ಪೆರ್ಡೂರು ರೋಟರಿಯಿಂದ ಅಶಕ್ತ ಕುಟುಂಬಕ್ಕೆ ಮನೆ ಹಸ್ತಾಂತರ
Team Udayavani, Mar 11, 2017, 12:43 PM IST
ಹೆಬ್ರಿ: ಈಗಾಗಲೇ ಹತ್ತು ಹಲವಾರು ಜನಪರ ಕಾರ್ಯ ಕ್ರಮದೊಂದಿಗೆ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ಪೆರ್ಡೂರು ರೋಟರಿ ಕ್ಲಬ್ 2016-17ನೇ ಸಾಲಿನ ಅಧ್ಯಕ್ಷ, ಶಿಕ್ಷಣ ಸಂಯೋಜನಾಧಿಕಾರಿ ಚಂದ್ರ ನಾಯ್ಕ ಎಚ್. ಪ್ರಸ್ತುತ ವರ್ಷದಲ್ಲಿ ಎರಡು ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಕಾಯೊನ್ಮುಖರಾಗಿದ್ದು ನಿವೇಶನ ರಹಿತ ಅಸಕ್ತ ಕುಟುಂಬಕ್ಕೆ ಸಹಾಯ ಹಸ್ತಚಾಚಲು ಮುಂದಾಗಿದ್ದಾರೆ.
ಉಡುಪಿ ತಾಲೂಕು ಚೇರ್ಕಾಡಿ ಗ್ರಾಮದ ಕನ್ನಾರು ತೆಂಗಿನಜಡ್ಡು ನೇತ್ರಾವತಿ ಕೃಷ್ಣ ದಂಪತಿ ತೀರಾ ಬಡಕುಟುಂಬವಾಗಿದ್ದು, ನೇತ್ರಾವತಿ ಹಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದಾರೆ. ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೃಷ್ಣ ಅವರು ಹೋಟೆಲ್‌ನಲ್ಲಿ ದಿನಗೂಲಿ ನೌಕರ. ಇವರ ಸಂಪಾದನೆ ಮಡದಿಯ ಚಿಕಿತ್ಸೆಗೆ ಸಾಕಾಗದು. ಇಂತಹ ಪರಿಸ್ಥಿತಿಯಲ್ಲಿ ಮನೆಯಿಲ್ಲದ ಇವರಿಗೆ ರಿಯಾಯಿತಿ ದರದಲ್ಲಿ ಜಾಗ ಖರೀದಿಸಿಕೊಟ್ಟು 2.5ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದ್ದು ಗ್ರಾಮ ಪಂಚಾಯತ್‌ನಿಂದ 60ಸಾವಿರ ದೊರಕಿಸಿಕೊಟ್ಟಿದ್ದು ಉಳಿದ ಹಣವನ್ನು ರೋಟರಿ ಭರಿಸಲು ಮುಂದಾಗಿದೆ. ಹಾಗೂ ಇನ್ನೊಂದು ಮನೆ ಕುಂದಾಪುರ ತಾಲೂಕು ರಟ್ಟಾಡಿ ಗ್ರಾಮದ ಬಂಡೀಮರದ ಕಟ್ಟೆಯ ವಸಂತಿ ಸುರೇಶ್‌ರವರಿಗೆ ನೀಡುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೂ ಸಹ 2 ಲಕ್ಷ ನೀಡುವ ಉದ್ದೇಶವಿದ್ದು ಈಗಾಗಲೇ ಒಂದು ಲಕ್ಷ ರೂಪಾಯಿ ನೀಡಲಾಗಿದೆ. ಸದ್ದಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಪೆರ್ಡೂರು ರೋಟರಿ ಬಗ್ಗೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್.ಕೆ. ಪಾಟೀಲ್
Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ
H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.