ಮಳೆಗಾಲದಲ್ಲಿ ಅಂಗಳಕ್ಕೇ ನುಗ್ಗುವ ರಸ್ತೆಯ ನೀರು!
Team Udayavani, Jun 11, 2018, 6:00 AM IST
ಕುಂದಾಪುರ: ಮದ್ದುಗುಡ್ಡೆ ವಾರ್ಡ್‌ನಲ್ಲಿ ಮಳೆಗಾಲ ಬಂದಾಗ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುವುದು ಮಾತ್ರವಲ್ಲ, ಇಲ್ಲಿನ ಮನೆಗಳಿಗೂ ನುಗ್ಗುತ್ತದೆ. ಕಾರಣ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ಇಲ್ಲ.
ರಸ್ತೆ ಎತ್ತರದಲ್ಲಿ, ಮನೆಗಳು ತಗ್ಗಿನಲ್ಲಿ
ಮುಖ್ಯ ರಸ್ತೆಯಿಂದ ನಾರಾಯಣ ಗುರು ರಸ್ತೆಯಾಗಿ ಮುಂದೆ ಹೋದಂತೆ ಉತ್ತಮ ಕಾಂಕ್ರೀಟ್ ರಸ್ತೆ ಇದೆ. ಆದರೆ ಮೂಲಕ ಸಾಗಿದಾಗ ಮುಂದೆ ಮುಂದೆ ಹೋದಂತೆ ಉತ್ತಮ ಕಾಂಕ್ರೀಟ್ ರಸ್ತೆಯಿದೆ. ಆದರೆ ರಸ್ತೆ ಎತ್ತರದಲ್ಲಿದ್ದು ಮನೆಗಳು, ಅಂಗಳ ತಗ್ಗಿನಲ್ಲಿವೆ. ಚರಂಡಿಯಿಲ್ಲ. ಆದ್ದರಿಂದ ಮಳೆ ನೀರು ಮನೆಯಂಗಳಗಳಲ್ಲೇ ನೆಲೆಯಾಗುತ್ತದೆ.
ಚರಂಡಿ ಹೂಳೆತ್ತಿಲ್ಲ
ಮದ್ದುಗುಡ್ಡೆಯ ನಂತರದ ರಸ್ತೆಗಳ ಪರಿಸ್ಥಿತಿಯೂ ಇದಕ್ಕೆ ತೀರ ಭಿನ್ನ ಏನಿಲ್ಲ. ಕೆಲವೆಡೆ ಚರಂಡಿ ಇದೆ. ಆದರೆ ಅದರ ಹೂಳೆತ್ತದೆ ದಶಕವೇ ಆಯಿತೋ ಏನೋ ಎನ್ನುತ್ತಾರೆ ಸ್ಥಳೀಯರು. ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳಿಗೆ ನೀರು ಮನೆ ಒಳಕ್ಕೆ ಪ್ರವೇಶಿಸದಿದ್ದರೆ ಸಾಕು ಎನ್ನುವುದರಲ್ಲೇ ಹೆಣಗಾಡುತ್ತಿರುತ್ತಾರೆ.
ಚರಂಡಿಗೆ ಜಾಗ ಎಲ್ಲಿ?
ಕಾಂಕ್ರೀಟ್ ರಸ್ತೆಯ ಅಕ್ಕಪಕ್ಕದಲ್ಲಿ ಹಲವೆಡೆ ಚರಂಡಿಗೆ ಜಾಗವಿಲ್ಲ. ಇಲ್ಲಿ ರೋಡ್ ಮಾರ್ಜಿನ್ ಬಿಟ್ಟಿಲ್ಲ. ಅನೇಕ ಕಡೆ ಮನೆಗಳ ಕಾಂಪೌಂಡ್ ಇದೆ. ಒತ್ತುವರಿ ತೆರವು ಹೊರತು ಚರಂಡಿ ನಿರ್ಮಾಣ ಕಷ್ಟವಿದೆ. ಇನ್ನು ಕೆಲವೆಡೆ ವಿದ್ಯುತ್ ಕಂಬ ಕೂಡಾ ತೀರಾ ಅಪಾಯದಲ್ಲಿದೆ. ಮತ್ತೆ ಕೆಲವೆಡೆ ವಿದ್ಯುತ್ ಕಂಬ ಚರಂಡಿ ಯಲ್ಲಿಯೇ ಇದೆ.
ಸಹಕಾರ ಇದ್ದರೆ ಸಾಧ್ಯ
ಚರಂಡಿ ಮಾಡಬೇಕಿರುವ ಜಾಗದಲ್ಲಿ ಕಂಪೌಂಡ್ ಇದೆ. ಸ್ತಳೀಯರು ಒತ್ತುವರಿ ತೆರವಿಗೆ ಸಹಕರಿಸಿದರೆ ಚರಂಡಿ ಮಾಡಬಹುದು. ಈಗ ಬಂದ 11 ಲಕ್ಷ ರೂ. ಅನುದಾನ ರಿಂಗ್‌ರೋಡ್‌ನಲ್ಲಿ ಕಾಮಗಾರಿಗೆ ವಿನಿಯೋಗಿಸಲಾಗಿದೆ. ಇನ್ನು ಅನುದಾನ ಬಂದರೆ ಇಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬಹುದು.
– ಸುರೇಶ್ ನಾೖಕ್, ಪುರಸಭೆ ಸದಸ್ಯರು
ಹೂಳೆತ್ತಿಲ್ಲ
ನಮ್ಮ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತದೆ ಅದೆಷ್ಟೋ ವರ್ಷಗಳಾಗಿರಬಹುದು. ಪ್ರತಿವರ್ಷ ಹೂಳೆತ್ತಿದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ.
– ರಾಘವೇಂದ್ರ, ಮದ್ದುಗುಡ್ಡೆ ನಿವಾಸಿ
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.