ಹೈನುಗಾರಿಕೆ ಲಾಭದಾಯಕವನ್ನಾಗಿಸುವ ಬಗ್ಗೆ ಪಾಠ ಹೇಳಿದ ಸಂಸ್ಥೆ

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Mar 5, 2020, 5:36 AM IST

ಹೈನುಗಾರಿಕೆ ಲಾಭದಾಯಕವನ್ನಾಗಿಸುವ ಬಗ್ಗೆ ಪಾಠ ಹೇಳಿದ ಸಂಸ್ಥೆ

12 ಲೀ. ಹಾಲು ಸಂಗ್ರಹಣೆಯೊಂದಿಗೆ ಹುಟ್ಟಿದ ಈ ಸಂಘವು ಇಂದು 700 ಲೀ.ವರೆಗೆ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಪೂರೈಸುತ್ತಿದೆ. ಹೈನುಗಾರಿಕೆಗೆ ಪ್ರೇರಣೆಯೊಂದಿಗೆ ಸದಸ್ಯರಿಗೆ ಸ್ವಾವಲಂಬಿಯಾಗುವ ಕನಸು ಬಿತ್ತಿದ ಈ ಸಂಘ ಸಾಗಿದ ಹಾದಿ ಪ್ರಶಂಸನೀಯ.

ಕೋಟ: 1974ರಲ್ಲಿ ಉಡುಪಿ ಜಿಲ್ಲೆಯಲ್ಲಿ ಕೆನರಾ ಮಿಲ್ಕ್ ಯೂನಿಯನ್‌ ಸ್ಥಾಪನೆಯಾಗಿ ಹೈನುಗಾರಿಕೆಯ ಕುರಿತು ಜಾಗೃತಿ ಮೂಡುತ್ತಿದ್ದ ಸಂದರ್ಭದಲ್ಲೇ ಅದೇ ವರ್ಷ ಮಾ.5ರಂದು ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ ಆರಂಭವಾಯಿತು. ಸ್ಥಳೀಯ ಮುಖಂಡರಾಗಿದ್ದ ಎಚ್‌. ಸದಾಶಿವ ಹಂದೆ ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರು ಹಾಗೂ ಪಿ.ವಿ.ಶ್ರೀನಿವಾಸ ಐತಾಳ ಪ್ರಥಮ ಕಾರ್ಯದರ್ಶಿ. ಆ ಕಾಲದಲ್ಲಿ ಕೋಟ ಹೋಬಳಿಯಲ್ಲಿ ಎರಡೇ ಹಾಲು ಉತ್ಪಾದಕರ ಸಂಘಗಳಿದ್ದವು. ಸುತ್ತ ಆರೇಳು ಗ್ರಾಮಗಳಿಂದ ಇಲ್ಲಿಗೆ ಹಾಲು ಸರಬರಾಜಾಗುತಿತ್ತು.

2006ರಲ್ಲಿ ಸ್ವಂತ ಕಟ್ಟಡ
ಸುಮಾರು 60-70 ಸದಸ್ಯರು, 75 ಲೀಟರ್‌ ಹಾಲಿನೊಂದಿಗೆ ಸಂಘ ಸ್ಥಾಪನೆಯಾಗಿತ್ತು. ಅನಂತರ ಕೋಟ ಸಿ.ಎ. ಬ್ಯಾಂಕ್‌ನ ಸಾಲಿಗ್ರಾಮ ಶಾಖೆಯ ಕಟ್ಟಡ ಹಾಗೂ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯಾಚರಿಸಿ 2006ರಲ್ಲಿ ಗುರುನರಸಿಂಹ ದೇವಸ್ಥಾನ ಸಮೀಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು.

ಪ್ರಸ್ತುತ ಸ್ಥಿತಿಗತಿ
ಪ್ರಸ್ತುತ ಸಂಘದಲ್ಲಿ 297ಮಂದಿ ಸದಸ್ಯರಿದ್ದು, ಸುಮಾರು 700-750ಲೀಟರ್‌ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲಿ ಅಧ್ಯಕ್ಷರಾಗಿ ಕೆ.ತಾರಾನಾಥ ಹೊಳ್ಳ, ಕಾರ್ಯದರ್ಶಿಯಾಗಿ ಕೆ.ಸೂರ್ಯನಾರಾಯಣ ಹೊಳ್ಳ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯರಾದ ಪಿ.ಬಲರಾಮ ನಕ್ಷತ್ರಿ, ರಾಜು ದೇವಾಡಿಗ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ.

ವಿಶೇಷ ಸೌಲಭ್ಯಗಳು
ಸಂಘಕ್ಕೆ ಹಾಲು ಪೂರೈಕೆ ಮಾಡುವ ಸದಸ್ಯರು ಅಕಾಲಿಕ ನಿಧನ ಹೊಂದಿದರೆ 3 ಸಾವಿರ ರೂ. ಸಾಂತ್ವನ ಧನ ಹಾಗೂ ಹಾಲು ಕರೆಯುವ ರಾಸು ಮರಣ ಹೊಂದಿದರೆ ಧಪನ ಸಂದರ್ಭ 2 ಸಾವಿರ ರೂ. ನೀಡುವ ಯೋಜನೆ ಇದೆ. ಅತಿ ಹೆಚ್ಚು ಹಾಲು ಪೂರೈಕೆ ಮಾಡುವ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ, ಜಾನುವಾರು ಸಾಕಾಣಿಕೆಗೆ ಪೂರಕ ಸೌಲಭ್ಯಗಳನ್ನು ಸಂಘ ನೀಡುತ್ತಿದೆ.

