ಸುತ್ತುಪೌಳಿ ಜೀರ್ಣೋದ್ಧಾರ: 3,000 ಸಿಎಫ್ಟಿ ಮರ, 16 ಟನ್‌ ತಾಮ್ರ

Team Udayavani, May 4, 2017, 11:52 AM IST

200417Astro04.jpg

ಉಡುಪಿ: ಶ್ರೀಕೃಷ್ಣ ಮಠದ ಸುತ್ತುಪೌಳಿಯ ಜೀರ್ಣೋದ್ಧಾರ ನಡೆಯುತ್ತಿದ್ದು, ಮೇ 14ರಿಂದ 18ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಸುತ್ತು ಪೌಳಿಯನ್ನು ಗಾಳಿ, ಬೆಳಕು ಚೆನ್ನಾಗಿ ಬರುವಂತೆ ನಿರ್ಮಿಸಲಾಗುತ್ತಿದೆ.

ಮಾಡು, ಕಂಬಗಳನ್ನು ಆಕರ್ಷಕ ದಾರುಶಿಲ್ಪಗಳಿಂದ ರಚಿಸಲಾಗುತ್ತಿದೆ. ಸಾಗುವಾನಿ, ಕಿರಾಲ್‌ ಬೋಗಿ, ಸಂಪಿಗೆ-ಈ 3 ಜಾತಿಗಳ ಸುಮಾರು 3,000 ಕ್ಯುಬಿಕ್‌ ಫೀಟ್‌ (ಸಿಎಫ್ಟಿ) ಮರ ಬಳಸಲಾಗಿದೆ. ಸಾಗುವಾನಿ ಮರವನ್ನು ಸರಕಾರಿ ಡಿಪೋಗಳಿಂದ ಏಲಂನಿಂದ ಖರೀದಿಸಿದ್ದರೆ, ಕಿರಾಲ್‌
ಬೋಗಿ, ಸಂಪಿಗೆ ಮರವನ್ನು ಬೈಂದೂರಿನಿಂದ ಮುಂಡ ಗೋಡು ತನಕ ವಿವಿಧ ಮರದ ಮಿಲ್‌ಗ‌ಳಿಂದ ಖರೀದಿಸಲಾಗಿದೆ. ಒಟ್ಟು 1.25 ಕೋ. ರೂ. ಕೇವಲ ಮರಕ್ಕಾಗಿ ವೆಚ್ಚವಾಗಿದೆ.

ಕುಶಲಕರ್ಮಿಗಳು
ತಾಮ್ರದ ಕೆಲಸವನ್ನು ಅಮಾಸೆ ಬೈಲಿನ ನರಸಿಂಹ ಆಚಾರ್ಯ, ಮರದ ಕೆಲಸವನ್ನು ಇನ್ನ ನಾರಾಯಣ ಆಚಾರ್ಯ, ಅವರ ಮಕ್ಕಳಾದ ಸದಾಶಿವ ಮತ್ತು ರವಿ, ಮರ್ಣೆಯ ಶಶಿಕಾಂತ ಆಚಾರ್ಯ, ಬಾರಕೂರಿನ ಶ್ರೀಪತಿ ಆಚಾರ್ಯರ ತಂಡ ನಿರ್ವಹಿಸುತ್ತಿದೆ. ಮೊದಲು ರಥಬೀದಿಯ ಕನಕಗೋಪುರದ ಎದುರು ಮರದ ಕೆಲಸ ಮಾಡುತ್ತಿದ್ದರೆ ಕೆಲಸ ವಿಳಂಬವಾಗುತ್ತದೆ ಎಂದು ತಿಳಿದು ಸಂಸ್ಕೃತಕಾಲೇಜಿನ ಆವರಣದಲ್ಲಿ ಕೆಲಸ ಮಾಡಲಾಗುತ್ತಿದೆ. ಆರು ತಿಂಗಳಿಂದ ಕೆಲಸ ನಡೆಯುತ್ತಿದೆ. ಮೊದಲು 10-20 ಜನರು ಕೆಲಸ ಮಾಡಿದರೆ ಈಗ 50-60 ಕುಶಲಕರ್ಮಿಗಳು ಕೆಲಸ ಮುಗಿಸಲು ಪ್ರಯತ್ನಿಸುತ್ತಿದ್ದಾರೆ.ಸುತ್ತುಪೌಳಿ ಕಾಮಗಾರಿ ನಡೆದು ಎಷ್ಟು ವರ್ಷವಾಗಿದೆಯೋ ಗೊತ್ತಿಲ್ಲ. ಇದು ಜೀರ್ಣಗೊಂಡ ಕಾರಣ ಶ್ರೀ ಪೇಜಾವರರು ತಮ್ಮ ಐದನೇ ಪರ್ಯಾಯ ಅವಧಿಯಲ್ಲಿ ಕಿರಿಯ ಶ್ರೀಗಳ ಕಲ್ಪನೆಯಂತೆ ಯೋಜನೆ ಕಾರ್ಯಗತಗೊಳಿಸುತ್ತಿದ್ದಾರೆ.

