ಸಾಲಿಗ್ರಾಮ – ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಸಿದ್ಧ


Team Udayavani, Jun 18, 2018, 2:15 AM IST

phc-17-6.jpg

ಪ್ರಾ.ಆ. ಕೇಂದ್ರ ಸಾಲಿಗ್ರಾಮ ಸಂಪರ್ಕ: 0820 2564560
ಪ್ರಾ.ಆ. ಕೇಂದ್ರ ಸಾಸ್ತಾನ  ಸಂಪರ್ಕ: 0820 2584910

ಸಂಪರ್ಕ ಸಂಖ್ಯೆ
ಡಾ| ರಾಘವೇಂದ್ರ ರಾವ್‌, ವೈದ್ಯಾಧಿಕಾರಿಗಳು:  9448696970
ಡಾ| ದಿಕ್ಷಾ, ವೈದ್ಯಾಧಿಕಾರಿ: 9481517238

ಕೋಟ: ಕೋಟ ಹೋಬಳಿಯ ಸಾಲಿಗ್ರಾಮ ಹಾಗೂ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆಗಾಲದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಸಿದ್ಧತೆ ನಡೆದಿದೆ. ಔಷಧಗಳ ಸಂಗ್ರಹ, ರೋಗದ ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾಲಿಗ್ರಾಮ, ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಿಗ್ರಾಮ ಕೇಂದ್ರವು ಪ.ಪಂ. ವ್ಯಾಪ್ತಿಯ ಚಿತ್ರಪಾಡಿ, ಗುಂಡ್ಮಿ, ಪಾರಂಪಳ್ಳಿ, ಕಾರ್ಕಡ ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 17,256 ಜನಸಂಖ್ಯೆ ಹೊಂದಿದೆ. ಕಾರ್ಕಡದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವಿದ್ದು, ಗುಂಡ್ಮಿ, ಪಾರಂಪಳ್ಳಿ, ಕಾರ್ಕಡದಲ್ಲಿ ಉಪಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಸಾಸ್ತಾನ ಆರೋಗ್ಯ ಕೇಂದ್ರವು ಐರೋಡಿ ಹಾಗೂ ಪಾಂಡೇಶ್ವರ ಗ್ರಾ.ಪಂ. ವ್ಯಾಪ್ತಿಯನ್ನು ಒಳಗೊಂಡಿದ್ದು, ಸುಮಾರು 12,500 ಜನಸಂಖ್ಯೆ ಇದ್ದು, ಐರೋಡಿಯಲ್ಲಿ   ಪ್ರಾ.ಆ.ಕೇಂದ್ರದ ಕಟ್ಟಡ ಹಾಗೂ ಮೂಡುಹಡು, ಹಂಗಾರಕಟ್ಟೆ, ಪಾಂಡೇಶ್ವರ, ಐರೋಡಿಗಳಲ್ಲಿ ಉಪಕೇಂದ್ರವಿದೆ.

ಮುನ್ನೆಚ್ಚರಿಕೆ ಕ್ರಮಗಳು
ಮಳೆಗಾಲದಲ್ಲಿ ಎದುರಾಗುವ ಸಾಂಕ್ರಮಿಕ ರೋಗಗಳ ಕುರಿತು ಆರೋಗ್ಯ ಕೇಂದ್ರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ಶುಚಿತ್ವದ ಕುರಿತು ಎಚ್ಚರಿಕೆ ನೀಡಿ ಕರಪತ್ರಗಳನ್ನು ಹಂಚುತ್ತಿದ್ದಾರೆ. ರೋಗದ ಲಕ್ಷಣ ಕಂಡು ಬಂದರೆ ಮುಂಜಾಗೃತೆ ಕ್ರಮ ಹಾಗೂ ದೃಢಪಟ್ಟಲ್ಲಿ  ಖಾಯಿಲೆ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ.

ವೈದ್ಯರ ಲಭ್ಯತೆ  
ಸಾಲಿಗ್ರಾಮ ಹಾಗೂ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗ್ಗೆ 9ರಿಂದ ಅಪರಾಹ್ನ 1 ಹಾಗೂ ಅಪರಾಹ್ನ 1.45ರಿಂದ 4.30ರ ವರೆಗೆ ತರೆದಿರುತ್ತದೆ. ಈ ಸಂದರ್ಭ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಕಿರಿಯ ಆರೋಗ್ಯ ಸಹಾಯಕರು ಸೇವೆಗೆ ಲಭ್ಯವಿರುತ್ತಾರೆ. ಮಂಗಳವಾರ ಪಾರಂಪಳ್ಳಿ ಉಪಕೇಂದ್ರ ಹಾಗೂ ಬುಧವಾರ ಗುಂಡ್ಮಿ ಉಪಕೇಂದ್ರಕ್ಕೆ  ಹಿರಿಯ ವೈದ್ಯರು ಭೇಟಿ ನೀಡುತ್ತಾರೆ.

