ಕೊಮೆ- ಮಣೂರು: ಕೃಷಿ ಭೂಮಿ ಆವರಿಸಿದ ಉಪ್ಪುನೀರು
Team Udayavani, Jul 19, 2018, 6:00 AM IST
ತೆಕ್ಕಟ್ಟೆ : ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಕ್ಕಟ್ಟೆ -ಕೊಮೆ ಹಾಗೂ ಮಣೂರು ಭಾಗದಲ್ಲಿ ಸಮುದ್ರದಬ್ಬರ ಹೆಚ್ಚಾಗಿದ್ದು, ಇಲ್ಲಿನ ಕೃಷಿ ಭೂಮಿಗೆ ಸಮಸ್ಯೆಯಾಗಿದೆ. ಇಲ್ಲಿನ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
15 ಎಕ್ರೆ ಪ್ರದೇಶಕ್ಕೆ ಸಮಸ್ಯೆ
ಕಡಲ ತೀರದ ರೈತರು ಈಗಾಗಲೇ ನಾಟಿ ಕಾರ್ಯವನ್ನು ಪೂರ್ತಿಗೊಳಿಸಿದ್ದಾರೆ. ಕಳೆದ ಬಾರಿ ಉತ್ತಮ ಫಸಲು ಬಂದಿದ್ದು, ಈ ಬಾರಿಯೂ ಉತ್ಸಾಹದಿಂದ ನಾಟಿಗೆ ತೊಡಗಿದ್ದರು. ಆದರೆ ಉಪ್ಪುನೀರು ಜಮೀನು ಆವರಿಸತೊಡಗಿದ್ದರಿಂದ 15 ಎಕ್ರೆ ಭತ್ತ ಕೃಷಿ ಹಾಳಾಗುವ ಆತಂಕ ಎದುರಾಗಿದೆ.
ಮರಳು ದಿಬ್ಬ ಅಗೆದ ಗ್ರಾಮಸ್ಥರು
ಕೃಷಿ ಭೂಮಿ ಸೇರುತ್ತಿರುವ ಉಪ್ಪುನೀರನ್ನು ಮತ್ತೆ ಸಮುದ್ರಕ್ಕೆ ಹೋಗುವಂತೆ ಮಾಡಲು ಸ್ಥಳೀಯ ಯುವಕರ ತಂಡ ಮಂಗಳವಾರ ದೊಡ್ಡ ಮರಳಿನ ದಿಬ್ಬವನ್ನು ಅಗೆದಿದ್ದು, ನೀರು ಹೋಗಲು ಶ್ರಮಿಸಿದೆ.
19 ಲಕ್ಷ ರೂ. ವೆಚ್ಚದ
ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕ
2010ರಲ್ಲಿ ತೆಕ್ಕಟ್ಟೆ -ಕೊಮೆ ಹಾಗೂ ಮಣೂರು ಭಾಗದ ಕಡಲ ತೀರದಲ್ಲಿ 19 ಲಕ್ಷ ರೂ. ವೆಚ್ಚದಲ್ಲಿ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಆದರೆ ಇದರ ಹಲಗೆ ಮತ್ತು ಹಲಗೆ ಸಂಗ್ರಹಿಸುವ ಕೊಠಡಿ ಹಾಳಾಗಿದೆ. ಇಲ್ಲಿ ಗಿಡಗಂಟಿ ಆವರಿಸಿ ಗೆದ್ದಲು ಹಿಡಿಯುತ್ತಿದೆ. ಇದರಿಂದ ಸ್ಥಳೀಯ ರೈತರ ಸಮಸ್ಯೆ ಪರಿಹಾರವಾಗದೇ ಉಳಿದಿದೆ.
ಕೃಷಿ ಸಂಪೂರ್ಣ ನಾಶ
ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಸಮುದ್ರದಲ್ಲಿ ಹೆಚ್ಚಿ ದ ಅಲೆಗಳ ಅಬ್ಬರದಿಂದಾಗಿ ಅಪಾರ ಪ್ರಮಾಣದಲ್ಲಿ ಉಪ್ಪು ನೀರು ತೀರವನ್ನು ಆವರಿಸುವ ಪರಿಣಾಮ ಕೃಷಿ ಸಂಪೂರ್ಣ ಕೊಳೆತು ಹೋಗುತ್ತಿದೆ.
– ಯಡಾಡಿ ಬಸವ ಪೂಜಾರಿ,
ಹಿರಿಯ ಕೃಷಿಕರು
ಶಾಸಕರ ಗಮನಕ್ಕೆ
ಈ ಬಾರಿ ಅಲೆಗಳ ಅಬ್ಬರ ಹೆಚ್ಚಾಗಿ ಉಪ್ಪು ನೀರು ನುಗ್ಗುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಕಿಂಡಿ ಅಣೆಕಟ್ಟಿಗೆ ಹಲಗೆಯನ್ನು ಜೋಡಿಸಲಾಗುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ಹಲಗೆ ತೆರವುಗೊಳಿಸುತ್ತೇವೆ. ಆದರೆ ಸ್ಥಳೀಯರ ಅಭಿಪ್ರಾಯದಂತೆ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟಿನ ಅಗಲ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ 2 ಕಿಂಡಿಗಳನ್ನು ಶಾಶ್ವತವಾಗಿ ಮುಚ್ಚಬೇಕು ಎನ್ನುವ ಆಗ್ರಹದ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ.
– ಶೇಖರ್ ಕಾಂಚನ್,
ಕೊಮೆ ಅಧ್ಯಕ್ಷರು, ಗ್ರಾ.ಪಂ. ತೆಕ್ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.