ಹದಗೆಟ್ಟಿದೆ ಕೊಂಡಳ್ಳಿ ಕ್ರೋಢಬೈಲೂರು ರಸ್ತೆ
Team Udayavani, Jun 22, 2018, 3:40 AM IST
ವಿಶೇಷ ವರದಿ – ಕುಂದಾಪುರ: ಅಂಪಾರು ಸಮೀಪದ ಕೊಂಡಳ್ಳಿ ಕ್ರೋಢಬೈಲೂರು ರಸ್ತೆ ಹದಗೆಟ್ಟಿದ್ದು ಮಳೆಗಾಲದ ಈ ಸಂದರ್ಭ ಅಧ್ವಾನವಾಗಿದೆ. ಹೊಂಡಬಿದ್ದ ರಸ್ತೆಯಲ್ಲಿ ಓಡಾಟ ವಾಹನ ಸವಾರರು ಹಾಗೂ ಊರವರಿಗೆ ಸಂಕಷ್ಟ ತಂದಿದೆ.
ಡಾಮರಿಲ್ಲ
ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ರಸ್ತೆ ಸುಮಾರು 3 ಕಿಮೀ. ಇದ್ದು ಎಂಟು ವರ್ಷಗಳ ಹಿಂದೆ ಮರು ಡಾಮರು ಭಾಗ್ಯ ಕಂಡಿದೆ. ಅದರ ನಂತರ ಈ ಕಡೆಗೆ ಡಾಮರೀಕರಣಕ್ಕೆ ಅನುದಾನ ಮಂಜೂರಾಗಿಲ್ಲ. ಹಾಕಿದ ಡಾಮರು ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆಯಲ್ಲಿ ಬಿದ್ದ ಹೊಂಡಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು, ನೀರು ತುಂಬಿದ ಹೊಂಡಗಳಿಂದಾಗಿ ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೊಂಡಳ್ಳಿಯಲ್ಲಿ ಬಸ್ ನಿಲ್ದಾಣವಿದ್ದು ಬೈಲೂರಿಗೆ ರಸ್ತೆ ಮುಗಿಯುತ್ತದೆ. ನಂತರ ಹೊಳೆಯಿದೆ.
ಕಾಲನಿಗಳಿವೆ
ಜನತಾ ಕಾಲನಿ, ಆಶ್ರಯ ಕಾಲನಿ, ನೂಜಿ, ನಾಯ್ಕರಬೆಟ್ಟು ಎಂದು ಈ ಭಾಗದಲ್ಲಿ ಪರಿಶಿಷ್ಟರ ಕಾಲನಿ ಮನೆಗಳಿವೆ. ಕಾಡುಪ್ರಾಣಿಗಳು ರಸ್ತೆ ದಾಟುವ ಕಾರಣ ಒಬ್ಬಿಬ್ಬರು ವಾಹನದಲ್ಲಿ ಓಡಾಡಲು ಭಯವಾಗುತ್ತದೆ. ಹಾಗಿರುವಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದ್ದರೆ ಅನುಕೂಲ. ರಸ್ತೆ ಸಮಸ್ಯೆ ಸರಿ ಮಾಡದೇ ಇದ್ದರೆ ರಿಕ್ಷಾಗಳ ಚಾಲಕರು ಬಾಡಿಗೆಗೆ ಬರಲು ಒಪ್ಪುತ್ತಿಲ್ಲ. ಬಂದರೂ ಮರಳಿ ಹೋಗಲು ರಾತ್ರಿ ಸಂಚಾರ ಅವರಿಗೂ ಕಷ್ಟ. ಮಳೆಗಾಲ ಆರಂಭವಾದ ಹಿನ್ನೆಲೆ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದ್ದು, ರಿಕ್ಷಾ ಚಾಲಕರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ. ಈ ಬಗ್ಗೆ ತುರ್ತು ಗಮನ ಹರಿಸುವ ಅಗತ್ಯವಿದೆ.
ಬಾಡಿಗೆ ವಾಹನಗಳೇ ಗತಿ
ಈ ರಸ್ತೆ ನೂರಾರು ಮನೆಗಳು, ಶಾಲೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಇಲ್ಲಿ ಕೇವಲ 1 ಸರಕಾರಿ ಬಸ್ಸಿದೆ. ಕ್ರೋಢಬೈಲೂರಿನಲ್ಲಿ 8ನೇ ತರಗತಿವರೆಗೆ ಸರಕಾರಿ ಶಾಲೆ ಇದೆ. ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕು. ಕೊಂಡಳ್ಳಿಯಿಂದ 40 ರೂ., ಅಂಪಾರಿನಿಂದ 80 ರೂ., ಶಂಕರನಾರಾಯಣದಿಂದ 150 ರೂ. ರಿಕ್ಷಾ ಬಾಡಿಗೆ ಆಗುತ್ತದೆ. ಜನಸಾಮಾನ್ಯರಿಗೆ ಇದು ಹೊರೆಯಾಗಿದೆ. ಆದ್ದರಿಂದ ಸರಕಾರಿ ಬಸ್ಸಿನ ಓಡಾಟ ಹೆಚ್ಚಿಸಬೇಕೆಂಬ ಮನವಿ ಇದೆ.
ಸಂಜೆ ಬಳಿಕ ಓಡಾಡುವಂತಿಲ್ಲ
ಸಂಜೆ ನಂತರ ಒಬ್ಬಿಬ್ಬರು ಓಡಾಡುವಂತಿಲ್ಲ. ರಿಕ್ಷಾಗಳು ಬಾಡಿಗೆ ತಂದರೆ ದೊಡ್ಡ ಮೊತ್ತದ ಬಾಡಿಗೆ ಪಾವತಿ ನಮಗೆ ಕಷ್ಟ . ಆದ್ದರಿಂದ ರಸ್ತೆ ದುರಸ್ತಿಗೊಳಿಸಿ ಸಾರ್ವಜನಿಕ ಬಸ್ಸಿನ ಸಂಖ್ಯೆ ಹೆಚ್ಚಿಸಬೇಕು ಎನ್ನುವುದೇ ನಮ್ಮ ಬೇಡಿಕೆ.
– ಮುತ್ತ, ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.