ಪಡುಬಿದ್ರಿ:ಎಟಿಎಂ ಕಾವಲುಗಾರನ ಕಟ್ಟಿ ಹಾಕಿ ಸಿನಿಮೀಯ ರೀತಿಯಲ್ಲಿ ದರೋಡೆ
Team Udayavani, Sep 2, 2018, 10:44 AM IST
ಪಡುಬಿದ್ರಿ: ದರೋಡೆಕೋರರು ಎಟಿಎಂ ಕಾವಲುಗಾರನನ್ನು ಕಟ್ಟಿ ಹಾಕಿ ಹತ್ತಿರವಿದ್ದ ಧನಲಕ್ಷ್ಮಿ ಜುವೆಲ್ಲರ್ಸ್ ಮತ್ತು ಮೊಬೈಲ್ ಅಂಗಡಿಯನ್ನು ದೋಚಿದ ಘಟನೆ ರವಿವಾರ ನಸುಕಿನ 1 ಗಂಟೆಯ ವೇಳೆಗೆ ನಡೆದಿದೆ.
ಧನಲಕ್ಷ್ಮಿ ಜುವೆಲ್ಲರ್ಸ್ ನಿಂದ ಸುಮಾರು 40 ಸಾವಿರ ಮೌಲ್ಯದ ಬೆಳ್ಳಿಯ ಸೊತ್ತುಗಳು ಮತ್ತು ಎವರ್ ಗ್ರೀನ್ ಮೊಬೈಲ್ ಅಂಗಡಿಯಿಂದ1.8 ಲಕ್ಷ ರೂಪಾಯಿ ಮೌಲ್ಯದ 25 ಮೊಬೈಲ್ ಗಳನ್ನು ಕಳ್ಳರು ದೋಚಿದ್ದಾರೆ.
ಮಧ್ಯರಾತ್ರಿ ವೇಳೆಗೆ ಪಡುಬಿದ್ರಿ ಕೆಳಗಿನ ಪೇಟೆ ಧನಲಕ್ಷ್ಮಿ ಜುವೆಲ್ಲರ್ಸ್ಗೆ 5-6 ಜನರಿಂದ ದರೋಡೆಕೋರರ ಗುಂಪು ನುಗ್ಗಿದೆ. ಈ ವೇಳೆ ಹತ್ತಿರವಿದ್ದ ಕರ್ಣಾಟಕ ಬ್ಯಾಂಕ್ ಏಟಿಎಂನ ಕಾವಲುಗಾರರನ್ನು ಗಮನಿಸಿ ಆತನನ್ನು ಬಾಯಿಯನ್ನು ಬಟ್ಟೆಯಿಂದ ಕಟ್ಟಿ ನಂತರ ಕಟ್ಟಡದ ಹಿಂದೆ ಇರುವ ಪೊದೆಯ ಬಳಿಯ ಹಲಸಿನ ಮರಕ್ಕೆ ಕುಳಿತ ಸ್ಥಿತಿಯಲ್ಲಿ ಕಟ್ಟಿ ಹಾಕಿದ್ದಾರೆ. ನಂತರ ಎರಡು ಅಂಗಡಿಗಳ ಬೀಗ ಮುರಿದು ದರೋಡೆ ನಡೆಸಿದ್ದಾರೆ.
ಭೂತ ಎಂದು ಹೆದರಿದರು: ನಸುಕಿನ ವೇಳೆಗೆ ಪೇಪರ್ ಲೈನ್ ಗೆ ಹೋಗಿದ್ದ ಸ್ಥಳಿಯ ಸುರೇಶ್ ಆಚಾರ್ಯ ಅವರಿಗೆ ಪೊದೆಯ ಹಿಂದಿನಿಂದ ಸಣ್ಣಗೆ ಕೂಗುವ ಶಭ್ದ ಕೇಳಿಸಿತ್ತು. ಸುರೇಶ್ ಆಚಾರ್ಯರು ಭೂತ ಎಂದು ಹೆದರಿ ತಮ್ಮ ದ್ವಿ ಚಕ್ರ ವಾಹನ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ನಂತರ ಸ್ಥಳೀಯ ಸುಧಾಕರ್ ಮೊಯಿಲಿ ಅವರೊಂದಿಗೆ ಸ್ಥಳಕ್ಕೆ ಬಂದ ಸುರೇಶ್ ಆಚಾರ್ಯ ಟಾರ್ಚ್ ಬೆಳಕಿನಿಂದ ಪೊದೆಯೆಡೆಗೆ ನೋಡಿದಾಗ ಎಟಿಎಂ ಕಾವಲುಗಾರ ಕಟ್ಟಿ ಹಾಕಿದ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ನಂತರ ಅವರ ಕಟ್ಟು ಬಿಚ್ಚಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಗಷ್ಟೇ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.