“ಸಂಚಾರ ನಿಯಮ ಪಾಲನೆಯಿಂದ ಸುರಕ್ಷಿತ ಪ್ರಯಾಣ’
Team Udayavani, Aug 18, 2017, 7:10 AM IST
ಶಿರ್ವ: ಸಂಚಾರ ನಿಯಮಗಳನ್ನು, ರಸ್ತೆ ಚಿಹ್ನೆಗಳನ್ನು ಪಾಲನೆ ಮಾಡುವುದರಿಂದ ಸುರಕ್ಷಿತ ಪ್ರಯಾಣ ಸಾಧ್ಯವಾಗುತ್ತದೆ ಎಂದು ಶಿರ್ವ ಪಿಎಸ್‌ಐ ನರಸಿಂಹ ಶೆಟ್ಟಿ ಹೇಳಿದರು.
ಅವರು ಗುರುವಾರದಂದು ಮೂಡುಬೆಳ್ಳೆ ಪೇಟೆಯಲ್ಲಿ ‘ಉದಯವಾಣಿ’ ಪ್ರಾಯೋಜಿತ ಸಂಚಾರ ಚಿಹ್ನೆಗಳ ಮಾರ್ಗದರ್ಶಿಯನ್ನು ರಿಕ್ಷಾ, ಟೆಂಪೋ ಚಾಲಕರಿಗೆ, ಸಾರ್ವಜನಿಕರಿಗೆ ತರಿಸಿ ಮಾಹಿತಿ ನೀಡಿದರು.
ಸಂಗ್ರಾಹಯೋಗ್ಯ ಕೊಡುಗೆ
“ಉದಯವಾಣಿ’ ಪ್ರಾಯೋಜಿಸಿದ ಸಂಚಾರ ಚಿಹ್ನೆಗಳ ಮಾರ್ಗದರ್ಶಿ ಸಂಗ್ರಹ ಯೋಗ್ಯ ಕೊಡುಗೆಯಾಗಿದ್ದು, ಇದರಲ್ಲಿ ರಸ್ತೆ ಚಿಹ್ನೆಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ನೀಡಲಾಗಿದೆ. ಇದರಿಂದ ಚಾಲಕರಿಗೆ ಮಾರ್ಗದರ್ಶನ ದೊರೆಯುವುದು ಮಾತ್ರವಲ್ಲದೆ, ಡ್ರೆçವಿಂಗ್ ಲೈಸೆನ್ಸ್ ಪಡೆದುಕೊಳ್ಳುವವರ ಅಧ್ಯಯನಕ್ಕೂ ಸಹಕಾರಿಯಾಗಿದೆ. ಉತ್ತಮ ಗುಣಮಟ್ಟದ ಕಾಗದ ಹಾಗೂ ಮುದ್ರಣದಿಂದ ಮಾರ್ಗದರ್ಶಿಯು ಆಕರ್ಷಣೀಯವಾಗಿದ್ದು, ದೀರ್ಘ ಬಾಳಿಕೆ ಬರುವಂಥದ್ದಾಗಿದೆ ಎಂದು ಅವರು ಹೇಳಿದರು. ಎಎಸ್‌ಐ ಶಿವಾನಂದ, ಎಚ್‌ಸಿ ದಯಾನಂದ, ಗ್ರಾಪಂ ಸದಸ್ಯ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪಿಎಸ್‌ಐ ಕಾಳಜಿಗೆ ಶ್ಲಾಘನೆ
ಹೆಸರಿಗಷ್ಟೇ ಮಾಹಿತಿ ಮಾರ್ಗದರ್ಶಿಯನ್ನು ವಿತರಣೆ ಮಾಡದೆ, ರಿಕ್ಷಾ, ಟೆಂಪೋ ಚಾಲಕರೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ ಶಿರ್ವ ಪಿಎಸ್‌ಐ ನರಸಿಂಹ ಶೆಟ್ಟಿ ಅವರ ಕಾಳಜಿಗೆ ಶ್ಲಾಘನೆ ವ್ಯಕ್ತವಾಗಿದೆ. ಇತ್ತೀಚೆಗೆ ಶಿರ್ವ ಠಾಣೆಯ ವಿವಿಧೆಡೆ ಜರಗಿದ ಸುಧಾರಿತ ಪೊಲೀಸ್ ಬೀಟ್ ವ್ಯವಸ್ಥೆ ಸಭೆಗಳಲ್ಲೂ ಅವರು ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡುವಂತೆ ಮಾಡಿದ್ದರು. ಮೂಡುಬೆಳ್ಳೆ ಟ್ರಾಫಿಕ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವೈಯಕ್ತಿಕವಾಗಿ ಗಮನ ಹರಿಸುತ್ತಿರುವ ಅವರು, ಆದ್ಯತೆಯಲ್ಲಿ ದಿನಕ್ಕೋರ್ವ ಪೊಲೀಸ್ ಸಿಬಂದಿಯನ್ನು ನಿಯೋಜಿಸುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.