ಉಡುಪಿ: ಕುಂಜಿಬೆಟ್ಟಿನಲ್ಲಿ ರಸ್ತೆ ವಿಸ್ತರಣೆ ಕಾರ್ಯ
Team Udayavani, Oct 12, 2018, 6:00 AM IST
ಉಡುಪಿ: ಪರ್ಕಳದ ದೇವಿನಗರದಿಂದ ಕರಾವಳಿ ಜಂಕ್ಷನ್‌ವರೆಗಿನ 10 ಕಿ.ಮೀ. ದೀರ್ಘದ ರಾ.ಹೆ 169ಎ ರಸ್ತೆ ವಿಸ್ತರಣೆ ಯೋಜನೆಯಲ್ಲಿ ಬುಧವಾರ ಎಂಜಿಎಂ ಕಾಲೇಜಿನ ಬಳಿ ಕುಂಜಿಬೆಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ.
ಈಗಿನ ಡಾಮರು ರಸ್ತೆಯನ್ನು ತೆಗೆದು ಒಟ್ಟು 30 ಮೀ. ಅಗಲಗೊಳಿಸುವ ಕೆಲಸ ನಡೆಯುತ್ತಿದೆ. ಪ್ರತಿ 500 ಮೀ. ಉದ್ದದ ರಸ್ತೆಯನ್ನು ಮಾಡುತ್ತ ಕಾಮಗಾರಿಯನ್ನು ಮುಂದು ವರಿಸಲಾಗುವುದು. ಕಲ್ಸಂಕದಿಂದ ಮಣಿಪಾಲಕ್ಕೆ ಹೋಗಿ ಬರುವವರಿಗೆ ಅವಕಾಶ ನೀಡಲಾಗಿದೆಯಾದರೂ ವಾಹನ ನಿಬಿಡತೆ ಉಂಟಾಗದೆ ಇರಲು ಕಲ್ಸಂಕದಿಂದ ದೊಡ್ಡಣಗುಡ್ಡೆ ಮೂಲಕ ಮಣಿಪಾಲಕ್ಕೆ ತೆರಳಬಹುದು ಎಂದು ವಿನಂತಿಸಲಾಗಿದೆ.
ತೀರ್ಥಹಳ್ಳಿಯಿಂದ ಮಲ್ಪೆ ವರೆಗಿನ 90 ಕಿ.ಮೀ. ರಸ್ತೆಯನ್ನು 30 ಮೀಟರ್ ಅಗಲಗೊಳಿಸುವ ಕಾಂಕ್ರಿಟ್ ರಸ್ತೆ ಕಾಮಗಾರಿ ಇದಾಗಿದೆ. 98.46 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. 30 ಮೀ. ಅಗಲದ ರಸ್ತೆಯ ಎರಡು ಕಡೆಯ 1 ಮೀ. ರಸ್ತೆಯನ್ನು ಇತರ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ಪೈಪ್‌ಲೈನ್, ಆಪ್ಟಿಕಲ್ ಕೇಬಲ್, ಟೆಲಿಫೋನ್ ತಂತಿ ಅಳವಡಿಕೆಯಾಗಲಿದೆ. ಉಳಿದ 28 ಮೀ.ನಲ್ಲಿ 1.5 ಮೀ. ಅಗಲದ ರಸ್ತೆ ವಿಭಾಜಕ, ಎರಡು ಕಡೆಗಳಲ್ಲಿ 2 ಮೀ. ಅಗಲದ ಪಾದಚಾರಿ ಮಾರ್ಗ, 1.5 ಮೀ. ಅಗಲದ ಚರಂಡಿ, 9.5 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.