ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲ; ಮಾ. 29: ನೂತನ ಧ್ವಜಸ್ತಂಭ ಶೋಭಾಯಾತ್ರೆ
Team Udayavani, Mar 27, 2023, 6:18 PM IST
ಉಡುಪಿ: ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲದ ನೂತನ ಧ್ವಜಸ್ತಂಭ ಶೋಭಾಯಾತ್ರೆಗೆ ಮಾ. 29ರ ಮಧ್ಯಾಹ್ನ 3.30ಕ್ಕೆ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್, ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಜ್ವಲ್ ಡೆವಲಪರ್ನ ಪುರುಷೋತ್ತಮ ಪಿ. ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕೋಟ ಶ್ರೀ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ ಸಿ. ಕುಂದರ್, ಕಾಪು ಹೊಸ ಮಾರಿಗುಡಿ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಸಾಯಿರಾಧಾ ಡೆವಲಪರ್ನ ಮನೋಹರ ಎಸ್. ಶೆಟ್ಟಿ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಡಾ| ತಲ್ಲೂರು ಶಿವರಾಮ ಶೆಟ್ಟಿ, ರಂಜನ್ ಕಲ್ಕೂರ್, ತೋನ್ಸೆ ಮನೋಹರ ಶೆಟ್ಟಿ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಆರ್ಕಿಟೆಕ್ಟ್ ಶ್ರೀ ನಾಗೇಶ್ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಮಟ್ಟು ಶ್ರೀ ವಿಷ್ಣುಮೂರ್ತಿ ದೇಗುಲದ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಅಧ್ಯಕ್ಷ ಸಾಧು ಸಾಲ್ಯಾನ್, ಭವಾನಿ ಬಿಲ್ಡರ್ನ ನಾರಾಯಣ ಆಚಾರ್ಯ, ಕಾರ್ತಿಕ್ ಎಸ್ಟೇಟ್‌ನ ಹರಿಯಪ್ಪ ಕೋಟ್ಯಾನ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಸ್ವರ್ಣೋದ್ಯಮಿ ಮುರಹರಿ ಕೆ. ಆಚಾರ್ಯ ಭಾಗವಹಿಸಲಿದ್ದಾರೆ. ಶೋಭಾಯಾತ್ರೆಯು ರಾಜಾಂಗಣದ ವಾಹನ ನಿಲ್ದಾಣದಿಂದ ಕಲ್ಸಂಕ, ಗುಂಡಿಬೈಲು, ದೊಡ್ಡಣಗುಡ್ಡೆ ಮಾರ್ಗವಾಗಿ ದೇಗುಲ ವನ್ನು ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.