ಪಡುಬಿದ್ರಿ – ಕಾರ್ಕಳ ರಸ್ತೆಗೆ ಗ್ರಾಮಾಂತರ ಬಸ್‌ಗಳ ತಂಗುದಾಣ ಶಿಫ್ಟ್
Team Udayavani, Mar 12, 2021, 3:00 AM IST
ಪಡುಬಿದ್ರಿ,: ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ವಾಹನ ದಟ್ಟಣೆಯಿಂದ ಮುಕ್ತಿ ಪಡೆಯಲು ಮತ್ತು ಪಡುಬಿದ್ರಿ ಪೇಟೆಯಲ್ಲಿ ಸಂಚಾರ ತೊಡಕನ್ನು ನಿವಾರಿಸಲು ಕಾರ್ಕಳ ಸಹಿತ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್‌ಗಳ ನಿಲುಗಡೆಯನ್ನು ಪಡುಬಿದ್ರಿ – ಕಾರ್ಕಳ ತಿರುವಿನ ಜಂಕ್ಷನ್‌ಗೆ ಸ್ಥಳಾಂತರಿಸಲಾಗಿದೆ.
ಹೆದ್ದಾರಿಗೆ ಹೊಂದಿಕೊಂಡೇ ಉಡುಪಿ ಹಾಗೂ ಕಾರ್ಕಳ ಕಡೆ ಸಂಚರಿಸುವ ಬಸ್‌ಗಳು ನಿಲುಗಡೆಯಾಗುತ್ತಿದ್ದವು. ಹೆದ್ದಾರಿಯಲ್ಲಿ ಜನ ಹಾಗೂ ಇತರ ವಾಹನಗಳ ಸಂಚಾರಕ್ಕೆ ಸಾಕಷ್ಟು ಇದರಿಂದ ತೊಂದರೆಯಾಗುತ್ತಿದ್ದವು. ಅದನ್ನು ಮನಗಂಡು ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಕಾರ್ಕಳ ಕಡೆ ತೆರಳುವ ಬಸ್‌ಗಳವರಿಗೆ ಪ್ರತ್ಯೇಕವಾಗಿ ನಿಲುಗಡೆ ಮಾಡುವಂತೆ ಸೋಮವಾರ ಸೂಚನೆ ನೀಡಿದ್ದರು.
ಪಡುಬಿದ್ರಿಯಲ್ಲಿ ಹೆದ್ದಾರಿ ಚತುಃಷ್ಪಥ ಕಾಮಗಾರಿಯನ್ನು ಅವಶ್ಯಕ್ಕಿಂತ ಕಡಿಮೆ ಜಾಗ ಮತ್ತು ಹೆದ್ದಾರಿ ಬದಿ ಇದ್ದ ಜಾಗದಲ್ಲೇ ನಿರ್ವಹಿಸಲಾಗಿದೆ. ಮೂಲಭೂತವಾಗಿ ತ್ರಿಚಕ್ರ ವಾಹನ, ಟ್ಯಾಕ್ಸಿಗಳಿಗೆ ಪಡುಬಿದ್ರಿಯಲ್ಲಿ ನಿಲ್ದಾಣಗಳ ಕೊರತೆ ಬಾಧಿಸುತ್ತಿದೆ. ಈ ನಡುವೆಯೇ ಬಸ್ ನಿಲ್ದಾಣವನ್ನೂ ಜನತೆಯ ಸುರಕ್ಷಾ ಕ್ರಮಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ನಿರ್ಮಿಸಬೇಕಾಗಿದೆ. ಅದಕ್ಕಾಗಿ ಬೇಗನೇ ಸಾರ್ವಜನಿಕರ ಸಭೆಯೊಂದನ್ನು ಗ್ರಾ. ಪಂ. ಆಯೋಜಿಸಲಿದೆ ಎಂದು ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ದವಿ ಶೆಟ್ಟಿ ಪಾದೆಬೆಟ್ಟು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.