ಕಾಪು ಕ್ಷೇತ್ರದಲ್ಲಿ 215 ಕೋ.ರೂ. ಅಭಿವೃದ್ಧಿ: ಸೊರಕೆ
Team Udayavani, Oct 28, 2017, 11:17 AM IST
ಕಾಪು: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಡಕ್, ಸಿಆರ್‌ಎಫ್, ವಾರಾಹಿ, ನಗರೋತ್ಥಾನ, ಒನ್ ಟೈಮ್ ಇಂಪ್ರೂವ್‌ಮೆಂಟ್, ಎಸ್‌ಸಿ – ಎಸ್‌ಟಿ ಹಾಗೂ ವಿಶೇಷ ಅನುದಾನವೂ ಸುಮಾರು 215 ಕೋ. ರೂ. ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಪೂರ್ಣ ಗೊಂಡಿದ್ದು, ಕೆಲವೊಂದು ಕಾಮಗಾರಿ ನಡೆಯುತ್ತಿವೆ. ಇನ್ನೂ ಕೆಲವು ಟೆಂಡರ್ ಆಗಿ ಕಾಮಗಾರಿಗೆ ಚಾಲನೆ ದೊರಕು ವುದಷ್ಟೇ ಬಾಕಿಯಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಶುಕ್ರವಾರ ಕಾಪು ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸುಮಾರು 16 ಕೋ. ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಕಾಪು – ಶಿರ್ವ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ವರ್ತುಲ ರಸ್ತೆಗಳ ನಿರ್ಮಾಣ ವಿವಿಧ ಮೂಲಗಳಿಂದ ಅನುದಾನ ಕ್ರೋಡೀಕರಿಸಿಕೊಂಡು ಎಲ್ಲ ಪಿಡ ಬ್ಲೂಡಿ ರಸ್ತೆಗಳನ್ನು ದ್ವಿಪಥವಾಗಿ ಪರಿವರ್ತಿಸಲಾಗುತ್ತಿದೆ. ಮಾತ್ರವಲ್ಲದೇ 21 ಸೇತುವೆಗಳ ನಿರ್ಮಾಣ ಕಾರ್ಯ ನಡೆಯತ್ತಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ 8.50 ಕೋ.ರೂ. ವೆಚ್ಚದಲ್ಲಿ ಫುಟ್‌ಪಾತ್ ನಿರ್ಮಾಣ, ನಗರೋ ತ್ಥಾನ ಮೂಲಕ 10 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ, ವರ್ತುಲ ರಸ್ತೆಗಳ ನಿರ್ಮಾಣವೂ ನಡೆಯಲಿವೆ ಎಂದರು.
ಕಾಪು ಜನಾರ್ದನ ದೇವಸ್ಥಾನದ ತಂತ್ರಿ ವೇ| ಮೂ| ಶ್ರೀಶ ತಂತ್ರಿ ಕಲ್ಯ ಶಿಲಾನ್ಯಾಸ ಮುಹೂರ್ತ ನೆರವೇರಿಸಿದರು. ನವೀನ್‌ಚಂದ್ರ ಜೆ. ಶೆಟ್ಟಿ, ವಿಲ್ಸನ್ ರೋಡ್ರಿಗಸ್, ಸೌಮ್ಯಾ ಎಸ್., ಎಚ್. ಉಸ್ಮಾನ್, ಡಾ| ದೇವಿಪ್ರಸಾದ್ ಶೆಟ್ಟಿ, ವಿಶ್ವಾಸ್ ಅಮೀನ್, ಮೆಲ್ವಿನ್ ಡಿ’ಸೋಜಾ, ವಿನಯ ಬಲ್ಲಾಳ್, ದೀಪಕ್ ಕುಮಾರ್ ಎರ್ಮಾಳು, ಮಾಧವ ಆರ್. ಪಾಲನ್, ನಾಗೇಶ್ ಸುವರ್ಣ, ಕೇಶವ ಸಾಲ್ಯಾನ್, ದಿವಾಕರ ಬಿ. ಶೆಟ್ಟಿ, ಮನಹರ್ ಇಬ್ರಾಹಿಂ, ಹರೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.