓಡಾಟವನ್ನು ನಿರ್ಬಂಧಿಸಿ ಲೋಕೋಪಯೋಗಿ ಇಲಾಖೆ ಸೂಚನಾ ಫಲಕ ಅಳವಡಿಸಿರುವುದು.
ಎಚ್ಚರವಹಿಸದಿದ್ದರೆ
ಅಪಾಯ ಗ್ಯಾರಂಟಿ
ಕೋಟ-ಗೋಳಿಯಂಗಡಿ ರಸ್ತೆ ಈ ಭಾಗದ ಜನರ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾರೆ. ಅದೇ ರೀತಿ ಬ್ರಹ್ಮಾವರ ಜನ್ನಾಡಿ ರಸ್ತೆಯ ಮೂಲಕವು ಸಾವಿರಾರು ಮಂದಿ ಸಂಚರಿಸುತ್ತಾರೆ. ಹಿಂದೊಮ್ಮೆ ಬಾಕೂìರು ಸೇತುವೆ ಕುಸಿದ ಸಂದರ್ಭ ಈ ಭಾಗದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು. ಇದೀಗ ಅಧಿಕ ಭಾರದ ವಾಹನಗಳ ಓಡಾಟದಿಂದ ಅಪಾಯದಲ್ಲಿರುವ ಸೇತುವೆ, ಕಿರು ಸೇತುವೆ, ಮೋರಿಗಳು ಕುಸಿದಲ್ಲಿ ಈ ಭಾಗದ ಜನರು ಮತ್ತೂಮ್ಮೆ ಸಂಕಷ್ಟಪಡಬೇಕಾಗುತ್ತದೆ.
ಒಟ್ಟಾರೆ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಮುಂದೆ ಎದುರಾಗಲಿರುವ ಅಪಾಯವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಕೋಟ, ಬ್ರಹ್ಮಾವರದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ನಡೆಸಿ ಕಾನೂನು ಮೀರುವ ವಾಹನಗಳ ಮೇಲೆ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬೃಹತ್ ಗಾತ್ರದ ಬಂಡೆಗಳ ಸಾಗಾಟ
ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಿಸುವ ಸಲುವಾಗಿ ಉಪಯೋಗಿಸುವ 40-45 ಟನ್ ತೂಕದ ಬಂಡೆಕಲ್ಲುಗಳನ್ನು ಕೋಟ -ಗೋಳಿಯಂಗಡಿ ರಸ್ತೆಯಲ್ಲಿ ಸಾಗಾಟ ನಡೆಸಲಾಗುತ್ತದೆ ಹಾಗೂ ನವಯುಗ ಕಂಪನಿಯ ವಾಹನಗಳು ಕೂಡ ಅಧಿಕ ಭಾರದ ಸರಕುಗಳನ್ನು ಸಾಗಾಟ ನಡೆಸುತ್ತದೆ.
ಕುಸಿಯುವ ಭೀತಿಯಲ್ಲಿ ಸೇತುವೆಗಳು
ಈ ರೀತಿಯ ವಾಹನಗಳ ಓಡಾಟದಿಂದ ಇಲ್ಲಿನ ಸೇತುವೆ, ಮೋರಿಗಳು ಕುಸಿಯುವ ಅಪಾಯದಲ್ಲಿದೆ. ಜೂ.8ರಂದು ಕೋಟ ಮೂರುಕೈ ಸಮೀಪ ಬೆಟ್ಲಕ್ಕಿ ಹಡೋಲಿನಲ್ಲಿ ಕಿರುಸೇತುವೆಯೊಂದು ಕುಸಿದು ಎರಡು ದಿನ ಸಂಪರ್ಕ ಕಡಿತಗೊಂಡು ಈ ಭಾಗದ ಜನತೆ ಪರದಾಟನಡೆಸಿದ್ದರು. ಇದೀಗ ತಾತ್ಕಾಲಿಕ ಮೋರಿ ಅಳವಡಿಸಿ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದರ ಮೇಲೂ ಅತೀ ಭಾರದ ವಾಹನಗಳು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಬ್ರಹ್ಮಾವರ -ಜನ್ನಾಡಿ ಹಾಗೂ ಕೋಟ-ಗೋಳಿಯಂಗಡಿ ರಸ್ತೆಯಲ್ಲಿ ಅಧಿಕ ಭಾರವನ್ನು ಹೊತ್ತು ಓಡಾಡುವ ವಾಹನಗಳಿಂದಾಗಿ ಇಲ್ಲಿನ ಸೇತುವೆಗಳು ಕುಸಿಯುವ ಹಂತ ತಲುಪಿದೆ. ಒಂದು ವೇಳೆ ಸೇತುವೆಗಳು ಕುಸಿದಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದೆ. ಆದರೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು
ಸೂಕ್ತ ಕ್ರಮಕೈಗೊಳ್ಳಬೇಕು.
– ಯಡ್ತಾಡಿ ಸತೀಶ್ ಶೆಟ್ಟಿ, ಸಾಮಾಜಿಕ ಹೋರಾಟಗಾರರು
ಕೋಟ ಹಾಗೂ ಬ್ರಹ್ಮಾವರ ಜಿಲ್ಲಾ ಮುಖ್ಯ ರಸ್ತೆಯಲ್ಲಿ ವಾಹನಗಳು ಅಧಿಕ ಭಾರವನ್ನು ಹೊತ್ತು ಸರಕುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಸ್ಥಳೀಯರಿಂದ ದೂರುಗಳು ಬಂದಿದೆ. ಮುಂದಿನ ದಿನದಲ್ಲಿ ಈ ಕುರತು
ಸೂಕ್ತ ಕ್ರಮಕೈಗೊಳ್ಳಲಾಗುವುದು.
– ಗುರುಮೂರ್ತಿ ಕುಲಕರ್ಣಿ, ಉಪಸಾರಿಗೆ ಆಯುಕ್ತರು ಉಡುಪಿ ಜಿಲ್ಲೆ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.