ಯಾಂತ್ರೀಕೃತ ಬೀಜ ಬಿತ್ತನೆಗೆ ಮೊರೆ ಹೋದ ಗ್ರಾಮೀಣ ರೈತರು
Team Udayavani, May 31, 2018, 6:15 AM IST
ತೆಕ್ಕಟ್ಟೆ : ಕರಾವಳಿಯ ಕೃಷಿಕರಿಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಯಾಂತ್ರೀಕೃತ ಬೀಜ ಬಿತ್ತನೆ ಕಾರ್ಯಕ್ಕೆ ಮೊರೆಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಕೃಷಿ ಭೂಮಿಗಳಲ್ಲಿ ಯಂತ್ರಗಳ ಸದ್ದು ಜೋರಾಗಿದೆ.
ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದ ರೈತರು ಕಳೆದ ಹಲವು ದಿನಗಳಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಗದ್ದೆಗಳಿಗೆ ಗೊಬ್ಬರ ಹಾಕಿ ಹದಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಸುರಿದ ಮಳೆ ಇದಕ್ಕೆ ಪೂರಕವಾಗಿದೆ.
ಯಾಂತ್ರೀಕೃತ ಬೀಜ ಬಿತ್ತನೆ
ರೈತರು ಈ ಹಿಂದೆ ಸಾಂಪ್ರದಾಯಿಕವಾಗಿ ಬೀಜ ಬಿತ್ತನೆ ಮಾಡಿ 20 ದಿನಗಳ ಅನಂತರ ನೇಜಿ ಕಾರ್ಯ ಮಾಡುತ್ತಿದ್ದರು. ಆದರೆ ಬದಲಾದ ಕಾಲಕ್ಕೆ ತಕ್ಕಂತೆ ರೈತರು ಮಾನವ ಶಕ್ತಿಯ ಬಳಕೆ ಕಡಿಮೆ ಮಾಡಿ ಯಾಂತ್ರಿಕೃತ ಬೀಜ ಬಿತ್ತನೆ ಮೊರೆ ಹೋಗಿದ್ದಾರೆ. ಇದರಿಂದ ಕೂಲಿ ಉಳಿತಾಯ ಮತ್ತು ಬೀಜ, ಗೊಬ್ಬರ ಮಿತ ಬಳಕೆಯಾಗುತ್ತದೆ.
ಡಿಎಸ್‌ಆರ್ ಪ್ರಾತ್ಯಕ್ಷಿಕೆ
ಕೃಷಿ ಇಲಾಖೆ, ಇಕ್ರಿಸ್ಯಾಟ್ ಸಿಮ್ಮಿಟ್ ಸಹಯೋಗದೊಂದಿಗೆ ಭೂ ಸಮೃದ್ಧಿ ಯೋಜನೆ ಅಡಿಯಲ್ಲಿ ಟ್ಯಾಕ್ಟರ್ ಡ್ರಮ್ ಸೀಡರ್ ಡಿಎಸ್‌ಆರ್ ಪ್ರಾತ್ಯಕ್ಷಿಕೆಗಳ ಮೂಲಕ ಬೀಜ ಬಿತ್ತನೆ ತೋರಿಸಿ ಕೊಡಲಾಗುತ್ತಿದೆ. ಇದು ರೈತರಿಗೆ ಹೊಸತನವನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತಿದೆ.
ಗಂಟೆಗೆ 1 ಎಕರೆ ಬೀಜ ಬಿತ್ತನೆ
ಏಕ ಕಾಲದಲ್ಲಿ ಟ್ಯಾಕ್ಟರ್‌ಗೆ ಅಳವಡಿಸಿದ ಡ್ರಮ್ ಸೀಡರ್ ಮೂಲಕ ಒಟ್ಟು 9 ಕಿರಿದಾದ ನೇಗಿಲಗಳು ಉಳುತ್ತಾ ಸುಮಾರು 9 ಇಂಚು ಅಂತರದಲ್ಲಿ ಬೀಜ ಬಿತ್ತನೆಯಾಗುವುದು. ಒಟ್ಟಿನಲ್ಲಿ ಗಂಟೆಗೆ ಸುಮಾರು 1ಎಕರೆ ವಿಸ್ತಿರ್ಣದ ಕೃಷಿ ಭೂಮಿಗೆ ಬೀಜ ಬಿತ್ತನೆಗೆ ಸಮರ್ಪಕವಾಗಿ ಬೀಜ ಬಿತ್ತನೆ ಮಾಡುವ ಸಾಮರ್ಥ್ಯವನ್ನು ಈ ಯಂತ್ರ ಹೊಂದಿದೆ.
ಕಳೆ ನಿಯಂತ್ರಣ
ಬೀಜ ಮೊಳಕೆ ಒಡೆದು ಸುಮಾರು 21 ದಿನಗಳಲ್ಲಿ ಸಸಿಯಾಗಿ ಬೆಳೆಯುವಾಗ ಕಳೆ ನಿಯಂತ್ರಣಕ್ಕಾಗಿ ರೌಂಡ್ ಅಪ್ ಹಾಗೂ ಪೆಂಡಿ ಲಿಕ್ವಿಡ್‌ಗಳನ್ನು ಸಿಂಪಡಿಸಿದಾಗ ಸಸಿ ಸಮೃದ್ಧವಾಗಿ ಬೆಳೆದು ಉತ್ತಮ ಫಸಲು ಕಂಡುಕೊಳ್ಳಲು ಸಾಧ್ಯ – ಯೋಗೀಶ್ , ಕೃಷಿ ಇಲಾಖೆ
12 ಕೆ.ಜಿ. ಬಿತ್ತನೆ ಬೀಜ
ಈ ಹಿಂದೆ ಚಾಪೆ ನೇಜಿ ಮಾಡುವಾಗ ಒಂದು ಎಕರೆ ವಿಸ್ತೀರ್ಣದ ಕೃಷಿಭೂಮಿಗೆ ಸುಮಾರು 25 ಕೆ.ಜಿ. ಬೀಜ ಬಿತ್ತನೆಗೆ ಬೇಕಾಗುತ್ತಿತ್ತು. ಟ್ಯಾಕ್ಟರ್ ಡ್ರಮ್ ಸೀಡರ್ ಬಳಕೆ ಮಾಡುವುದರಿಂದ ಸುಮಾರು 12 ಕೆ.ಜಿ. ಬೀಜ ಬಿತ್ತನೆಗೆ ಬೇಕಾಗುತ್ತಿದೆ. ಇದರಿಂದಾಗಿ ತುಂಬಾ ಉಳಿತಾಯವಾಗುತ್ತಿದೆ. ಕೃಷಿ ಇಲಾಖೆ ಉತ್ತಮ ನೆರವು ನೀಡಿದೆ.
– ವೆಂಕಟೇಶ್ ವೈದ್ಯ ಕೊಮೆ , ಸಾವಯವ ಕೃಷಿಕರು.
– ಲೋಕೇಶ್ ಆಚಾರ್ಯ ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.