ಧರ್ಮಸಂಸದ್‌ನಲ್ಲಿ ಸಂತ ದರ್ಶನ, ಸಂಸ್ಕೃತಿ ಪ್ರದರ್ಶನ
Team Udayavani, Nov 24, 2017, 10:43 AM IST
ಉಡುಪಿ: ಧರ್ಮ ಸಂಸದ್‌ನಲ್ಲಿ ಸಂತರಿಂದ ಧರ್ಮ ದರ್ಶನವಾದರೆ ಇನ್ನೊಂದೆಡೆ “ಹಿಂದೂ ವೈಭವ ಪ್ರದರ್ಶಿನಿ’ಯಲ್ಲಿ ಹಿಂದೂ ಸಂಸ್ಕೃತಿಯ ಪ್ರದರ್ಶನವಾಗಲಿದೆ. ಇದೊಂದು ಸೌಭಾಗ್ಯ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
“ಧರ್ಮಸಂಸದ್’ನ ಭಾಗವಾದ ಹಿಂದೂ ವೈಭವ ಪ್ರದರ್ಶಿನಿಯನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಹೃದಯದೊಳಗೆ ದೇವರಿರಬೇಕು ಎಂಬ ಮಾತಿನಂತೆ ಇಲ್ಲಿ ಗುಹೆಯಾಕಾರದ ಪ್ರದರ್ಶಿನಿಯಲ್ಲಿ ಶ್ರೀರಾಮನ ವೈಭವವೂ ಒಳಗೊಂಡ ಹಿಂದೂ ವೈಭವ ತೆರೆದುಕೊಂಡಿದೆ ಎಂದು ಶ್ರೀಗಳು ಹೇಳಿದರು.
ವೈಭವ ಮರುಕಳಿಸಲಿ: ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಭಾಗಯ್ನಾ ಅವರು, “ಪುರಾಣದಲ್ಲಿ ಉಲ್ಲೇಖವಾಗಿರುವ ಹಿಂದೂ ವೈಭವ ವಾಸ್ತವವೇ ಆಗಿತ್ತು. ಶಿಕ್ಷಣ, ಕಲೆ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹಿಂದೂ ಸಾಮ್ರಾಜ್ಯ ಮುಂಚೂಣಿಯಲ್ಲಿದ್ದು ವಿಶ್ವಕ್ಕೆ ಕೊಡುಗೆ ನೀಡಿದೆ. ಅಂತಹ ವೈಭವ ಮರುಕಳಿಸಬೇಕಾಗಿದೆ. ಅಸ್ಪೃಶ್ಯತೆಯಂತಹ ಅನಿಷ್ಠಗಳು ದೂರವಾಗಬೇಕು. ಆ ಮೂಲಕ ಜಗತ್ತಿನ ಕಲ್ಯಾಣವಾಗಬೇಕು’ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಬಾೖ ತೊಗಾಡಿಯಾ, ಪ್ರಮುಖರಾದ ದೀವೇಶ್ವರ್ ಮಿಶ್ರಾ, ವಿಹಿಂಪ ರಾಷ್ಟ್ರೀಯ ಉಪಾಧ್ಯಕ್ಷ ಬಾಲಕೃಷ್ಣ ನಾಯಕ್, ದಕ್ಷಿಣ ಪ್ರಾಂತ್ಯಾಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮಾನೆ, ಉ.ಕರ್ನಾಟಕ ಅಧ್ಯಕ್ಷ ಡಾ| ಎಸ್.ಆರ್. ರಾಮನ್ ಗೌಡರ್ ಉಪಸ್ಥಿತರಿದ್ದರು. ವಿಹಿಂಪ ಪ್ರಾಂತ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಸ್ತವಾನೆಗೈದರು. ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಸ್ವಾಗತಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಊಟೋಪಚಾರ
ಗುರುವಾರ ಧರ್ಮಸಂಸದ್ ಅಧಿವೇಶನದ ಪರಿಸರದಲ್ಲಿ ಸಾಧುಸಂತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಮತ್ತು ಸಂಜೆ ಉಪಾಹಾರ, ಪಾನೀಯ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತರ ಭಾರತದ ಸಂತರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೆ ಚಪಾತಿ, ಸಬ್ಜಿ, ದಾಲ್ ತಯಾರಿಸಲಾಗಿದೆ. ಪ್ರದರ್ಶಿನಿ ನೋಡುವವರಿಗೆ ಬೆಳಗ್ಗಿನಿಂದ ರಾತ್ರಿವರೆಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.
ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಪರಿಶ್ರಮದಿಂದ ಐತಿಹಾಸಿಕ ಸಮಾವೇಶ ಆಗಗೊಳ್ಳುತ್ತಿದೆ. ಇವರಲ್ಲಿ ಕೆಲವರು ತಿಂಗಳುಗಟ್ಟಲೆ ಪೂರ್ಣ ಸಮಯ ನೀಡಿದವರಿದ್ದಾರೆ. ವಿಹಿಂಪ ಸೋದರ ಸಂಸ್ಥೆಯಾದ ಬಜರಂಗ ದಳದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರಾಲಂಕಾರದಲ್ಲಿ ಇವರದೇ ಪಾತ್ರ ಪ್ರಧಾನವಾದುದು.
ಶರಣ್ ಪಂಪ್‌ವೆಲ್, ಸುನೀಲ್ ಕೆ. ಆರ್., ಸುಧೀರ್ ನಿಟ್ಟೆ, ಉಮೇಶ್ ಬೆಳ್ಮಣ್ಣು, ಸಂತೋಷ್ ಬೆಳ್ಮಣ್ಣು, ನಿತಿನ್ ಕಾರ್ಕಳ ಮೊದಲಾದವರು ಮೂರ್‍ನಾಲ್ಕು ತಿಂಗಳುಗಳಿಂದ ಇದಕ್ಕಾಗಿ ಪೂರ್ನ ಸಮಯ ಕೊಟ್ಟು ಶ್ರಮಿಸುತ್ತಿದ್ದಾರೆ. ಉತ್ತರ ಭಾರತದಿಂದ ಬಂದ ಸಾಧು ಸಂತರಿಗೂ ಈ ವ್ಯವಸ್ಥೆ ಅಚ್ಚರಿ ಮೂಡಿಸಿದೆ.
ಮಂಗಳೂರಿನಿಂದ 25000 ಮಂದಿ
ಮಂಗಳೂರು: ಉಡುಪಿಯಲ್ಲಿ ನ. 24ರಿಂದ ನಡೆಯುವ ಧರ್ಮ ಸಂಸದ್‌ನ ಕೊನೆಯ ದಿನವಾದ ನ. 26ರಂದು ಜರಗುವ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಂಗಳೂರಿನ 25,000 ಮಂದಿ ಭಾಗವಹಿಸಲಿದ್ದಾರೆ. ಧರ್ಮ ಸಂಸದ್ ಕೇಂದ್ರೀಯ ಸಮಿತಿ ಕಾರ್ಯದರ್ಶಿ ಜಗದೀಶ ಶೇಣವ ಅವರು ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂದಿರ ದಲ್ಲಿರುವ ಧರ್ಮ ಸಂಸದ್ ಕಾರ್ಯಾಲಯ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಗುರುವಾರ ಮಾಹಿತಿ ನೀಡಿದರು.
ಅಂದು ಮಧ್ಯಾಹ್ನ 12 ಗಂಟೆಗೆ ಹಿಂದೂ ಬಾಂಧವರು ಮಂಗಳೂರಿನಿಂದ ಉಡುಪಿಗೆ ತೆರಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಉಡುಪಿ ಜೋಡುಕಟ್ಟೆಯಿಂದ ಸಂತರ ನೇತೃತ್ವದಲ್ಲಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶೋಭಾಯಾತ್ರೆಯಲ್ಲಿ ದ.ಕ. ಜಿಲ್ಲೆಯ 100 ಭಜನಾ ತಂಡಗಳು ಭಾಗವಹಿಸಲಿವೆ ಎಂದರು.
