Road Mishap ಶಿರ್ವ: ವಾಹನ ಢಿಕ್ಕಿ; ಸವಾರನಿಗೆ ಗಾಯ
Team Udayavani, Dec 1, 2023, 11:05 PM IST
ಶಿರ್ವ: ಇಲ್ಲಿನ ಮುಖ್ಯರಸ್ತೆಯ ಹನುಮಾನ್ ಟಯರ್ ಅಂಗಡಿ ಬಳಿ ಶಿರ್ವ ಪೇಟೆಯಿಂದ ಪದವು ಕಡೆಗೆ ಹೋಗುತ್ತಿದ್ದ ಬೈಕ್ಗೆ ಒಳರಸ್ತೆಯಿಂದ ಮುಖ್ಯರಸ್ತೆಗೆ ಬಂದ ಕಾಂಕ್ರೀಟ್ ರೆಡಿಮಿಕ್ಸ್ ವಾಹನ ನ. 30ರಂದು ಢಿಕ್ಕಿ ಹೊಡಿದಿದೆ.
ಅಪಘಾತದಿಂದ ಬೈಕ್ ಸವಾರ ಮೊಹಮ್ಮದ್ ಫಾರೂಕ್ ಗಾಯಗೊಂಡಿದ್ದಾರೆ.
ಅವರಿಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.