ಕುಳ್ಳುಂಜೆ ಅಬ್ಯಾಡಿ ಮಾರ್ಗದ ಬೇಡಿಕೆ ಈಡೇರಲೇ ಇಲ್ಲ
Team Udayavani, Jun 6, 2018, 6:00 AM IST
ಕುಂದಾಪುರ: ಊರಿಗೆ ಸಂಪರ್ಕ ರಸ್ತೆ ಇಂದಾಗುತ್ತದೆ, ನಾಳೆ ಆಗುತ್ತದೆ ಎಂದು ಜನ ಜನ ಚಾತಕ ಪಕ್ಷಿಯಂತೆ ಕಾದದ್ದೇ ಬಂತು. ರಸ್ತೆ ಮಾತ್ರ ಆಗಲೇ ಇಲ್ಲ. ಈ ಮಳೆಗಾಲದಲ್ಲೂ ಜನರ ಬವಣೆ ತಪ್ಪದು. ಇದು ಕುಳ್ಳುಂಜೆ ಅಬ್ಯಾಡಿ ಮಾರ್ಗದ ರಸ್ತೆ ಸಮಸ್ಯೆ. ಶಂಕರನಾರಾಯಣ ಪದವಿಪೂರ್ವ ಕಾಲೇಜು ಬದಿಯ ಕುಳ್ಳುಂಜೆ ಕಲ್ಮಕ್ಕಿ ರಸ್ತೆಯಲ್ಲಿ ಸಾಗಿದರೆ ಈ ರಸ್ತೆ ಸಿಗುತ್ತದೆ. ಕುಳ್ಳುಂಜೆ ಬದಿ ಸುಮಾರು 40 ಮನೆ, ಅಬ್ಯಾಡಿ ಕಡೆ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಮಳೆಗಾಲ ಆರಂಭವಾದರೆ ಸಾಕು ಇಲ್ಲಿನವರಿಗೆ ಸಮಸ್ಯೆ ತಪ್ಪಿದ್ದಲ್ಲ.
ಮಳೆಗಾಲದಲ್ಲಿ ಯಾವುದೇ ವಾಹನ ಹೋಗದ ರೀತಿ ಹದಗೆಡುವ ಈ ರಸ್ತೆಯಲ್ಲಿ ಯಾರೂ ಬರಲೊಲ್ಲರು. ಶಾಲಾ ಮಕ್ಕಳಿಗೆ, ಹಿರಿಯರಿಗೆ ನಿತ್ಯದ ಓಡಾಟಕ್ಕೆ ಕಷ್ಟ. ಈ ವಠಾರದಲ್ಲಿ ಸಾಕಷ್ಟು ಹೈನುಗಾರರಿದ್ದು ಅವರಿಗೆ ನಿತ್ಯ ಸಾಗಾಟಕ್ಕೆ ಸಮಸ್ಯೆಯಾಗಿದೆ. ಈ ರಸ್ತೆಯ ದುರಸ್ತಿಗೆ ಅದೆಷ್ಟೋ ಸಮಯ ದಿಂದ ಬೇಡಿಕೆ ಇದ್ದರೂ ಈಡೇರಲೇ ಇಲ್ಲ. ವಾರಾಹಿ ಕಾಲುವೆ ಪಕ್ಕದಲ್ಲೇ ಈ ರಸ್ತೆ ಇದ್ದು, ಕಾಲುವೆ ಕಾಮಗಾರಿ ವೇಳೆ ದುರಸ್ತಿ ನಡೆದೀತು ಎಂದು ಗ್ರಾಮಸ್ಥರು ಆಶಾವಾದ ಹೊಂದಿದ್ದರೂ ಅದೂ ಈಡೇರಿಲ್ಲ.
ಶಾಸಕರಿಗೆ ಮನವಿ
ಸಾಕಷ್ಟು ಬಾರಿ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈ ಭಾಗದ ಜನರ ಬೇಡಿಕೆ ಯಾವಾಗ ಈಡೇರುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವ ಸ್ಥಿತಿ ಬಂದಿದೆ.
ನರಸಿಂಹ ನಾೖಕ್, ಕುಳ್ಳುಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.