ಇನ್ನೂ ಓಡಾಡದ ಬಸ್‌ಗಳು: ಗ್ರಾಮೀಣರಿಗೆ ಪ್ರಯಾಣ ಪ್ರಯಾಸ !

ಕಾರ್ಕಳದಲ್ಲಿ 250 ಖಾಸಗಿ ಬಸ್‌ಗಳಲ್ಲಿ 110 ಮಾತ್ರ ಸಂಚಾರ

Team Udayavani, Oct 5, 2020, 12:31 PM IST

Karkala-tdy-1

ಕಾರ್ಕಳ, ಅ. 4 : ಕೋವಿಡ್ ದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳು ಓಡಾಟ ನಡೆಸದೇ ಇರುವುದರಿಂದ ಇದರ  ನೇರ ಪರಿಣಾಮ ಗ್ರಾಮೀಣ ಪ್ರಯಾಣಿಕರಿಗೆ ತಟ್ಟಿದೆ.  ಇಲ್ಲಿ ಗ್ರಾಮಗಳಿಗೆ ಸರಕಾರಿ ಸಾರಿಗೆ ಬಸ್‌ಗಳಿಲ್ಲ. ಖಾಸಗಿ ಬಸ್‌ಗಳೇ ಜೀವಾಳ. ಲಾಕ್‌ಡೌನ್‌ ವೇಳೆ ಖಾಸಗಿ ಬಸ್‌ ಉದ್ಯಮ ನಷ್ಟಕ್ಕೆ ಸಿಲುಕಿದ್ದರೆ, ಈಗ ಬಸ್‌ ಇಲ್ಲ, ಬಸ್‌ ಓಡಿಸಿದರೆ ನಿರ್ವಹಣೆಗೂ ಸಾಲುತ್ತಿಲ್ಲ. ಇದರಿಂದ ಹಲವಾರು ಬಸ್‌ಗಳು ಇನ್ನೂ ಸಂಚಾರ ಆರಂಭಿಸಿಲ್ಲ.

 ಬಸ್‌ಗಳು ಕಡಿಮೆ : ಲಾಕ್‌ಡೌನ್‌ಗಿಂತ  ಮೊದಲು 250 ಖಾಸಗಿ ಬಸ್‌ಗಳು ತಾ|ನ ವಿವಿಧ ರೂಟ್‌ಗಳಲ್ಲಿ ಓಡಾಟ ನಡೆಸುತ್ತಿದ್ದವು. ಮೂಡಬಿದಿರೆ ಮತ್ತು ಮೂಲ್ಕಿ ಮಾರ್ಗವಾಗಿ ಮಂಗಳೂರಿಗೆ ಕಾರ್ಕಳದಿಂದ ಪ್ರತಿದಿನ 100 ಬಸ್‌ ಓಡಾಡುತ್ತಿತ್ತು. ಈಗ  ಕೇವಲ 35 ಬಸ್‌ ಮಾತ್ರವಿದೆ. ಕಾರ್ಕಳ-ಉಡುಪಿ ಮಾರ್ಗವಾಗಿ 50  ಬಸ್‌ ಸಂಚರಿಸುತ್ತಿತ್ತು. ಈಗ 20 ಬಸ್‌ಗಳು ಮಾತ್ರ ಇವೆ. ಬೆಳ್ತಂಗಡಿ- ಕಾರ್ಕಳದ ನಡುವೆ 30 ಬಸ್‌ಗಳ ಸಂಚಾರವಿತ್ತು. ಈಗ 10 ಬಸ್‌ ಮಾತ್ರ ಚಲಿಸುತ್ತಿವೆ.