ಸುಮಾರು 300 ಬಸ್, 500 ಚತುಷcಕ್ರ ವಾಹನಗಳು, 300 ತ್ರಿಚಕ್ರ ವಾಹನಗಳು, 1,500 ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ. ಮಂಗಳೂರಿ ನಿಂದ ತೆರಳುವ ಹಿಂದೂ ಬಾಂಧವ ರಿಗೆ ಉದ್ಯಾವರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 26ರಂದು ಬೆಳಗ್ಗೆ ನಡೆಯುವ ಸಮಾಜ ಪ್ರಮುಖರ ಸಮಾವೇಶದಲ್ಲಿ ಮಂಗಳೂರಿನ 49 ಜಾತಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಸಂಜೆ 4 ಗಂಟೆಗೆ ಬೃಹತ್ ಹಿಂದೂ ಸಮಾಜೋತ್ಸವ ಜರಗಲಿದೆ. ಉಡುಪಿ ರೋಯಲ್ ಗಾರ್ಡನ್ಸ್‌ನಲ್ಲಿ “ಹಿಂದೂ ವೈಭವ’ ಪ್ರದರ್ಶಿನಿ ನಡೆಯಲಿದ್ದು, ಸಾರ್ವಜನಿಕರಲ್ಲದೇ, ಇದನ್ನು ಸುಮಾರು 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವೀಕ್ಷಿಸಲಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಪ್ರಮುಖರಾದ ಜಯಪ್ರಕಾಶ್ ತುಂಬೆ, ಸುಧಾಕರ ರಾವ್ ಪೇಜಾವರ, ನಿಟ್ಟೆ ಶಶಿಧರ್ ಶೆಟ್ಟಿ, ಗೋಪಾಲ್ ಉಪಸ್ಥಿತರಿದ್ದರು.
ಕಾಸರಗೋಡಿನಿಂದ 5000 ಮಂದಿ
ಕಾಸರಗೋಡು: ಉಡುಪಿಯಲ್ಲಿ ನ. 24ರಿಂದ 26ರ ವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಸಮಸ್ತ ಹಿಂದೂ ಸಂತರನ್ನೊಳಗೊಂಡ ಧರ್ಮ ಸಂಸದ್‌ನಲ್ಲಿ ಕಾಸರಗೋಡಿನಿಂದ ಐದು ಸಾವಿರ ಮಂದಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ| ಮೋಹನ್ ಭಾಗವತ್ ಅವರು ಚಾಲನೆ ನೀಡಲಿರುವ ಕಾರ್ಯಕ್ರಮದಲ್ಲಿ ಸಾಧು ಸಂತರು, ವಿಶ್ವಹಿಂದೂ ಪರಿಷತ್‌ನ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಇಲ್ಲಿ ಸಂವಾದ ಸಮಾಲೋಚನೆ ಚರ್ಚೆಗಳು ನಡೆಯಲಿವೆ ಎಂದು ವಿಹಿಂಪ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ ಅವರು ತಿಳಿಸಿದ್ದಾರೆ.
ನಮ್ಮ ನೆಲದ ಮಹತ್ವ ತಿಳಿಸುವ ವಾಷಿಂಗ್ಟನ್
ನಾನು ವಾಷಿಂಗ್ಟನ್‌ಗೆ ಭೇಟಿ ನೀಡಿದಾಗ ಅಲ್ಲಿ “ಭಾರತದ ಭೂಮಿ ಕೇವಲ ಮಣ್ಣಲ್ಲ. ಅದು ತಾಯಿ. ಅದನ್ನು ಶೋಷಿಸಬೇಡಿ’ ಎಂದು ಬರೆಯಲಾಗಿತ್ತು. ಇದು ಭಾರತವೋ ಅಮೆರಿಕವೋ ಎಂದು ನನಗೆ ಅನುಮಾನ ಬರುವಂತಾಗಿತ್ತು. ಎಲ್ಲ ಸೃಷ್ಟಿಯಲ್ಲಿಯೂ ದೇವರಿದ್ದಾನೆ. ಅಂತಹ ಏಕಾತ್ಮಕತೆ ಹಿಂದೂ ಧರ್ಮದಲ್ಲಿದೆ. ಅಂತಹ ಧರ್ಮದಲ್ಲಿ ದ್ವೇಷ, ಅಹಂಕಾರ ಇರುವುದಿಲ್ಲ.
ಭಾಗಯ್ನಾ ಸಹಕಾರ್ಯವಾಹರು, ರಾ.ಸ್ವ.ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Network Problem: ಇಲ್ಲಿ ಟವರ್ ಇದೆ, ಆದರೆ ನೆಟ್ವರ್ಕ್ ಸಿಗಲ್ಲ!
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.