ಸಾಲಿಗ್ರಾಮ: ಗಿಫ್ಟ್ ಸ್ಕೀಮ್ ಹೆಸರಲ್ಲಿ ಲಕ್ಷಾಂತರ ರೂ. ವಂಚನೆ
Team Udayavani, Sep 26, 2017, 11:08 AM IST
ಬ್ರಹ್ಮಾವರ: ಗಿಫ್ಟ್ ಸ್ಕೀಮ್ ಹೆಸರಲ್ಲಿ ಹಣ ಸಂಗ್ರಹಿಸಿ, 110 ಮಂದಿಗೆ ಒಟ್ಟು 3 ಲ. ರೂ. ಗೂ ಅಧಿಕ ಹಣ ವಂಚಿಸಿದ ಪ್ರಕರಣ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಸಾಲಿಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ರಂಗನಕೆರೆ ನಿವಾಸಿ ಹಸನ್, ಇಬ್ರಾಹಿಂ ಹಾಗೂ ಕಾರ್ಕಡ ಗ್ರಾಮದ ಸಿರಾಜ… ಅವರು ಸಾಲಿಗ್ರಾಮ ಕಾರ್ಕಡದಲ್ಲಿ ನ್ಯೂ ಸ್ಟಾರ್ ಗಿಫ್ಟ್ ಸ್ಕೀಮ… ಬಂಪರ್ ಬಹುಮಾನ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಂತಿನ ಮೂಲಕ ನೀಡುವುದಾಗಿ ತಿಳಿಸಿ ವಂಚಿಸಿದ ಆರೋಪಿಗಳು.
110 ಮಂದಿಗೆ ವಂಚನೆ
ಈ ಸಂಬಂಧ ವಂಚನೆಗೊಳಗಾದ ಕೊಕ್ಕರ್ಣೆ ಮೊಗವೀರ ಪೇಟೆಯ ಪಲ್ಲವಿ ಅವರ ಪರಿಚಯದ ಜನರನ್ನು ಸ್ಕೀಮ… ಸದಸ್ಯರಾಗಿ ಸೇರಿಸಿ ಅವರಿಂದ ಹಣವನ್ನು ಕಂತಿನ ಮೂಲಕ ಪಡೆದು ತಮಗೆ ನೀಡಿದ್ದಲ್ಲಿ ಓರ್ವ ಸದಸ್ಯನಿಗೆ ತಿಂಗಳಿಗೆ 40 ರೂ. ಕಮಿಷನ್ ಕೊಡುವುದಾಗಿ ತಿಳಿಸಿದ್ದಾರೆ. ಅದರಂತೆ ಪಲ್ಲವಿ ಅವರು ತಮ್ಮ ಊರಿನ ಸುಮಾರು 110 ಸದಸ್ಯರನ್ನು ಪಟ್ಟಿ ಮಾಡಿ 2015ರ ಡಿ. 14ರ ಮಧ್ಯಾಹ್ನ 1 ಗಂಟೆಗೆ ಮೊಗವೀರ ಪೇಟೆಯಲ್ಲಿ ಪ್ರತಿವಾರಕ್ಕೆ ಒಬ್ಬರಿಗೆ 30 ರೂ.ನಂತೆ ಒಟ್ಟು 3,300 ರೂ. ಗಳನ್ನು ಆರೋಪಿ ಇಬ್ರಾಹಿಂಗೆ ನೀಡಿದ್ದಾರೆ.
ಆ ಬಳಿಕ ಸದಸ್ಯರಿಗೆ ನ್ಯೂ ಸ್ಟಾರ್ ಗಿಫ್ಟ್ ಸ್ಕೀಮ… ಎಂದು ನಮೂದಿಸಿದ ಕಾರ್ಡ್ ಹಂಚಲು ಪಲ್ಲವಿ ಅವರಿಗೆ ನೀಡಿದ್ದು, 110 ಸದಸ್ಯರಿಂದ ಹಣ ಪಡೆದು ಸ್ಕೀಮ… ಕಾರ್ಡ್‌ಗೆ ಸಹಿ ಮಾಡಿಸಿ, ಪ್ರತಿವಾರ ಎಲ್ಲರ ಮನೆ- ಮನೆಗೆ ಹೋಗಿ ಹಣ ಸಂಗ್ರಹಿಸುತ್ತಿದ್ದು, ಅದನ್ನು ಪ್ರತಿ ಗುರುವಾರ ಆಪಾದಿತರಿಗೆ ನೀಡುತ್ತಿದ್ದರು.
10 ತಿಂಗಳ ಸ್ಕೀಮ್
ಹೀಗೆ ಒಟ್ಟು 3,65,200 ರೂ. ಹಣವನ್ನು ಸಂಗ್ರಹಿಸಿ ಆಪಾದಿತರಿಗೆ ನೀಡಿದ್ದಾರೆ. ಸ್ಕೀಮ… 10 ತಿಂಗಳ ಅವಧಿಯದ್ದಾಗಿದ್ದು, ಪ್ರತಿವಾರ ಡ್ರಾ ಆದಾಗಲೂ ಪಲ್ಲವಿ ಅವರ ಗ್ರೂಪ್ ಸದಸ್ಯರಿಗೆ ಈ ಬಾರಿ ಲಕ್ಕಿ ಡ್ರಾ ಬಂದಿಲ್ಲವೆಂದು ತಿಳಿಸುತ್ತಿದ್ದು, ಈವರೆಗೆ ಯಾವುದೇ ವಸ್ತುಗಳನ್ನು ಕೊಡದೇ ವಂಚಿಸಿದ್ದಾರೆ ಎಂದು ಪಲ್ಲವಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.