ಪರ್ಯಾಯ ವ್ಯವಸ್ಥೆಗಳೂ ಇಲ್ಲ : ಗ್ರಾಮೀಣ ಭಾಗಕ್ಕೆ  ತೆಳಲು ಖಾಸಗಿ ಬಸ್‌ ಹಾಗೂ ಸ್ವಂತ ವಾಹನಗಳು ಬಿಟ್ಟರೆ ಬೇರೆ ವ್ಯವಸ್ಥೆಗಳಿಲ್ಲ. ಈಗ  ಗ್ರಾಮೀಣ ಭಾಗಕ್ಕೆ ಓಡಾಡುವ ಲೋಕಲ್‌ ಬಸ್‌ಗಳ ಸಂಖ್ಯೆ 70ರಿಂದ 30ಕ್ಕೆ ಇಳಿದಿದೆ.  ಒಟ್ಟಾರೆ ಕಾರ್ಕಳದಲ್ಲಿ ಓಡಾಡುವ  ಖಾಸಗಿ ಬಸ್‌ಗಳ ಸಂಖ್ಯೆ  ನೂರರ ಆಸುಪಾಸಿನಲ್ಲಿದೆ.

ಡೀಸೆಲ್‌ ಖರ್ಚಿಗೂ ಸಾಲುತ್ತಿಲ್ಲ : ಬಸ್‌ಗಳಲ್ಲಿ  ಶೇ.50 ರಷ್ಟು ಮಂದಿ ಮಾತ್ರ  ಪ್ರಯಾಣಿಸಬೇಕೆಂಬ ನಿಯಮವಿದೆ. ಕೆಲ ರೂಟ್‌ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಬಿಟ್ಟರೆ ಪ್ರಯಾಣಿಕರೇ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ  ಬಸ್‌ ಓಡಿಸುವುದರಿಂದ ಡೀಸೆಲ…, ಚಾಲಕ, ನಿರ್ವಾಹಕರ ಸಂಬಳ ಭರಿಸುವುದಕ್ಕೂ  ಸಾಲುತ್ತಿಲ್ಲ. ಡೀಸೆಲ್‌ ದರವೂ ಹೆಚ್ಚಿದೆ. ತೆರಿಗೂ ಪೂರ್ಣ ಪಾವತಿಸಬೇಕು. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಾರೆ ಬಸ್‌ ಮಾಲಕರು.

ಅವಲಂಬಿತರು ಅತಂತ್ರ :  ಖಾಸಗಿ ಬಸ್‌ಗಳಲ್ಲಿ  ಸುಮಾರು  500ಕ್ಕೂ  ಅಧಿಕ ಮಂದಿ  ಚಾಲಕರು, ನಿರ್ವಾಹಕರು, ಏಜೆಂಟರು ದುಡಿಯುತ್ತಿದ್ದರು. ಈಗ ಬಸ್‌ ಸಂಖ್ಯೆ ಕಡಿಮೆ ಗೊಂಡ ಬಳಿಕ ಅವರೆಲ್ಲರ ಬದುಕು ಅತಂತ್ರವಾಗಿದೆ. ಒಂದು ವಾರಕ್ಕಾಗುವಷ್ಟು ಮಾತ್ರ ಕೆಲಸ ಎಂಬಂತಾಗಿದೆ. ಆದ್ದರಿಂದ ಇವರೆಲ್ಲರೂ ಕೃಷಿ, ಕೂಲಿ, ಖಾಸಗಿ ವಾಹನ ಚಾಲನೆ ಇತ್ಯಾದಿ ಕೆಲಸಗಳತ್ತ ಮುಖ ಮಾಡಿದ್ದಾರೆ.

ಖಾಸಗಿ ಬಸ್‌ಗಳ ತೆರಿಗೆ,  ವಿಮೆ ಮೊತ್ತ  ಕಡಿಮೆಗೊಳಿಸಿ, ಸಬ್ಸಿಡಿ ಬೆಲೆಯಲ್ಲಿ  ಡೀಸೆಲ್‌ ಪೂರೈಸಿದಲ್ಲಿ  ಜನತೆಗೆ ಸೇವೆ ಒದಗಿಸಲು ಸಾಧ್ಯ.ಜನರಿಗೂ ಅನುಕೂಲವಾಗುತ್ತದೆ.  -ಬಾಬು ಮೂಲ್ಯ,  ಅಧ್ಯಕ್ಷರು,  ಏಜೆಂಟ್‌ ಬಳಗ , ಕಾರ್ಕಳ

ಟಾಪ್ ನ್ಯೂಸ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.