Hubballi: ಭೀಕರ ಅಪಘಾತ… ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತ್ಯು, ದೇಹಗಳು ಛಿದ್ರ
ಒಬ್ಬರು ಪಂಡರಾಪುರ ಕ್ಷೇತ್ರ ದರ್ಶನ ಮಾಡಿ ಬಂದಿದ್ದರು, ಕರಾವಳಿ ಮೂಲದ ಇಬ್ಬರ ಸಾವು
Team Udayavani, Oct 15, 2024, 1:05 PM IST
ಹುಬ್ಬಳ್ಳಿ/ಮೂಲ್ಕಿ: ಮಂಗಳವಾರ ಮುಂಜಾನೆ ಹುಬ್ಬಳ್ಳಿಯ ಹೊರವಲಯದ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಗೋಕುಲ ಗ್ರಾಮ ಸಮೀಪದ ಧಾರಾವತಿ ಹನುಮಾನ ಮಂದಿರ ಬಳಿಯ ಹೆದ್ದಾರಿಯಲ್ಲಿ ಸ್ಕೂಟರ್‌ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಅಪಘಾತದಲ್ಲಿ ಕರಾವಳಿಯ ಇಬ್ಬರು ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರು ಮೂಲ್ಕಿಯ ಕೊಲಕಾಡಿ ಮೂಲದವರು ಹಾಗೂ ಮತ್ತೂಬ್ಬರು ಉಡುಪಿಯ ಎಲ್ಲೂರಿನವರು.
ಬೆಂಗಳೂರು ಕಮ್ಮಗೊಂಡನಹಳ್ಳಿ (ಕೆಜಿ ಹಳ್ಳಿ) ರಾಘವೇಂದ್ರ ಲೇಔಟ್ ಸಾಬೂನು ಫ್ಯಾಕ್ಟರಿ ಬಳಿ ನಿವಾಸಿ, ಮೂಲತಃ ಮೂಲ್ಕಿ ಕೊಲಕಾಡಿಯ ಸಾಫ್ಟ್ ವೇರ್ ಎಂಜಿನಿಯರ್ ಗೋಪಾಲಕೃಷ್ಣ ಗುರುರಾಜ ಉಪಾಧ್ಯಾಯ (45) ಹಾಗೂ ಅವರ ಸ್ನೇಹಿತ ಎಲ್ಲೂರು ಮೂಲದ ಧಾರವಾಡ ವಿದ್ಯಾಗಿರಿ ಲಕ್ಷ್ಮೀನಗರ ಮೆಣಸಿನಕಾಯಿ ಕಾಂಪೌಂಡ್ ನಿವಾಸಿ ಸದಾನಂದ ವಾಸುದೇವ ದೇವಾಡಿಗ (52) ಮೃತರು. ಗೋಪಾಲಕೃಷ್ಣ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದಾರೆ. ಸದಾನಂದ ಅವರು ಹುಬ್ಬಳ್ಳಿಯಲ್ಲಿ ಕ್ಯಾಟರಿಂಗ್ ವ್ಯವಹಾರ ಮಾಡುತ್ತಿದ್ದರು.
