ನೂರಾರು ಹೈನುಗಾರರನ್ನು ಸೃಷ್ಟಿಸಿದ ಮಾದರಿ ಸಂಸ್ಥೆ

ಸಾೖಬ್ರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 16, 2020, 5:16 AM IST

1502KOTA1E11

10 ಲೀಟರ್‌ ಹಾಲಿನೊಂದಿಗೆ ಆರಂಭಗೊಂಡ ಸಂಸ್ಥೆ ಇಂದು ಗರಿಷ್ಠ ಸಂಖ್ಯೆಯಲ್ಲಿ ಹೈನುಗಾರರನ್ನು ಸೃಷ್ಟಿಸಿದ್ದಲ್ಲದೆ ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.

ಕೋಟ: ಹೈನುಗಾರರ ಏಳಿಗೆ ಯನ್ನೇ ಧ್ಯೇಯವಾಗಿಟ್ಟುಕೊಂಡು ಜನ್ಮ ತಳೆದ ಸಾೖಬ್ರಕಟ್ಟೆ ಹಾಲು ಉತ್ಪಾದಕರ ಸಂಘ ಗ್ರಾಮೀಣ ಸುಸ್ಥಿರ ಅಭಿವೃದ್ಧಿಗೂ ಇಂದು ಗಮನಾರ್ಹ ಕೊಡುಗೆ ನೀಡುತ್ತಿದೆ.

1982ರಲ್ಲಿ ಕೆನರಾ ಮಿಲ್ಕ್ ಯೂನಿಯನ್‌(ಕೆಮುಲ್‌) ಅಧೀನದಲ್ಲಿ ಇಲ್ಲಿನ ಮುಖ್ಯಪೇಟೆ ಸಮೀಪ ಚಿಕ್ಕ ಗುಡಿಸಲಿನಂತಹ ಕಟ್ಟಡದಲ್ಲಿ ಸ್ಥಾಪನೆಗೊಂಡಿತು. ಅಂದು 15ಮಂದಿ ಸದಸ್ಯರು ಸಂಘವನ್ನು ಆರಂಭಿಸಿದ್ದರು. ಸುತ್ತಲಿನ ಶಿರಿಯಾರ, ಅಚಾÉಡಿ, ಯಡ್ತಾಡಿ, ಕಾವಡಿ ಮುಂತಾದ ಐದಾರು ಕಿ.ಮೀ. ದೂರದಿಂದ ಇಲ್ಲಿಗೆ ಹಾಲುಪೂರೈಕೆಯಾಗುತಿತ್ತು. ಎಂ.ರಾಮದಾಸ ಕಿಣಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದರು. 2014ರಲ್ಲಿ ಸುವ್ಯವಸ್ಥಿತ ಕಟ್ಟಡ ನಿರ್ಮಿಸಿತು.

ದಶಕದ ಹಿಂದೆ ಮೂರು ಶಾಖೆ
ಈ ಸಂಘಕ್ಕೆ ಸುತ್ತಲಿನ ನಾಲ್ಕೈದು ಗ್ರಾಮದಿಂದ ಹೇರಳವಾಗಿ ಹಾಲು ಪೂರೈಕೆಯಾಗುತ್ತಿದ್ದರಿಂದ ಹತ್ತೇ ವರ್ಷಗಳಲ್ಲಿ ಕಾವಡಿ, ಮಧುವನ, ಎತ್ತಿನಟ್ಟಿಯಲ್ಲಿ ಸಂಘದ ಉಪಕೇಂದ್ರದ ಶಾಖೆ ಸ್ಥಾಪಿಸಿತು. ಆ ಕಾಲದಲ್ಲಿ ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಉಪಕೇಂದ್ರ ಹೊಂದಿದ ಡೈರಿ ಎನ್ನುವ ಕೀರ್ತಿಗೆ ಈ ಸಂಘ ಪಾತ್ರವಾಗಿತ್ತು. ಈಗ ಅದೆಲ್ಲವೂ ಸ್ವತಂತ್ರ ಸಂಘವಾಗಿದ್ದು, ಅಂದಿನ ವ್ಯಾಪ್ತಿಯಲ್ಲಿ ಆರೇಳು ಸಂಘಗಳು ಕಾರ್ಯನಿರ್ವಹಿಸುತ್ತಿವೆ.

ಹೈನುಗಾರಿಕೆಗೆ ಹೊಸ ಸ್ಪರ್ಶ
ಸಂಸ್ಥೆ ಸ್ಥಾಪನೆಯಾದ ಅನಂತರ ಸ್ಥಳೀಯವಾಗಿ ಸಾಕಷ್ಟು ಮಂದಿ ಹೈನುಗಾರಿಕೆಯಲ್ಲಿ ತೊಡಗಿಕೊಂಡರು. ಊರಿನ ಅಕ್ಕ-ಪಕ್ಕದಲ್ಲಿ ಶಾಖೆಗಳನ್ನು ಆರಂಭಿಸಿದ್ದರಿಂದ ಹಾಲು ಉತ್ಪಾದನೆ ಕೂಡ ಹೇರಳ ಪ್ರಮಾಣದಲ್ಲಿ ಹೆಚ್ಚಿತು.

