ಕೃಷಿ ಪ್ರದೇಶಗಳಿಗೆ ಉಪ್ಪು ನೀರಿನ ಹಾವಳಿ

ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ

Team Udayavani, Feb 28, 2020, 5:30 AM IST

2702KDPP1

ಕುಂದಾಪುರ: ಹತ್ತಾರು ಎಕರೆ ಕೃಷಿ ಪ್ರದೇಶಗಳಿದ್ದರೂ, ಉತ್ತಮ ಬೆಳೆ ತೆಗೆಯಲಾಗದ, ಬಾವಿ, ಕೆರೆಗಳಲ್ಲಿ ಸಮೃದ್ಧ ನೀರಿದ್ದರೂ, ಕುಡಿಯಲು, ಕೃಷಿಗೆ ಬಳಸಲಾಗದ ಸ್ಥಿತಿ ಇಲ್ಲಿನದು. ಇಲ್ಲಿರುವ ಹೊಳೆಗೆ ಎತ್ತರದಲ್ಲಿ ನದಿ ದಂಡೆಯನ್ನು ನಿರ್ಮಿಸಿದಲ್ಲಿ ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಈ ವಾರ್ಡಿನ ಜನರ ಬೇಡಿಕೆ. “ಸುದಿನ ವಾರ್ಡ್‌’ ಸುತ್ತಾಟದ ವೇಳೆ ಕೋಡಿ ದಕ್ಷಿಣ ವಾರ್ಡ್‌ (ವಾರ್ಡ್‌ ಸಂಖ್ಯೆ -14)ನ ಜನರು ಪತ್ರಿಕೆ ಗಮನಕ್ಕೆ ತಂದ ಪ್ರಮುಖ ಸಮಸ್ಯೆಯಿದು.

ಅಸಮರ್ಪಕ ಕಾಮಗಾರಿ
ಇಲ್ಲಿನ ಶ್ರೀ ರಾಮ ವಿದ್ಯಾ ಕೇಂದ್ರದ ಬಳಿಯಿಂದ ಸೌಹಾರ್ದ ಕೇಂದ್ರದವರೆಗೆ ಹೊಸದಾಗಿ ವಿನಾಯಕ – ಕೋಡಿಯ ಮುಖ್ಯ ರಸ್ತೆಯ ಬದಿಗೆ ಇಂಟರ್‌ಲಾಕ್‌ಗಳನ್ನು ಅಳವಡಿಸಿದ್ದಾರೆ. ಆದರೆ ಅಸಮರ್ಪಕ ಕಾಮಗಾರಿಯಿಂದಾಗಿ ರಸ್ತೆ ಹಾಗೂ ಇಂಟರ್‌ಲಾಕ್‌ ಮಧ್ಯೆ ಬಿರುಕು ಕಾಣಿಸಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಇದು ಮತ್ತಷ್ಟು ಬಿಗಡಾಯಿಸುವ ಸ್ಥಿತಿ ಬರಬಹುದು ಎನ್ನುವುದು ಜನರ ಅಭಿಪ್ರಾಯ.

ಬೀದಿದೀಪಗಳಿಲ್ಲ
ಇಲ್ಲಿರುವ ಅನೇಕ ರಸ್ತೆಗಳಿಗೆ ಬೀದಿ ದೀಪಗಳೇ ಇಲ್ಲ. ಕತ್ತಲೆ ವೇಳೆ ಇಲ್ಲಿ ಸಂಚರಿಸುವುದು ಕೂಡ ಕಷ್ಟಕರ. ಅನೇಕ ಸಮಯಗಳಿಂದ ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನ.

