ಯುಜಿಡಿ ಕಾಮಗಾರಿಯಿಂದ ಕಂಗೆಟ್ಟ ರಸ್ತೆ- ಮುಚ್ಚಿಕೊಂಡ ಡ್ರೈನೇಜ್‌ಗಳು


Team Udayavani, May 31, 2017, 2:43 PM IST

drinage.jpg

ಕುಂದಾಪುರ: ತಾಲೂಕಿನಲ್ಲಿ  ಈ ವಾರದಲ್ಲಿ  ಒಂದೆರಡು ಬಾರಿ ಮಳೆ ಸುರಿಯುವುದರೊಂದಿಗೆ ಮುಂಗಾರು ಮಳೆಯ ಸೂಚನೆ ಕಾಣಿಸಿದೆ. ಮಳೆಗಾಲದ ವಿಪತ್ತು ಎದುರಿಸಲು ಕುಂದಾಪುರ ಪುರಸಭೆ  ಪೂರ್ವಭಾವಿಯಾಗಿ ತನ್ನ ವ್ಯಾಪ್ತಿಯಲ್ಲಿ ಪ್ರಥಮ ಹಂತದ  ಸಿದ್ಧತೆ ನಡೆಸಿತ್ತಾದರೂ ಈ ಬಾರಿಯ ಮಳೆಯಿಂದ ಬಹಳಷ್ಟು ಸಮಸ್ಯೆಗಳು ಎದುರಾಗುವ ಮುನ್ಸೂಚನೆ ಕಂಡುಕೊಂಡಿದೆ.

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಈ ಬಾರಿ ಮಳೆಗಾಲದ ಮುನ್ನ ಕೆಲವು ಕಡೆ ಮರಗಳು ಉರುಳಿವೆ. ಚರಂಡಿ, ತೋಡಿನಲ್ಲಿ ಹೂಳು ತೆಗೆಯುವ ಕಾರ್ಯವನ್ನು ಫೆಬ್ರವರಿ ತಿಂಗಳಲ್ಲಿಯೇ ಮಾಡಿದ್ದರೂ  ಕೆಲವು ಕಡೆ ಹೂಳು ಸರಿಯಾಗಿ ಹೋಗದೇ ರಸ್ತೆಯಲ್ಲೇ ನೀರು ಹರಿದಿದೆ. ಯುಜಿಡಿ ಪೈಪ್‌ಲೈನ್‌ ಅಳವಡಿಕೆಯ ಕಾಮಗಾರಿಗಾಗಿ ಅಗೆದ ರಸ್ತೆಯ ಹೊಂಡ ಮುಚ್ಚದ ಕಾರಣ ನೀರು ನಿಂತು ವಾಹನ ಚಾಲಕರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಈ ಎಲ್ಲ ಅಂಶಗಳು ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇದೆ.

ಪ್ರಥಮ ಹಂತ ಪೂರ್ಣ  
ಮಳೆಗಾಲಕ್ಕೆ ಮುನ್ನ ಅಂದರೆ ಫೆಬ್ರವರಿ ಯಲ್ಲಿಯೇ  ಒಳಚರಂಡಿ, ತೆರೆದ ಚರಂಡಿ, ತೋಡುಗಳ ಹೂಳೆತ್ತುವುದು, ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯಕ್ಕೆ  ಪುರಸಭೆ ಮುಂದಾಗಿತ್ತು.  ಅಲ್ಲದೇ ಅಪಾಯ ಸ್ಥಿತಿಯಲ್ಲಿರುವ ಮರ ಅಥವಾ ಅವುಗಳ ಗೆಲ್ಲುಗಳ ವಿಲೇವಾರಿ ಮಾಡುವುದೇ ಮೊದಲಾದ ಕಾಮಗಾರಿಯ ಪ್ರಥಮ ಹಂತವನ್ನು ಮುಗಿಸಿಕೊಂಡಿದೆ.

ಪುರಸಭೆ ತನ್ನ 23 ವಾರ್ಡುಗಳಲ್ಲಿ  ಚಿಕ್ಕ ಚಿಕ್ಕ ತೋಡುಗಳ ಹೂಳನ್ನು  ತೆಗೆಯುವ ಕಾರ್ಯವನ್ನು ಮಾಡಿದೆ ಯಾದರೂ ಯುಡಿಜಿ ಕಾಮಗಾರಿಯ ವೇಳೆ ಮತ್ತೆ ಹೂಳು ತುಂಬಿಕೊಂಡು ಈಗ  ಎರಡನೇ ಹಂತದ ಕಾಮಗಾರಿಯ ವೇಳೆ  ಪುನಃ ಹೂಳೆತ್ತಬೇಕಾದ ಪ್ರಮೇಯ ಬಂದಿದೆ.

ರಸ್ತೆಗಳಲ್ಲಿ  ಮ್ಯಾನ್‌ಹೋಲ್‌ಗ‌ಳ ಅಳವಡಿಕೆ 
ನಗರದ  ವಾರ್ಡುಗಳ ಅನೇಕ ರಸ್ತೆಯ ಮಧ್ಯೆಯಿರುವ ಮ್ಯಾನ್‌ಹೋಲ್‌ಗ‌ಳ ಕಾಮ ಗಾರಿ ಕೂಡ ಮಂದಗತಿಯಲ್ಲಿ ಸಾಗಿದೆ. ಇದು ಕೂಡ ವಾಹನ ಸಂಚಾರಕ್ಕೆ ತೊಂದರೆ ಯಾಗಿ ಪರಿಣಮಿಸಿದೆ.  ನಗರದ ಚಿಕನ್‌ಸಾಲ್‌ ರಸ್ತೆ., ಎಲ್‌.ಐ.ಸಿ. ರಸ್ತೆ, ಚರ್ಚ್‌ ರಸ್ತೆಗಳಲ್ಲಿ  ನೀರು ನಿಲ್ಲುವ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿದೆ. ಅಲ್ಲದೇ ಚಿಕನ್ಸಾಲ್‌ವ ರಸ್ತೆಯಲ್ಲಿ  ಮೊಬೈಲ್‌ ಕೇಬಲ್‌ಗ‌ಳನ್ನು ಅಳವಡಿಸುವಾಗ ಮಾಡಲಾದ ಹೊಂಡಗಳು ಇನ್ನು ಬಾಯೆ¤ರೆದುಕೊಂಡಿವೆ. 