ಪ್ರಮುಖ ಸಮಸ್ಯೆಗಳು
ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಗುಂಡ್ಮಿ, ಪಾರಂಪಳ್ಳಿ ಉಪಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸಾಸ್ತಾನ ಆರೋಗ್ಯ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು ತುರ್ತು ಸಂದರ್ಭದಲ್ಲಿ ರೋಗಿಗಳ ದಾಖಲಾತಿ, ಚಿಕಿತ್ಸೆ ಕಷ್ಟವಾಗುತ್ತಿದೆ. ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಇಲ್ಲಿನ ಖಾಯಂ ವೈದ್ಯರು ಬೇರೆ ಕಡೆಗೆ ನಿಯೋಜನೆಗೊಂಡಿರುವುದರಿಂದ ಸಾಲಿಗ್ರಾಮ ಕೇಂದ್ರದ ವೈದ್ಯಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಿಸಿ, ಗುತ್ತಿಗೆ ಆಧಾರದ ವೈದ್ಯೆಯೋರ್ವರ ಮೂಲಕ ಸೇವೆ ನೀಡಲಾಗುತ್ತಿದೆ ಜತೆಗೆ ಮೂಡಹಡು ಹಾಗೂ ಹಂಗಾರಕಟ್ಟೆಯ ಉಪಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ.

ಸೌಲಭ್ಯ ಏನೇನಿವೆ?
ಎರಡೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗಗಳ ಪರೀಕ್ಷೆ, ರಕ್ತ, ಮೂತ್ರದ ಪರೀಕ್ಷೆ ನಡೆಸಲು ಪ್ರಯೋಗಾಲಯ ಸಿದ್ಧವಿದೆ. ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ 6 ಬೆಡ್‌ಗಳ ಕೊಠಡಿ ಸೌಲಭ್ಯವಿದೆ. ಮಲೇರಿಯಾ,ಡೆಂಗ್ಯು ಮುಂತಾದ ಸಾಂಕ್ರಾಮಿಕ ಖಾಯಿಲೆಗಳಿಗೆ ಔಷಧ ಸಂಗ್ರಹವಿದೆ.

ಸ್ವಚ್ಚತೆಗೆ ಹೆಚ್ಚು ಗಮನ ನೀಡಿ
ಮಳೆಗಾಲದಲ್ಲಿ ಮನೆ ಹಾಗೂ ಪರಿಸರದ ಸುತ್ತಮುತ್ತ ಸ್ವಚ್ಚತೆಗೆ ಹೆಚ್ಚು ಗಮನ ನೀಡಬೇಕು ಹಾಗೂ ವೈಯಕ್ತಿಕ ಸ್ವಚ್ಚತೆ ಕುರಿತು ಗಮನಹರಿಸಬೇಕು. ಜ್ವರ ಕಾಣಿಸಿಕೊಂಡಾಗ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ನೀಡಲಾಗುತ್ತದೆ. 
– ರಾಘವೇಂದ್ರ ರಾವ್‌, ವೈದ್ಯಾಧಿಕಾರಿ ಪ್ರಾ.ಆ.ಕೇ. ಸಾಲಿಗ್ರಾಮ

— ರಾಜೇಶ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್‌ ಸರಕಾರ‌; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ

HDK–Siddu

Alleged: ಇದು 60 ಪರ್ಸೆಂಟ್‌ ಲಂಚದ ಕಾಂಗ್ರೆಸ್‌ ಸರಕಾರ: ಎಚ್‌.ಡಿ.ಕುಮಾರಸ್ವಾಮಿ ಆರೋಪ

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Kalpeni Island: ಲಕ್ಷದ್ವೀಪದಲ್ಲಿ ಯುರೋಪ್‌ನ ಯುದ್ಧ ನೌಕೆ ಅವಶೇಷ ಪತ್ತೆ!

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ

Aizawl: ಮಿಜೋರಾಂನಲ್ಲಿ ದೇಶದ ಮೊದಲ ಬೀಟಾ ತಲೆಮಾರಿನ ಮಗು ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Prashant Kishor

Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್‌ ಕಿಶೋರ್‌ ಬಂಧನ

1

Udupi: ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ

4

Bajpe: ಗುರುಪುರ ಪೇಟೆಯ ಹಲವೆಡೆ ಕಳವು

Na-Dsoza-Family

ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!

supreme-Court

Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್‌ ರದ್ದು: ಸುಪ್ರೀಂ ಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.