ದೇವರ ದರ್ಶನ ಮುಗಿಸಿ ಮರಳುತ್ತಿದ್ದರು
ತಮ್ಮ ಸಹೋದರ ಜೋತಿಷಿ ವಾದಿರಾಜ ಉಪಾಧ್ಯಾಯ ಅವರು ಮೂಲ್ಕಿಯಿಂದ ಸುಮಾರು 44 ಜನ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸೇರಿ ಪಂಡರಾಪುರ ಕ್ಷೇತ್ರ ದರ್ಶನ ಯಾತ್ರೆಗೆ ಹೋಗುವಾಗ ಬೆಂಗಳೂರಿನಲ್ಲಿದ್ದ ಗೋಪಾಲಕೃಷ್ಣ ಅವರು ಬೆಂಗಳೂರಿನಿಂದ ಹುಬ್ಬಳ್ಳಿಯ ತನಕ ಕಾರಿನಲ್ಲಿ ಬಂದು ಮೂಲ್ಕಿಯಿಂದ ಬಂದಿರುವವರನ್ನು ಸೇರಿಕೊಂಡು ಒಟ್ಟಿಗೆ ಪ್ರಯಾಣಿಸಿ ಯಾತ್ರೆ ಮುಗಿಸಿದ್ದರು. ಗೋಪಾಲಕೃಷ್ಣ ಅವರು ಕಾರನ್ನು ನಗರದ ಈದ್ಗಾ ಮೈದಾನದ ಸಮೀಪದ ಮನೆಯಲ್ಲಿ ನಿಲ್ಲಿಸಿದ್ದರು. ಯಾತ್ರೆಯಿಂದ ವಾಪಸ್ಸು ಬಂದು ಬಸ್ಸಿನಿಂದ ಇಳಿದು ಸ್ನೇಹಿತನ ಜತೆಗೆ ಅವರ ಕಾರು ಇದ್ದ ಮನೆಗೆ ಸ್ಕೂಟರ್ ಮೂಲಕ ಹೋಗುವಾಗ ಅವಘಡ ಸಂಭವಿಸಿದೆ.
ಅಪರಿಚಿತ ವಾಹನ ಢಿಕ್ಕಿ
ಮಂಗಳವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಪಂಡರಾಪುರದಿಂದ ಹುಬ್ಬಳ್ಳಿಗೆ ಬಸ್ ಬಂದಾಗ ಗೋಪಾಲಕೃಷ್ಣ ಅವರು ಕಾರು ಇರಿಸಿದ್ದ ಸದಾನಂದ ಅವರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದರು. ಅದರಂತೆ ಅವರು ಸ್ಕೂಟರ್‌ನಲ್ಲಿ ಬಂದು ಗೋಪಾಲಕೃಷ್ಣ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದು ಇಬ್ಬರೂ ದುರ್ಮರಣಕ್ಕೀಡಾಗಿದ್ದಾರೆ. ಢಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ.
ರಸ್ತೆಯಲ್ಲಿ ಬಿದ್ದಿದ್ದರು
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ರಸ್ತೆಯಲ್ಲಿ ಬಿದ್ದಿದ್ದು, ಅವರ ಮೇಲೆ ಇತರ ವಾಹನಗಳು ಚಲಿಸಿರಬಹುದೆಂದು ಶಂಕಿಸ ಲಾಗಿದೆ. ಯಾತ್ರೆಗೆ ತೆರಳಿದ್ದ ಬಸ್ ಗೋಪಾಲಕೃಷ್ಣ ಅವರನ್ನು ಹುಬ್ಬಳ್ಳಿಯಲ್ಲಿ ಇಳಿಸಿದ ಬಳಿಕ ಮೂಲ್ಕಿಯತ್ತ ಬರುತ್ತಿದ್ದ ಸಂದರ್ಭ ಪೊಲೀಸರು ಬಸ್ಸಿನಲ್ಲಿದ್ದವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಆಗ ಅವರ ಬಸ್ ಅಂಕೋಲಾ ತಲುಪಿತ್ತು. ಸುದ್ದಿ ತಿಳಿದ ಕೂಡಲೇ ಬಸ್ಸಿನಲ್ಲಿದ್ದ ಕೆಲವರು ಮತ್ತೆ ಹುಬ್ಬಳಿಗೆ ಪ್ರಯಾಣಿಸಿ ಮಧ್ಯಾಹ್ನದ ಹೊತ್ತಿಗೆ ಅಲ್ಲಿಗೆ ತಲುಪಿದ್ದಾರೆ. ಗೋಪಾಲಕೃಷ್ಣ ಉಪಾಧ್ಯಾಯ ಅವರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅವರು ಮೂಲ್ಕಿಯ ಪರಿಸರದಲ್ಲಿ ಬಾಲ್ಯವನ್ನು ಕಳೆದಿದ್ದರು. ಸದಾನಂದ ದೇವಾಡಿಗ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.