ಕಸಕ್ಕೆ ಕಡಿವಾಣ?
ಇದು ಕಡಲ ತೀರದ ವಾರ್ಡ್‌ ಆಗಿದ್ದು, ಇಲ್ಲಿಗೆ ಅನೇಕ ಮಂದಿ ಪ್ರವಾಸಿಗರು ದೂರ- ದೂರದ ಊರುಗಳಿಂದ ಬರುತ್ತಾರೆ. ಆದರೆ ಇಲ್ಲಿರುವ ಬೀಚ್‌ ಬದಿಗಳಲ್ಲಿ ಸ್ವತ್ಛತೆಗೆ ಆದ್ಯತೆಯೇ ನೀಡಿಲ್ಲ. ಎಷ್ಟೇ ಸ್ವತ್ಛ ಮಾಡಿದರೂ, ವಾಹನಗಳಲ್ಲಿ ಬೇರೆ ಬೇರೆ ಕಡೆಗಳಿಂದ ಬರುವ ಜನರು ಇಲ್ಲಿನ ಬೀಚ್‌ ಬದಿ ಕಸ ಎಸೆದು ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕುವುದು ಯಾರು ಎನ್ನುವುದು ನಾಗರೀಕರ ಪ್ರಶ್ನೆಯಾಗಿದೆ.

ಕಾಮಗಾರಿ
15ನೇ ವಾರ್ಡ್‌ ಹಾಗೂ 14 ನೇ ವಾರ್ಡ್‌ ಒಳಗೊಂಡಂತೆ ಕೋಡಿ ದಕ್ಷಿಣ ವಾರ್ಡ್‌ ಭಾಗದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚದಲ್ಲಿ ತೋಡಿಗೆ ದಂಡೆ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಕೊನೆಯಲ್ಲಿ ಹಲಗೆ ಅಳವಡಿಸಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ಇದಲ್ಲದೆ 4 ಲಕ್ಷ ರೂ. ವೆಚ್ಚದಲ್ಲಿ 49 ಮೀಟರ್‌ ಕಾಂಕ್ರೀಟಿಕರಣ ಕಾಮಗಾರಿ ಆಗಿದೆ. ಇಲ್ಲಿನ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈಗಾಗಲೇ ನೀರು ಪೂರೈಕೆಗೆ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ.

ರಸ್ತೆ ವಿಸ್ತರಣೆ
ವಿನಾಯಕದಿಂದ ಕೋಡಿಗೆ ಸಂಪರ್ಕಿಸುವ ರಸ್ತೆ ಹಾಗೂ ಎಂ. ಕೋಡಿಯಿಂದ ಆರಂಭಗೊಂಡು, ಕೋಡಿ ತಲೆಯವರೆಗಿನ ರಸ್ತೆ ಕಿರಿದಾಗಿದ್ದು, ಈ ಮಾರ್ಗದಲ್ಲಿ ನಿತ್ಯ ಬಸ್‌ಗಳು, ಶಾಲಾ ಮಕ್ಕಳ ಬಸ್‌ಗಳು ಸಂಚರಿಸುತ್ತವೆ. ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬಸ್‌ ಅಥವಾ ಇತರೆ ವಾಹನ ಬಂದರೆ, ಇನ್ನೊಂದು ವಾಹನ ರಸ್ತೆಯಿಂದ ಕೆಳಗಿಳಿಯಬೇಕು. ರಸ್ತೆ ಅಗಲೀಕರಣವಾದರೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ನಾಗರೀಕರ ಅಭಿಪ್ರಾಯ.

ಆಗಬೇಕಾದ್ದೇನು?
ಗಡಿಯಾರ ಹಿತ್ಲು – ಚಕ್ರಮ್ಮ ದೇವಸ್ಥಾನ ಸಂಪರ್ಕ ರಸ್ತೆ ಕಾಮಗಾರಿ
 ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
 ಮೀನಿನ ಕೆರೆ ಸ್ವತ್ಛತೆ