ಕೆನರಾ ಮಿಲ್ಕ್ ಜತೆ-ಜತೆಗೆ ಆರಂಭಗೊಂಡ ಈ ಸಂಸ್ಥೆ ಸುತ್ತಲಿನ ಊರುಗಳಿಗೆ ಹೈನುಗಾರಿಕೆಯಿಂದಾಗುವ ಲಾಭವನ್ನು ಪಾಠ ಮಾಡಿತ್ತು. ಮನೆ-ಮನೆ ತೆರಳಿ ರೈತರನ್ನು ಸಂಘಟಿಸುವ ಕಾರ್ಯ ಮಾಡಿತ್ತು. ಇದರ ಫಲವಾಗಿ ಊರಿನಲ್ಲಿ ನೂರಾರು ಮಂದಿ ಹೊಸ ಹೈನುಗಾರರು ಸೃಷ್ಟಿಯಾದರು ಮತ್ತು ಉಪ ಉದ್ಯಮವಾಗಿ ಸ್ವೀಕರಿಸಿದರು. ಸಂಸ್ಥೆಯ ಯಶಸ್ಸು ಗಮನಿಸಿದ ಹಲವಾರು ಮಂದಿ ತಮ್ಮ ಊರುಗಳಲ್ಲೂ ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿ ಕ್ಷೀರೋದ್ಯಮಕ್ಕೆ ಮುನ್ನುಡಿ ಬರೆದರು.

ಪ್ರಶಸ್ತಿ
1990ರಿಂದ 95ನೇ ಸಾಲಿನ ಅವಧಿಯಲ್ಲಿ ನಿರಂತರವಾಗಿ ರಾಜ್ಯ ಮಟ್ಟ, ಉಡುಪಿ ಜಿಲ್ಲಾಮಟ್ಟದ ಉತ್ತಮ ಸಂಘ, ತಾಲೂಕು ಮಟ್ಟದ ಉತ್ತಮ ಸಂಘ, ಜಿಲ್ಲಾ ಮಟ್ಟದ ಅತ್ಯುತ್ತಮ ಗುಣಮಟ್ಟದ ಸಂಘ ಎನ್ನುವ ಪ್ರಶಸ್ತಿ ಸಂಘಕ್ಕೆ ದೊರೆತಿದೆ ಹಾಗೂ ಸ್ಥಳೀಯ ಸಹಕಾರಿ ಸಂಘಗಳು ಕೂಡ ಸಂಸ್ಥೆಯನ್ನು ಗುರುತಿಸಿ ಗೌರವಿಸಿದೆ.

ಸಂಘವು ಆರಂಭದಿಂದ ಹೈನುಗಾರರ ಬೆಳವಣಿಗೆಗೆ ಮಹತ್ವವನ್ನು ನೀಡಿದ್ದು, ಇದೀಗ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಂಸ್ಥೆಯ ಕೀರ್ತಿಯನ್ನು ಇದೇ ರೀತಿ ಮುಂದುವರಿಸಬೇಕಾದ ಹೊಣೆ ನಮ್ಮ ಮೇಲಿದೆ.
ಕೆ.ತಾರಾನಾಥ ಹೊಳ್ಳ, ಅಧ್ಯಕ್ಷರು

ಅಧ್ಯಕ್ಷರು
ಎಚ್‌. ಸದಾಶಿವ ಹಂದೆ, ಗಂಗಾಧರ ಐತಾಳ, ಶ್ರೀಕಾಂತ್‌ ಐತಾಳ, ಸುಬ್ರಾಯ ಹೆಬ್ಟಾರ್‌, ನರಸಿಂಹ ಹೇಳೆì, ಆನಂತಪದ್ಮನಾಭ ಐತಾಳ, ಶಂಕರನಾರಾಯಣ ಹೊಳ್ಳ, ಕೆ.ತಾರಾನಾಥ ಹೊಳ್ಳ ( ಹಾಲಿ )

ಕಾರ್ಯದರ್ಶಿ
ಪಿ.ವಿ.ಶ್ರೀನಿವಾಸ ಐತಾಳ, ಶಂಕರ ಐತಾಳ, ನಾಗರಾಜ್‌ ಐತಾಳ, ಗಾಂಧೀ ಐತಾಳ. ಶ್ರೀನಿವಾಸ ಹೇಳೆì, ಸೂರ್ಯನಾರಾಯಣ ಹೊಳ್ಳ (ಹಾಲಿ )

-ರಾಜೇಶ್‌ ಗಾಣಿಗ ಅಚ್ಲಾಡಿ 

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

1-udu

Udupi; ಗೀತಾಮೃತಸಾರ ಮರುಮುದ್ರಿತ ಕೃತಿ ಅನಾವರಣ

Malpe-Fire

Malpe: ಮೀಟಿಂಗ್‌ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.