ಪಾಳುಬಿದ್ದಿದೆ ಹಳೆಯ ಉಪನೋಂದಣಿ ಕಚೇರಿ ಕಟ್ಟಡ
ಸರಕಾರಿ ಆಸ್ಪತ್ರೆ ಸುಪರ್ದಿಯಲ್ಲಿಯೇ ಇದೆ ಹಳೆಯ ಉಪನೋಂದಣಿ ಕಚೇರಿ ನಿವೇಶನ
Team Udayavani, Apr 27, 2019, 3:35 PM IST
ನಗರ ಎ. 26: ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪಾಳುಬಿದ್ದಿದೆ. ಸರಕಾರಿ ಸೇವೆಗಳನ್ನು ನೀಡುವ ಇಲಾಖೆ ಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ದಿಂದ ಪುತ್ತೂರು ಉಪನೋಂದಣಿ ಕಚೇರಿ ಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿದ ಅನಂತರ ಹಳೆ ಉಪನೋಂದಣಿ ಕಚೇರಿ ಕಟ್ಟಡ ಭಿಕ್ಷುಕರ, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.
ಈ ಹಿಂದೆ ಇದ್ದ ಪುತ್ತೂರು ಉಪ ನೋಂದಣಿ ಕಚೇರಿ ಇಕ್ಕಟ್ಟಾಗಿದ್ದು, ವಿಸ್ತರಿಸುವ ಅಗತ್ಯವಿರುವ ಕಾರಣ ಈ ಕಚೇರಿ ಪುತ್ತೂರು ಮಿನಿ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಯಿತು. ಇದಕ್ಕೂ ಮುನ್ನ ಈ ಕಟ್ಟಡದಲ್ಲೇ ಉಪನೋಂದಣಿ ಕಚೇರಿಯನ್ನು ಉಳಿಸಿಕೊಂಡು ಕಟ್ಟಡ ವಿಸ್ತರಣೆ, ಹಳೇ ಕಟ್ಟಡ ನವೀಕರಣ ಯೋಜನೆಗೂ ಕೈ ಹಾಕಲಾಯಿತು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿತ್ತು. ಆಗ ಉಪನೋಂದಣಿ ಕಚೇರಿಯ ಬದಿಯಿಂದ ಒಂದು ಹಾಲ್ ತೆಗೆದುಕೊಳ್ಳುವ ರೂಪುರೇಷೆ ತಯಾರಿಸಲಾಯಿತು. ಇದರ ನೀಲನಕಾಶೆಯನ್ನು ತಯಾರಿಸಲಾಯಿತು. ಈಗಿನ ಕಟ್ಟಡಕ್ಕೆ ಒಂದು ಬದಿಯಿಂದ ಹಾಲ್ ತೆಗೆದುಕೊಳ್ಳುವುದನ್ನು ನಕಾಶೆಯಲ್ಲಿ ತೋರಿಸಲಾಗಿದೆ.