ಮೀನಿನ ಕೆರೆ ಸ್ವತ್ಛಗೊಳಿಸಲಿ
ಈ ವಾರ್ಡ್‌ನಲ್ಲಿ 8 ಎಕರೆ ವಿಸ್ತೀರ್ಣದಲ್ಲಿರುವ ಮೀನಿನ ಕೆರೆಯನ್ನು ಮೀನು ಸಾಕಾಣಿಕೆಗೆ ಲೀಸ್‌ಗೆ ಕೊಡಲಾಗಿದೆ. ಆದರೆ ನಿಯಮದ ಪ್ರಕಾರ ಆ ಕೆರೆಯ ನೀರು ಪ್ರತಿ ದಿನ ಹೊರಗೆ ಬಿಟ್ಟು ಹೊಸ ನೀರು ಬಿಡಬೇಕು. ಆದರೆ ಇಲ್ಲಿ ಆ ಕೆಲಸ ಆಗುತ್ತಿಲ್ಲ. ಇದರಿಂದ ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿದೆ. ಇಲ್ಲಿ ಕಸ – ಕಡ್ಡಿಗಳೆಲ್ಲ ಸೇರಿಕೊಂಡು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಈ ಭಾಗದಲ್ಲಿ ಸಾಂಕ್ರಾಮಿಕ ರೋಗ ಭೀತಿ ಕೂಡ ಆವರಿಸಿದೆ. ಆ ಕೆರೆಯನ್ನು ಸ್ವತ್ಛಗೊಳಿಸಲಿ. ಇದರ ಹೂಳೆತ್ತದೆ ಹಲವು ವರ್ಷಗಳಾಗಿವೆ. ಕೃಷಿಗೆ ಅನುಕೂಲವಾಗುವಂತೆ ನದಿ ದಂಡೆ ನಿರ್ಮಿಸಲಿ.
– ದೀಪಕ್‌ ಪೂಜಾರಿ, ಕೋಡಿ ದಕ್ಷಿಣ

ತಡೆಗೋಡೆ ಬೇಕು
ಈ ವಾರ್ಡ್‌ನಲ್ಲಿ ಗರಿಷ್ಠ ಪ್ರಮಾಣದ ಕೃಷಿ ಭೂಮಿಯಿದೆ. ಆದರೆ ಗದ್ದೆಗಳಿಗೆ ಭರತದ ಸಮಯದಲ್ಲಿ ಉಪ್ಪು ನೀರು ಹಾವಳಿ ಇಡುವುದರಿಂದ ಕೃಷಿ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಬೆಳೆದ ಕೃಷಿಯೆಲ್ಲ ನಾಶವಾಗುತ್ತಿದೆ. ಇದರಿಂದ ಗದ್ದೆಗಳನ್ನು ಹಡಿಲು ಬಿಡುವಂತಾಗಿದೆ. ನೀರಿನ ಪೂರೈಕೆಗೆ ಪೈಪ್‌ಲೈನ್‌ಗಾಗಿ ರಸ್ತೆಯೆಲ್ಲ ಅಗೆದಿದ್ದಾರೆ. ಆದರೆ ಇನ್ನೂ ಅದಕ್ಕೆ ಡಾಮರೀಕರಣ ಕಾಮಗಾರಿ ಆಗದೇ ರಸ್ತೆಯಿಡೀ ಹೊಂಡ – ಗುಂಡಿಗಳಂತೆ ಆಗಿದೆ.
– ಆನಂದ, ಕೋಡಿ ದಕ್ಷಿಣ

ನದಿ ದಂಡೆ ನಿರ್ಮಾಣಕ್ಕೆ 400 ಮೀ.ಗೆ
ಈಗಾಗಲೇ ಶಾಸಕರಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಇದಲ್ಲದೆ ಎಂ.ಕೋಡಿಯಲ್ಲೊಂದು ಸುಂದರ ಸರ್ಕಲ್‌ ನಿರ್ಮಾಣದ ಪ್ರಸ್ತಾವವಿದೆ. ಇಲ್ಲಿ ಸ್ವಾಗತ ಗೋಪುರ, ವಿನಾಯಕ ಬಳಿ ಕೋಡಿಗೆ ಸ್ವಾಗತ ಗೋಪುರದ ಬೇಡಿಕೆಯಿದೆ. 4 ನೇ ಕ್ರಾಸ್‌ ರಸ್ತೆಗೆ ಪೈಪ್‌ಲೈನ್‌ ಕಾಮಗಾರಿ ನಿರ್ವಹಿಸುವವರೇ ಡಾಮರೀಕರಣ ಮಾಡಿಕೊಡುತ್ತಾರೆ ಅಂತ ಭರವಸೆ ಕೊಟ್ಟಿದ್ದಾರೆ.
– ಅಶ#ಕ್‌, ಸದಸ್ಯರು, ಪುರಸಭೆ

ಟಾಪ್ ನ್ಯೂಸ್

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

9

Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

Jagan Mohan Reddy

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

ACT

Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.