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ 165ಮಂದಿ ಸದಸ್ಯರನ್ನು ಹೊಂದಿದ್ದು, ಪ್ರತಿದಿನ 750 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ ಹಾಗೂ 2014ರಲ್ಲಿ ಸಂಘದಲ್ಲಿ ಶೀತಲೀಕರಣ ಕೇಂದ್ರವನ್ನು ಸ್ಥಾಪಿಸಿದ್ದು ಸ್ಥಳೀಯ ಐದು ಡೈರಿಗಳಿಂದ ಇಲ್ಲಿಗೆ ಹಾಲು ಪೂರೈಕೆಯಾಗುತ್ತಿದೆ. ಪ್ರಸ್ತುತ ಅಧ್ಯಕ್ಷರಾದ ಪ್ರದೀಪ್‌ ಬಲ್ಲಾಳ್‌ ಅವರು ಸತತ 30ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಶಂಭು ಶೆಟ್ಟಿ ಇದ್ದಾರೆ. ಸ್ಥಳೀಯರಾದ ರಂಜಿತ್‌ ಕುಮಾರ್‌ಶೆಟ್ಟಿ, ಮಂಜುನಾಥ ಕೊಡ್ಲ, ಶಾರದಾ ಬಾೖ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ.

ಸಾೖಬ್ರಕಟ್ಟೆ ಸುತ್ತ-ಮುತ್ತ ಗ್ರಾಮೀಣ ಪ್ರದೇಶದಲ್ಲಿ 7 ಹಾಲು ಉತ್ಪಾದಕರ ಸಂಘಗಳಿದ್ದು ಸುಮಾರು 1300-1500 ಮಂದಿ ಕ್ರಿಯಾಶೀಲ ಹೈನುಗಾರರಿದ್ದಾರೆ ಮತ್ತು ಪ್ರತಿದಿನ ಒಟ್ಟು ಸುಮಾರು 6 ಸಾವಿರ ಲೀ. ಹಾಲು ಸಂಗ್ರಹವಾಗುತ್ತಿದೆ ಹಾಗೂ ಈ ಹಾಲಿಗೆ ಸರಕಾರದಿಂದ ಒಟ್ಟು 30 ಸಾವಿರ ರೂ ಪ್ರೋತ್ಸಾಹಧನ, 2.10ಲಕ್ಷ ರೂ ನಗದು ಹೈನುಗಾರರ ಕೈ ಸೇರುತ್ತದೆ. ಇದು ಪುಟ್ಟ ಗ್ರಾಮೀಣ ಪ್ರದೇಶವೊಂದರ ಅರ್ಥಿಕತೆಗೆ ಹೈನುಗಾರಿಕೆ ನೀಡುತ್ತಿರುವ ಕೊಡುಗೆಯಾಗಿದೆ.

ಪ್ರಶಸ್ತಿ ಪುರಸ್ಕಾರ
2013ನೇ ಸಾಲಿನಲ್ಲಿ ಒಕ್ಕೂಟದಿಂದ ಉತ್ತಮ ಸಂಘ ಎನ್ನುವ ಪುರಸ್ಕಾರಕ್ಕೆ ಸಂಸ್ಥೆ ಪಾತ್ರವಾಗಿದೆ ಹಾಗೂ ಧಾರವಾಡ ಒಕ್ಕೂಟದ ಪದಾಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ ಕಾರ್ಯಚಟುವಟಿಕೆಯನ್ನು ಗಮನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

10 ಲೀ. ಹಾಲಿನೊಂದಿಗೆ ಆರಂಭಗೊಂಡ ಈ ಸಂಸ್ಥೆ ಇದೀಗ ಸಾಕಷ್ಟು ಬೆಳವಣಿಗೆಯಾಗಿದೆ. ಸಂಸ್ಥೆಯ ಅಭಿವೃದ್ಧಿಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮೇಲಿದೆ.
ಪ್ರದೀಪ್‌ ಬಲ್ಲಾಳ್‌,ಅಧ್ಯಕ್ಷರು

ಅಧ್ಯಕ್ಷರು
ಎಂ.ರಾಮದಾಸ ಕಿಣಿ, ರಂಗನಾಥ ಅಡಿಗ, ಪ್ರಶಾಂತ್‌ ಬಲ್ಲಾಳ್‌, ಪ್ರದೀಪ್‌ ಬಲ್ಲಾಳ್‌ (ಹಾಲಿ)
ಕಾರ್ಯದರ್ಶಿ
ಕಮಲಾಕರ್‌ ರಾವ್‌, ನರಸಿಂಹ ಶ್ಯಾನುಭಾಗ್‌, ಶಂಭು ಶೆಟ್ಟಿ (ಹಾಲಿ)

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Road Mishap: ಅಂಪಾರು ತಲಕಲ್‌ಗುಡ್ಡೆ: ಬೈಕ್‌ ಸ್ಕಿಡ್‌; ಸವಾರ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.