ಸಚಿವಾಲಯಕ್ಕೆ ಪ್ರಸ್ತಾವನೆ:
ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಯ ಹೆಸರಿನಿಂದ ಉಪನೋಂದಣಿ ಕಚೇರಿಗೆ ವರ್ಗಾಯಿಸಿ ಕಟ್ಟಡ ನಿರ್ಮಿಸುವ ಯೋಜನೆ ಇರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆ ಆಗುವ ನಿಟ್ಟಿನಲ್ಲಿ ಪುತ್ತೂರಿಗೆ ಸುಸಜ್ಜಿತ ಉಪನೋಂದಣಿ ಕಚೇರಿ ಅಗತ್ಯ. ಉಪನೋಂದಣಿ ಕಚೇರಿ ನಿರ್ಮಾಣ ಮಾಡುವ ಯೋಜನೆ ಸದ್ಯ ಚೆಂಡು ರಾಜ್ಯ ಸರಕಾರದ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ. ಅಂದರೆ ಪುತ್ತೂರು ನೋಂದಣಿ ಕಚೇರಿಯಿಂದ ಕಳುಹಿಸಿದ ಪ್ರಸ್ತಾವನೆ ಜಿಲ್ಲಾ ನೋಂದಣಿ ಅಧಿಕಾರಿ ಮೂಲಕ ರಾಜ್ಯದ ನೋಂದಣಿ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರ ಕಚೇರಿಗೆ ಕಳುಹಿಸಲಾಯಿತು. ಅವರು ಅನುದಾನ ಬಿಡುಗಡೆ ಮಾಡಲು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಟ್ಟಡ ನಿರ್ಮಾಣ ಕಷ್ಟ:
ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿತು. ಇದರ ಮೊದಲ ಹಂತವಾಗಿ ಉಪನೋಂದಣಿ ಕಚೇರಿ ಜಾಗ ಪಹಣಿ ತಿದ್ದುಪಡಿ ಮಾಡಲಾಯಿತು. ಆರ್‌ಟಿಸಿ ಕಲಂ 9ರಲ್ಲಿದ್ದ ಉಪನೋಂದಣಿ ಕಚೇರಿ ಹೆಸರನ್ನು ತೆಗೆದು ಹಾಕಿ ಸರಕಾರ ಎಂದು ನಮೂದಿಸಲಾಯಿತು. ಕಲಂ 11ರಲ್ಲಿ ಸರಕಾರ ಎಂದೇ ಇತ್ತು. ಆದ್ದರಿಂದ ಉಪನೋಂದಣಿ ಕಚೇರಿಗೆ ಜಾಗವನ್ನು ಹಸ್ತಾಂತರ ಮಾಡಿಲ್ಲ ಎಂದು ಪರಿಗಣಿಸಿ, ಸರಕಾರಕ್ಕೆ ಮತ್ತೆ ಪಡೆದುಕೊಳ್ಳಲಾಯಿತು. ಬಳಿಕ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಅರ್ಜಿ ಆಹ್ವಾನಿಸಿ ಈ ಜಾಗವನ್ನು ಆಸ್ಪತ್ರೆ ಹೆಸರಿಗೆ ವರ್ಗಾಯಿಸಲಾಯಿತು.
ಪಾಳುಬಿದ್ದ ಕಟ್ಟಡ:
ಪ್ರಸ್ತುತ ಉಪನೋಂದಣಿ ಕಚೇರಿ ಇರುವ ಜಾಗ ಆಸ್ಪತ್ರೆಯ ಹೆಸರಿನಲ್ಲಿದೆ. ಹಾಗಿರುವಾಗ, ಉಪನೋಂದಣಿ ಕಚೇರಿ ಕಟ್ಟಡವನ್ನು ವಿಸ್ತರಿಸುವುದು ಹೇಗೆ? ಇದಕ್ಕೆ ಇಲಾಖೆಯಿಂದ ಅನುಮತಿ ಸಿಗುತ್ತದೆಯೇ? ಒಂದು ವೇಳೆ ಕಟ್ಟಡ ನಿರ್ಮಿಸಿದರೂ, ಮುಂದೊಂದು ದಿನ ಕಚೇರಿ ಶಿಫ್ಟ್ ಆದಾಗ ಕಟ್ಟಡ ಪಾಳು ಬೀಳುವುದಿಲ್ಲವೇ? ಎನ್ನುವ ಪ್ರಶ್ನೆಗಳು ಮೂಡಿವೆ.
ಈ ಕಟ್ಟಡಕ್ಕೆ ಅಂದಾಜು 15.40 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಲಾಗಿದೆ. ಆದರೆ ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರಕಾರಿ ಆಸ್ಪತ್ರೆಗೆ ಸೇರಿದ್ದು ಎನ್ನುವ ತಕರಾರು ಬಂದ ಕಾರಣ ತತ್‌ಕ್ಷಣದಲ್ಲಿ ಯೋಜನೆ ಕೈಬಿಟ್ಟು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು.
ಆಸ್ಪತ್ರೆಯ ಸುಪರ್ದಿಯಲ್ಲಿದೆ:
.ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.