ಸಮಾಲೋಚನ ಸಭೆ
ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ನಡೆದ ಸಮಾಲೋಚನ ಸಭೆಯಲ್ಲಿ ಮೇ 13ರಂದು ಹೊರೆ ಕಾಣಿಕೆ ಸಮರ್ಪಣೆ, ಮೇ 16ರಂದು ರಜಕಲಶಗಳ ಮೆರವಣಿಗೆ, ಮೇ 18ರಂದು ಅನ್ನಸಂತರ್ಪಣೆ ನಡೆಸಲು,ಡಾ| ಮೋಹನ ಆಳ್ವ, ಪ್ರೊ| ಎಂ.ಎಲ್‌.ಸಾಮಗ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ವಿ| ಪಂಜಭಾಸ್ಕರ ಭಟ್‌, ಮಾಜಿ ಶಾಸಕ ರಘುಪತಿ ಭಟ್‌, ಮಂಜುನಾಥ ಉಪಾಧ್ಯ ಮಾತ ನಾಡಿದರು. ವಸತಿ, ನೀರಿನ ವ್ಯವಸ್ಥೆಗೆಗಮನ ಹರಿಸಲು ನಿರ್ಧರಿಸಲಾಯಿತು. 

ಹಿಂದಿನ ಪರ್ಯಾಯದಲ್ಲಿ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಈ ಬಾರಿಯೂ ನಡೆಸಲಾಗುತ್ತಿದೆ ಎಂದು   ಪೇಜಾವರ ಶ್ರೀ ನುಡಿದರು. 

ಮೈಸೂರಿನ ಪಿಳ್ಳೆ ಅಯ್ಯಂಗಾರ್‌ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶ್ರೀಪಾದರು, ಕನಕದಾಸರು ಉಡುಪಿಗೆ ಬಂದ ಮತ್ತು ಹಾಡು ರಚಿಸಿದ ಕುರಿತು ದಾಖಲೆಗಳಿವೆ. ಆದರೆ “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ’ ಎಂಬ ಹಾಡು ಎಲ್ಲಿ ರಚಿಸಿದ್ದು ಎಂಬ ಬಗ್ಗೆ ಖಚಿತ ಮಾಹಿತಿಗಳಿಲ್ಲ ಎಂದರು. 

500 ಕೆ.ಜಿ. ತಾಮ್ರದ ಮೊಳೆ !
ಮೇಲ್ಭಾಗದಲ್ಲಿ ತಾಮ್ರದ ತಗಡು ಹೊದೆಸಲಾಗುತ್ತಿದೆ. 14ರಿಂದ 16 ಟನ್‌ ತಾಮ್ರ ಬಳಸಲಾಗುತ್ತಿದೆ. ಟನ್‌ಗೆ 5 ಲ. ರೂ. ಬೆಲೆ. ತಾಮ್ರದ ತಗಡಿಗೆಒಟ್ಟು 80 ಲ. ರೂ. ಖರ್ಚಾಗಿದೆ. ಮರಕ್ಕೂ, ತಗಡಿಗೂ ಮೊಳೆ ಹೊಡೆಯುವಾಗ ಕಬ್ಬಿಣದ ಮೊಳೆ ಹೊಡೆಯದೆ ತಾಮ್ರದ ಮೊಳೆಯನ್ನೇ ಬಳಸಲಾಗಿದೆ. ಬಳಸಲಾದ ತಾಮ್ರದ ಮೊಳೆಯ ತೂಕವೇ ಸುಮಾರು 500 ಕೆ.ಜಿ.

ಟಾಪ್ ನ್ಯೂಸ್

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

5

Bajpe: ಕೆಂಜಾರು ಹಾಸ್ಟೆಲ್‌  ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ

4

Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು

3

Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.