Road Mishap ಪಡುಬಿದ್ರಿ; ಬುಲೆಟ್ ಬೈಕ್ ಅಪಘಾತ: ಇಬ್ಬರಿಗೆ ಗಾಯ
Team Udayavani, May 12, 2024, 10:05 PM IST
ಪಡುಬಿದ್ರಿ: ರವಿವಾರ ಸಂಜೆಯ ವೇಳೆ ಮಂಗಳೂರು ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಬುಲೆಟ್ ಬೈಕೊಂದು ಎರ್ಮಾಳು ತೆಂಕದಲ್ಲಿ ರಸ್ತೆ ಬದಿಯ ಸೂಚನ ಫಲಕಕ್ಕೆ ಢಿಕ್ಕಿಯಾಗಿ ಚಾಲಕ ಮಂಡ್ಯದ ನೂತನ್ ಹಾಗೂ ಹಿಂಬದಿ ಸವಾರ ಮಂಡ್ಯದವರೇ ಆದ ಸೃಜನ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಸಮೀಪದ ಬಿಡದಿಯ ಕಂಪೆನಿಯೊಂದರಲ್ಲಿ ದುಡಿಯುತ್ತಿರುವ ಆರು ಮಂದಿ ಸ್ನೇಹಿತರು ಮೂರು ಬೈಕ್‌ಗಳಲ್ಲಿ ಶನಿವಾರ ಸಂಜೆ 3 ಗಂಟೆಗೆ ತೀರ್ಥಕ್ಷೇತ್ರಗಳ ಸಂದರ್ಶನಕ್ಕೆಂದು ಹೊರಟು ಬಂದಿದ್ದರು. ಈ ಸ್ನೇಹಿತರು ಧರ್ಮಸ್ಥಳಕ್ಕೆ ರಾತ್ರಿ 12 ಗಂಟೆಗೆ ತಲುಪಿದ್ದು, ಅನಂತರ ವಿಶ್ರಾಂತಿ ಪಡೆದು ದೇವರ ದರ್ಶನ ಮುಗಿಸಿ ಕಟೀಲಿಗೆ ಬಂದು ಅನಂತರ ಉಡುಪಿಯತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸವಾರರಿಬ್ಬರೂ ಬುಲೆಟ್‌ನಿಂದ ಹಲವು ಅಡಿ ದೂರಗಳಷ್ಟು ಎಸೆಯಲ್ಪಟ್ಟಿದ್ದರು. ನೂತನ್ ಕಾಲಿಗೆ ತೀವ್ರತರ ಏಟು ಬಿದ್ದಿದೆ. ಸೃಜನ್‌ನ ಮುಖ, ಕಿವಿ, ತಲೆಗೆ ತೀವ್ರ ಗಾಯಗಳಾಗಿದ್ದು ಈರ್ವರನ್ನೂ ಸಾರ್ವಜನಿಕರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.