ಹೆಜಮಾಡಿ : ನಿಂತಿದ್ದ ಟ್ಯಾಂಕರ್ ಗೆ ಸ್ಕೂಟಿ ಡಿಕ್ಕಿ ಹೊಡೆದು ಕೊಡವೂರಿನ ಯುವಕನ ದಾರುಣ ಸಾವು
ಹೆಜಮಾಡಿ ಟೋಲ್ ಕಾನೂನು ಬಾಹಿರ ವಾಹನ ನಿಲುಗಡೆ
Team Udayavani, Apr 21, 2022, 8:48 PM IST
ಪಡುಬಿದ್ರಿ : ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾ ಬಳಿ ಟೋಲ್ ಕಂಪನಿಯ ಆದೇಶ ಧಿಕ್ಕರಿಸಿ ಬೃಹತ್ ವಾಹನಗಳು ರಸ್ತೆ ಮಧ್ಯೆ ನಿಲುಗಡೆಯಾಗುತ್ತಿರುವುದರಿಂದ ಗುರುವಾರ ಮಧ್ಯಾಹ್ನ ದ್ವಿಚಕ್ರ ವಾಹನವೊಂದು ರಸ್ತೆ ಮಧ್ಯದಲ್ಲೇ ಹಠಾತ್ ನಿಲ್ಲಿಸಿದ ಬುಲೆಟ್ ಟ್ಯಾಂಕರ್ ಗೆ ಹಿಂದಿನಿಂದ ಸ್ಕೂಟಿ ಢಿಕ್ಕಿ ಹೊಡೆದ ಪರಿಣಾಮ ಮಲ್ಪೆ ಕೊಡವೂರು ನಿವಾಸಿ ಮಹೇಶ್(27) ತೀವ್ರ ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ.
ಗುರುವಾರ ತನ್ನ ಹೋಂಡಾ ಆಕ್ಟಿವಾ ವಾಹನದಲ್ಲಿ ಮಂಗಳೂರಿಗೆ ತೆರಳಿದ್ದ ಅವರು, ಅಲ್ಲಿ ಸ್ನೇಹಿತರ ಜತೆ ಬಟ್ಟೆಗಳನ್ನು ಖರೀದಿಸಿ ವಾಪಾಸು ಮಲ್ಪೆಗೆ ಹಿಂತಿರುತ್ತಿದ್ದ ಸಂದರ್ಭ ಹೆಜಮಾಡಿಯ ಟೋಲ್ ಪ್ಲಾಝಾದ ಉತ್ತರ ದಿಕ್ಕಿನಲ್ಲಿ ಹೆಜಮಾಡಿ ದೇವಳದ ದ್ವಾರದ ಮುಂಭಾಗ ಕಾನೂನು ಬಾಹಿರವಾಗಿ ನಿಲುಗಡೆಗೊಳಿಸಲಾಗಿದ್ದ ಬುಲೆಟ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿತ್ತು. ಅವಿವಾಹಿತರಾಗಿದ್ದ ಅವರು ಮಲ್ಪೆ ಬಂದರಿನಲ್ಲಿ ಕನ್ನಿ ಪಾರ್ಟಿಯಲ್ಲಿ ದುಡಿಯುತ್ತಿದ್ದರು ಎನ್ನಲಾಗಿದೆ.
ಅನಧಿಕೃತ ಗೂಡಂಗಡಿಗಳೂ ಕಾರಣ
ಟೋಲ್ ಪ್ಲಾಝಾದ ಎರಡೂ ಬದಿಯ ನಾಲ್ಕು ಕಡೆಗಳಲ್ಲಿ ಸಾಲು ಸಾಲು ಅನಧಿಕೃತ ಗೂಡಂಗಡಿಗಳಿವೆ. ಇದರ ಪೈಕಿ ಹೆಚ್ಚಿನ ಅಂಗಡಿಗಳು ಕೇರಳ ಮೂಲದವರದ್ದು. ಹಲವು ಬಾರಿ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆದರೂ ರಾಜಕೀಯ ಒತ್ತಡಗಳಿಂದ ತೆರವು ಕಾರ್ಯಚರಣೆ ಅಸಾಧ್ಯವಾಗಿತ್ತು. ಘನ ವಾಹನಗಳು ನಿತ್ಯ ಟೋಲ್‌ಗೆ ಅಡ್ಡವಾಗಿ ಸಾಲು ಸಾಲಾಗಿ ನಿಲುಗಡೆಗೊಳಿಸುತ್ತಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ದಿನಗಳ ಹಿಂದೆ ಟೊಲ್ ಪ್ಲಾಝಾದವರೇ ವಾಹನ ನಿಲುಗಡೆ ಬಗೆಗೆ ತಗಾದೆ ಎತ್ತಿದಾಗ ಓರ್ವ ಲಾರಿ ಚಾಲಕ ರಾಡ್ ಹಿಡಿದು ಬೆದರಿಸಿದ್ದ. ಕೆಲವು ಬಾರಿ ಇಲ್ಲಿ 100ಕ್ಕೂ ಅಧಿಕ ಲಾರಿಗಳು ನಿಲುಗಡೆಗೊಳಿಸುತ್ತದೆ. ಕೆಲವು ಲಾರಿಗಳಂತೂ ವಾರಗಟ್ಟಲೇ ಇಲ್ಲೇ ನಿಲ್ಲುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸರ್ಕಾರದ ವೈಫಲ್ಯ, ಕೋಮು ದ್ವೇಷ ಜನತೆಗೆ ತಿಳಿಸಿ : ಕಾರ್ಯಕರ್ತರಿಗೆ ಡಿಕೆಶಿ ಸಲಹೆ
ಟೋಲ್ ಪ್ಕಾಝಾ ಸ್ಪಂದನೆ : ಗುರುವಾರದ ಅಪಘಾತದ ಬಳಿಕ ಎಚ್ಚೆತ್ತ ಟೋಲ್ ಪ್ಲಾಝಾದ ಅಧಿಕಾರಿ ವರ್ಗ ಜಿಲ್ಲಾಡಳಿತದ ಸಹಕಾರದೊಂದಿಗೆ ಶುಕ್ರವಾರದಿಂದಲೇ ಅನಧಿಕೃತ ಗೂಡಂಗಿಗಳ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪಡುಬಿದ್ರಿ ಪೊಲೀಸರು ಬಲೆಟ್ ಟ್ಯಾಂಕರ್ ಚಾಲಕ ಕಾರ್ತಿಕೇಯನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.