ರಸ್ತೆ ಅಭಿವೃದ್ಧಿಗೆ ನಗರೋತ್ಥಾನದಿಂದ 3.31 ಕೋಟಿ ರೂ. ಅನುದಾನ


Team Udayavani, May 19, 2019, 6:10 AM IST

raste-abhivraddi

ಕಾರ್ಕಳ: ಐದು ವರ್ಷಗಳ ಬಳಿಕ ಪುರಸಭೆ ರಸ್ತೆಗಳಿಗೆ ಇದೀಗ ಡಾಮರು ಭಾಗ್ಯ ಸಿಕ್ಕಿದೆ. ಅನಂತಶಯನದಿಂದ ಬಂಡಿಮಠದವರೆಗಿನ ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದವು. ಇದೀಗ ಒಂದು ಬದಿಗೆ ಡಾಮರು ಹಾಕಲಾಗಿದೆ.

3.31 ಕೋಟಿ ರೂ. ಅನುದಾನ
ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ 3.31 ಕೋಟಿ ರೂ. ಬಿಡುಗಡೆಗೊಂಡಿದೆ. ಈ ಅನುದಾನದಲ್ಲಿ ಹವಲ್ದಾರ್‌ಬೆಟ್ಟು, ಬಂಗ್ಲೆಗುಡ್ಡೆ ಕಜೆ ಒಂದನೇ ವಾರ್ಡ್‌ ಮತ್ತು ಎರಡನೇ ವಾರ್ಡ್‌, ಮಾರ್ಕೆಟ್‌ ರೋಡ್‌ ರಣವೀರ ಕಾಲನಿ, ದಾನಶಾಲೆ ರಸ್ತೆ, ಕುಂಬ್ರಿಪದವು, ಪತ್ತೂಂಜಿಕಟ್ಟೆ, ಶಾಂತಿನಗರ ರಸ್ತೆ, ಬಂಡಿಮಠ, ಕಾವೆರಡ್ಕ ಕಾಲನಿ ರಸ್ತೆ ಅಭಿವೃದ್ಧಿ, ಚರಂಡಿ ಕಾಮಗಾರಿ ನಡೆಯಲಿದೆ. ಕೆಲವೊಂದು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಾಮಗಾರಿ ಪ್ರಗತಿಯಲ್ಲಿದೆ.

ಸಾಲ್ಮರ ಗ್ಯಾಲಕ್ಷಿ ರಸ್ತೆಗೆ ಡಾಮರು
ಸಾಲ್ಮರದ ಗ್ಯಾಲಕ್ಷಿಯಿಂದ ಜಯಭಾರತಿ ವರೆಗಿನ 510 ಮೀಟರ್‌ ರಸ್ತೆಗೆ ಈಗ ಡಾಮರು ಹಾಕಲಾಗುತ್ತಿದೆ. 22 ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದೆ. ಇಲ್ಲಿ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲೆಡೆ ಕಿರಿದಾದ ರಸ್ತೆಗಳು
ಪುರಸಭೆ ವ್ಯಾಪ್ತಿಯ ಬಹುತೇಕ ಎಲ್ಲ ರಸ್ತೆಗಳು ತೀರಾ ಕಿರಿದಾಗಿವೆ. ಹೀಗಾಗಿ ಮುಖ್ಯರಸ್ತೆಯೊಂದಿಗೆ ಒಳರಸ್ತೆಗಳು ಕೂಡ ಅಗಲೀಕರಣಗೊಳ್ಳಬೇಕು.
ಡಾಮರೀಕರಣವೂ ಆಗಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿತ್ತು. ಆದರೆ ನಗರೋತ್ಥಾನ ಯೋಜನೆಯಡಿ ಸೀಮಿತ ಅನುದಾನ ಬಿಡುಗಡೆಗೊಂಡಿರುವುದರಿಂದ ಎಲ್ಲ ರಸ್ತೆಗಳ ಅಭಿವೃದ್ಧಿ ಈ ಅನುದಾನದಲ್ಲಿ ಅಸಾಧ್ಯವಾಗಿದೆ.

ಉರಿಯುತ್ತಿಲ್ಲ ಬೀದಿದೀಪ
ಗ್ಯಾಲಕ್ಷಿ ಸಭಾಭವನದಿಂದ ಜಯಭಾರತಿ ವರೆಗೆ ಅಳವಡಿಸಲಾದ ಬೀದಿದೀಪಗಳು ಉರಿಯುತ್ತಿಲ್ಲ. ಡಿವೈಡರ್‌ ಮಧ್ಯದಲ್ಲಿ ಅಳವಡಿಸಲಾದ ಬೀದಿದೀಪಗಳು ಕಳೆದ ಒಂದು ವರ್ಷದಿಂದ ಉರಿಯದಿದ್ದರೂ ಪುರಸಭೆ ಮೌನವಾಗಿದೆ. ಈ ಭಾಗದಲ್ಲಿ ಬೀದಿನಾಯಿಗಳ ಕಾಟವೂ ವಿಪರೀತವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ದುರಸ್ತಿಗೆ ಕೊಟೇಶನ್‌
ಮುಖ್ಯರಸ್ತೆ ಕಾಮಗಾರಿ ಮೂರು ದಿನಗಳಲ್ಲಿ ಪೂರ್ಣವಾಗಲಿದೆ. ಡಿವೈಡರ್‌ ಲೈಟ್‌ ದುರಸ್ತಿಪಡಿಸುವ ನಿಟ್ಟಿನಲ್ಲಿ ಕೊಟೇಶನ್‌ ಕರೆಯಲಾಗಿದೆ.
-ಪದ್ಮನಾಭ ಎನ್‌.ಕೆ., ಪುರಸಭಾ ಎಂಜಿನಿಯರ್‌

ದುರಸ್ತಿಗೆ ಕೊಟೇಶನ್‌
ಮುಖ್ಯರಸ್ತೆಯ ಒಂದು ಭಾಗ ಮಾತ್ರ ಇದೀಗ ಡಾಮರೀಕರಣಗೊಳ್ಳುತ್ತಿದೆ. ನಗರದ ಮುಖ್ಯರಸ್ತೆಯನ್ನು ಒಮ್ಮೆಗೆ ಡಾಮರೀಕರಣಗೊಳಿಸುವ ನಿಟ್ಟಿನಲ್ಲಿ ಪುರಸಭೆ ಕ್ರಮ ಕೈಗೊಳ್ಳಬೇಕಿತ್ತು. ಪುರಸಭೆಗೆ ಚುನಾವಣೆ ಆಗಿ ವರ್ಷವಾದರೂ ಅಧ್ಯಕ್ಷರ ನೇಮಕವಾಗದಿರುವುದು ಪುರಸಭೆಯ ಆಡಳಿತ ಕಾರ್ಯಗಳಿಗೆ ಅಡ್ಡಿಯಾಗಿರಬಹುದು.
-ಅರುಣ್‌ ಪುರಾಣಿಕ್‌, ಸಾಮಾಜಿಕ ಮುಂದಾಳು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.