ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 33.40 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ
ಕೊಲ್ಲೂರು: ಮುಕ್ತಾಯ ಹಂತದಲ್ಲಿ 68 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ
Team Udayavani, May 11, 2019, 6:00 AM IST
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ನಡೆಯುತ್ತಿರುವ 24.67 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಹೆಚ್ಚುವರಿ 8.50 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡುವುದರೊಡನೆ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಆರ್ಥಿಕ ಸಹಾಯ ದೊರಕಿದೆ.
ಕಾಶಿ ಹೊಳೆಯ ಸನಿಹ
ವೆಂಟೆಂಡ್ ಡ್ಯಾಮ್
ದೇಗುಲ ಸಹಿತ ಕ್ಷೇತ್ರದ ನಿವಾಸಿಗಳಿಗೆ ಬೇಸಿಗೆಯಲ್ಲಿ ನೀರಿನ ûಾಮ ಎದುರಾಗುತ್ತಿದ್ದು ಇದಕ್ಕೊಂದ್ದ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಾಜಿ ಜಿಲ್ಲಾಧಿ ಕಾರಿ ಡಾ. ವಿಶಾಲ್ ಸರಕಾರದ ಗಮನ ಸೆಳೆದಿದ್ದರು. ಅದರಂತೆ 68 ಕೋಟಿ ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ, ಅನ್ನ ದಾಸೋಹ ಮಂದಿರ, ಒಳಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆಗೆ ದೇಗುಲದ ವತಿಯಿಂದ ಆರ್ಥಿಕ ವ್ಯವಸ್ಥೆ ಒದಗಿಸಲಾಗಿತ್ತು. ಸರಕಾರದ ಅನುಮೋದನೆಯೊಡನೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು.
ಮುಕ್ತಾಯ ಹಂತದಲ್ಲಿ
ಕಿಂಡಿ ಅಣೆಕಟ್ಟು
ಈಗಾಗಲೇ ಕಿಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ 6 ತಿಂಗಳೊಳಗೆೆ ಲೋಕಾರ್ಪಣೆಗೊಳ್ಳಲಿದೆ. ಆರಂಭದಲ್ಲಿ ಮ್ಯಾನುವಲ್ ಗೇಟ್ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದರೂ ತದನಂತರ ಮೆಕ್ಯಾನಿಕಲ್ ಗೇಟ್ ಆಗಿ ಪರಿವರ್ತಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಮಂಜೂರಾದ 24.67 ಕೋಟಿ ರೂ. ಮೆಕ್ಯಾನಿಕಲ್ ಗೇಟ್ ನಿರ್ಮಾಣಕ್ಕೆ ಸಾಕಾಗದ ಕಾರಣ ಹೆಚ್ಚುವರಿ 8 ಕೋಟಿ ರೂ. ಮಂಜೂರಾತಿಯ ಬಗ್ಗೆ ಸರಕಾರದ ಗಮನ ಸೆಳೆಯಲಾಗಿತ್ತು.
ಇದೀಗ ಸರಕಾರ ಪರಿಷ್ಕೃತ 33.40 ಕೋಟಿ ರೂ. ಅಂದಾಜಿನ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭೋಜನ ಶಾಲೆ
ಲೋಕಾರ್ಪಣೆಗೆ ಸಜ್ಜು
21 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಕರ್ಯದೊಂದಿಗೆ ನಿರ್ಮಾಣ ಗೊಂಡಿರುವ, 1000 ಮಂದಿ ಭಕ್ತರು ಏಕ ಕಾಲದಲ್ಲಿ ಅನ್ನ ಪ್ರಸಾದ ಸ್ವೀಕರಿಸಲು ಯೋಗ್ಯವಾದ ಭೋಜನ ಶಾಲೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.
ಲೋಕಾರ್ಪಣೆಗೆ ಸಿದ್ಧ
ಕೊಲ್ಲೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 68 ಕೋಟಿ ರೂ. ವೆಚ್ಚದಲ್ಲಿ ಆರಂಭ ಗೊಂಡಿರುವ ವೆಂಟೆಡ್ ಡ್ಯಾಮ್, ದಾಸೋಹ ಮಂದಿರ, ಒಳಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆಯು ಪೂರ್ಣಗೊಳ್ಳುತ್ತಿದ್ದು ಲೋಕಾರ್ಪಣೆ ಗೊಳ್ಳುತ್ತಿದೆ.
-ಎಚ್. ಹಾಲಪ್ಪ ,
ಕಾರ್ಯನಿರ್ವಹಣಾಧಿಕಾರಿ ಕೊಲ್ಲೂರು ದೇಗುಲ
ಅಂತರ್ಜಲ ವೃದ್ಧಿ
ಕೊಲ್ಲೂರಿನ ನೀರಿನ ಸಮಸ್ಯೆ ಶಾಶ್ವತವಾಗಿ ನಿಭಾಯಿಸುವ ಸಲುವಾಗಿ ಕೈಗೆತ್ತಿ ಕೊಂಡಿರುವ ವೆಂಟೆಡ್ ಡ್ಯಾಮ್ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳುತ್ತಿದೆ. ಡ್ಯಾಮ್ ನೀರಿನ ಬಳಕೆಯಿಂದ ಅಂತರ್‌ಜಲ ವೃದ್ಧಿಯಾಗುವುದು.
-ಹರೀಶ್ ಕುಮಾರ್ ಶೆಟ್ಟಿ,
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕೊಲ್ಲೂರು ದೇಗುಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.