ಕಡಲ್ಕೊರೆತ ತಡೆಗೆ 71 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ
Team Udayavani, Mar 18, 2017, 4:07 PM IST
ಕಾಪು : ಕರಾವಳಿ ಭಾಗದ ಜನರನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯಾಗಿರುವ ಕಡಲ್ಕೊರೆತ ತಡೆಗಾಗಿ ಉದ್ಯಾವರ – ಪಡುಕರೆಯಲ್ಲಿ 71 ಕೋ. ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಮಾ. 14ರಂದು ಕಟಪಾಡಿ – ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿ ರಸ್ತೆಯ ಮರು ಡಾಮರೀಕರಣ ಮತ್ತು ಕಾಂಕ್ರೀಟ್ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಟಪಾಡಿ-ಕೋಟೆ ಗ್ರಾ. ಪಂ. ವ್ಯಾಪ್ತಿಯ ಜನರ ಬಹುಕಾಲದ ಬೇಡಿಕೆಯಾಗಿರುವ ಮಟ್ಟು ಸೇತುವೆ ಅಗಲೀಕರಣ, ಕಟಪಾಡಿ ಪೇಟೆಯಿಂದ ಮಟ್ಟು ಸಂಪರ್ಕ ರಸ್ತೆ ಅಗಲೀಕರಣ, ಪಡುಕರೆಯಿಂದ ಉಳಿಯಾರಗೋಳಿ ಕರಾವಳಿ ರಸ್ತೆ ಅಭಿವೃದ್ಧಿಗೆ ನಾಲ್ಕು ಕೋ. ರೂ. ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಬಂಗೇರ, ಕಟಪಾಡಿ ಗ್ರಾ.ಪಂ. ಅಧ್ಯಕ್ಷ ಜೂಲಿಯಟ್ ವೀರಾ ಡಿ’ಸೋಜ, ಉಪಾಧ್ಯಕ್ಷೆ ಪ್ರಭಾ ಶೆಟ್ಟಿ, ಮಾಜಿ ತಾ. ಪಂ. ಸದಸ್ಯರಾದ ಶ್ರೀಕರ ಅಂಚನ್, ಉದಯ ಶೆಟ್ಟಿ, ಮಾಜಿ ಮಂಡಲ ಪ್ರಧಾನ ಶ್ರೀಕರ
ಸುವರ್ಣ ಕಟಪಾಡಿ, ಮಾಜಿ ಪಂ. ಅಧ್ಯಕ್ಷರಾದ ವಿನಯ ಬಲ್ಲಾಳ್, ಅಶೋಕ್ ರಾವ್, ಪ್ರೇಮ್ ಕುಮಾರ್, ಕೋಟೆ ಗ್ರಾ. ಪಂ. ಮಾಜಿ ಅಧ್ಯಕ್ಷ ದಯಾನಂದ ಬಂಗೇರ, ಕಟಪಾಡಿ ಗ್ರಾ. ಪಂ. ಸದಸ್ಯರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.