ಪಿತ್ರೋಡಿ ಸಂಪರ್ಕ ರಸ್ತೆ: ಸಂಚಾರ ಸಂಕಷ್ಟ
Team Udayavani, Sep 13, 2018, 4:45 AM IST
ಪಡುಬಿದ್ರಿ: ಉದ್ಯಾವರ ಪೇಟೆಯಿಂದ ಪಿತ್ರೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹೊಂಡ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತ ಕ್ರಮಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಸುಮಾರು 2.5 ಕಿ.ಮೀ.ಗೂ ದೂರದ ಈ ಸಂಪರ್ಕ ರಸ್ತೆಯಲ್ಲಿ ಉದ್ಯಾವರ ಪೇಟೆಯ ಆರಂಭದಲ್ಲಿಯೇ ರಸ್ತೆಯಲ್ಲಿ ಹೊಂಡ ಬಿದ್ದಿವೆ. ಕೆಲವೆಡೆ ರಸ್ತೆಯ ಹೊಂಡಗಳು ಅಪಾಯಕಾರಿಯಾಗಿ ಮಾರ್ಪಾಟಾಗಿವೆ. ಇದರಿಂದ ರಿಕ್ಷಾ, ದ್ವಿಚಕ್ರ ವಾಹನ ಸಹಿತ ಲಘು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆ ನಿರ್ವಹಣೆ ಬಗ್ಗೆ ಗ್ರಾಮಸಭೆಯಲ್ಲೂ ಪ್ರಸ್ತಾವವಾಗಿದ್ದರೂ ಯಾವುದೇ ಇಲಾಖಾ ಅಧಿಕಾರಿಗಳು ಸ್ಪಂದಿಸಿಲ್ಲ. ಹೆಚ್ಚಿನ ವಾಹನ ಸಂಚಾರ ಮತ್ತು ಜನಸಂಚಾರವನ್ನು ಹೊಂದಿರುವ ಪ್ರದೇಶ ಇದಾಗಿದ್ದು ಕೂಡಲೇ ರಸ್ತೆ ಸರಿಪಡಿಸಬೇಕೆನ್ನುವ ಆಗ್ರಹ ಇದೆ. ವಿವಿಧ ಕಚೇರಿಗಳಿಗೆ ಸಂಪರ್ಕ ಮತ್ತು ನಿತ್ಯ 8 ಬಸ್ಸುಗಳು ನಿಗದಿತ ಸಮಯಗಳಲ್ಲಿ ಅರ್ಧಗಂಟೆಗೊಮ್ಮೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರೂ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಕಾಂಕ್ರೀಟ್ ಭಾಗವೂ ಹೊಂಡ ಬಿದ್ದಿದೆ.
ಶೀಘ್ರ ರಸ್ತೆ ದುರಸ್ತಿಗೆ ಪ್ರಯತ್ನ
ರಸ್ತೆ ದುಃಸ್ಥಿತಿ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಮೀನುಗಾರಿಕೆ ಇಲಾಖೆ ಗಮನಕ್ಕೆ ತರಲಾಗಿದೆ. ಶೀಘ್ರ ರಸ್ತೆ ದುಃಸ್ಥಿತಿಗೆ ಹೆಚ್ಚಿನ ಪ್ರಯತ್ನ ಮಾಡುತ್ತೇವೆ.
– ರಮಾನಂದ ಪುರಾಣಿಕ್, ಪಿ.ಡಿ.ಒ. ಉದ್ಯಾವರ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.