ಪುರಸಭೆ ಈ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ  ಮಳೆಗಾಲದಲ್ಲಿ ಜನ ಸಾಮಾನ್ಯರು ಕಷ್ಟಪಡುವ ಸಾಧ್ಯತೆ ಇದೆ.

ಮಳೆಗಾಲದ ಪೂರ್ವ ಸಿದ್ಧತೆಯನ್ನು ಪುರಸಭೆ ಈಗಾಗಲೇ ಕಂಡುಕೊಂಡಿದ್ದು, ಪ್ರಥಮಹಂತದ  ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಂದು ಹಂತದ ಚರಂಡಿ ಕ್ಲೀನಿಂಗ್‌ ಕಾರ್ಯ ನಡೆಸಲಾಗಿದೆ. ಆದರೂ ಯುಜಿಡಿ ಕಾಮಗಾರಿ ನಡೆಯುತ್ತಿರುವುದರಿಂದ  ಮಳೆಗಾಲದ ಮುನ್ನ ಇನ್ನೊಮ್ಮೆ  ಚರಂಡಿ ಸ್ವತ್ಛತಾ ಕಾರ್ಯವನ್ನು ಮಾಡಲಾಗುತ್ತದೆ.  ದಾರಿದೀಪಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು, ಕೆಟ್ಟುಹೋದ ದೀಪಗಳ ಬದಲಿಗೆ ಹೊಸ ದೀಪಗಳನ್ನು ಅಳವಡಿಸುವ ಕಾರ್ಯ ನಡೆಸಲಾಗಿದೆ. ಅಪಾಯಕಾರಿ ಮರಗಳನ್ನು ಕಡಿಯಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಕಾರಿ ಮರಗಳನ್ನು ಕಡಿಯಲಾಗುವುದು. ಯುಡಿಜಿ ಕಾಮಗಾರಿಯ ವೇಳೆ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗ‌ಳನ್ನು ಅಳವಡಿಸಲಾಗುತ್ತಿರುವುದರಿಂದ ರಸ್ತೆಗಳನ್ನು ಅಗೆಯಲಾಗಿದ್ದು  ಅವುಗಳಿಗೆ ಕಾಂಕ್ರೀಟೀಕರಣವನ್ನು ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೇ ಮಳೆಗಾಲದ ವಿಪತ್ತು ಎದುರಿಸಲು  ಮತ್ತು ತುರ್ತು ಮಾಹಿತಿ ಸಂಗ್ರಹಿಸಲು ತುರ್ತು ಮಾಹಿತಿ ಕೌಂಟರನ್ನು ತೆರೆಯಲಾಗಿದ್ದು, ರಾತ್ರಿಯ ವೇಳೆಯಲ್ಲಿಯೂ ಈ ಕೌಂಟರ್‌ ಕಾರ್ಯನಿರ್ವಹಿಸಲಿದೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಕುಂದಾಪುರ ಪುರಸಭೆ

ಪುರಸಭಾ ವ್ಯಾಪ್ತಿಯಲ್ಲಿ  ಈ ಬಾರಿಯ ಮಳೆಗಾಲವನ್ನು ಎದುರಿಸಲು ಸಾಕಷ್ಟು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚರಂಡಿ ವ್ಯವಸ್ಥೆ ಸುಲಲಿತವಾಗಿಡಲು ಕಳೆದ ಬಾರಿ ನೀರು ಬ್ಲಾಕ್‌ ಆಗುತ್ತಿದ್ದ ಕಡೆಗಳಲ್ಲಿ ಸಿಮೆಂಟ್‌ ಪೈಪ್‌ ಅಳವಡಿಸಿ ನೀರು ಸರಾಗವಾಗಿ ಹೋಗುವಂತೆ ನೋಡಿಕೊಳ್ಳಲಾಗಿದೆ. ಸುಮಾರು 70 ಚರಂಡಿಗಳ ಸ್ವತ್ಛತಾ ಕಾಮಗಾರಿ ನಡೆದಿದ್ದು ಇನ್ನು ಸುಮಾರು 15-20 ಚರಂಡಿಗಳ ಕ್ಲೀನಿಂಗ್‌ ಕೆಲಸ ವಾಗಬೇಕಾಗಿದೆ. ಯುಜಿಡಿ ಕಾಮಗಾರಿಯ ವೇಳೆ ಅಗೆದು ಹಾಕಲಾದ ರಸ್ತೆಗಳನ್ನು  ಶೀಘ್ರವಾಗಿ ಮುಚ್ಚಿ ರಸ್ತೆಯನ್ನು ಸಿದ್ಧಪಡಿಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮಳೆಗಾಲದ ಆಪತ್ತುಗಳನ್ನು ಎದುರಿಸಲು ಪುರಸಭೆ ಸರ್ವಸನ್ನದ್ಧವಾಗಲಿದೆ.
-ವಸಂತಿ ಮೋಹನ ಸಾರಂಗ,  ಅಧ್ಯಕ್ಷರು,  ಪುರಸಭೆ ಕುಂದಾಪುರ

– ಉದಯ ಆಚಾರ್‌ ಸಾಸ್ತಾನ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.