ಮರಳು ಮಾಫಿಯಾದಿಂದ ಹಲ್ಲೆ ಪ್ರಕರಣ ಮತ್ತೆ 6, ಒಟ್ಟು 14 ಮಂದಿ ಸೆರೆ
Team Udayavani, Apr 7, 2017, 11:10 AM IST
ಉಡುಪಿ/ಕುಂದಾಪುರ: ಕಂಡೂರಿನ ಅಕ್ರಮ ಮರಳುಗಾರಿಕೆ ಪರಿಶೀಲನೆಗೆ ತೆರಳಿದ್ದ ಜಿಲ್ಲಾಧಿಕಾರಿಗಳು, ಎ.ಸಿ. ವಿ.ಎ., ಗನ್‌ಮ್ಯಾನ್ ಅವರಿಗೆ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬೆಳಗ್ಗೆ ಕಂಡೂರು ಬಸ್ ನಿಲ್ದಾಣದ ಬಳಿ ಐವರನ್ನು ಹಾಗೂ ಸಂಜೆ ಮತ್ತೋರ್ವನನ್ನು ಹೀಗೆ ಒಂದೇ ದಿನ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈವರೆಗೆ ಒಟ್ಟು 14 ಮಂದಿಯ ಬಂಧನಧಿವಾದಂತಾಗಿದೆ.
ಉತ್ತರ ಪ್ರದೇಶದ ನಾನ್‌ಫರಾದ ನಿವಾಸಿ ಗೋರಕ್‌ನಾಥ (40), ಉ. ಪ್ರದೇಶದ ನಿಸಾದ್ ನಗರದ ಭೂತಾನ್ (54), ಉ.ಪ್ರದೇಶದ ಕಿರಿ ಜಿಲ್ಲೆಯ ಬಡಗಾಂ ವಾಸಿ ಅನಿಲ್ (25), ಉ.ಪ್ರ. ಕಿರಿ ಜಿಲ್ಲಾ ನಿಸಾನ್ ನಗರದ ಸರವನ್ ಕುಮಾರ್ (25), ಧಾರವಾಡ ಜಿಲ್ಲೆ ಎಂಬಿಕೆರೆಯ ರವಿ (27) ಮತ್ತು ಕಂಡೂರಿನ ಇನಾಯಿಧಿತುಲ್ಲಾ (22) ಗುರುವಾರ ಬಂಧಿತರು. ಬಂಧಿತರಲ್ಲಿ ಹೆಚ್ಚಿನವರೆಲ್ಲರೂ ಮರಳು ಕಾರ್ಮಿಕರಾಗಿದ್ದಾರೆ.
“ಆಯಾ ಸಂದರ್ಭಕ್ಕೆ ಕೋರ್ಟ್‌ಗೆ’
ಬಂಧಿತ ಭಾಸ್ಕರ ಮೊಗವೀರ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ ಕೋರ್ಟಿಗೆ ಹಾಜರುಪಡಿಸಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಾಲಾರೋಪಿಯನ್ನು ಬಾಲರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಉಳಿದಂತೆ ಬಂಧನವಾದ ಆರೋಪಿಗಳನ್ನು ಹಂತ-ಹಂತವಾಗಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಕೆಲವರಿಗೆ ಈಗಾಗಲೇ ನ್ಯಾ. ಬಂಧನ ವಿಧಿಸಲಾಗಿದೆ. ಮತ್ತೆ ಬಂಧಿತರಾದವರನ್ನು ಕೋರ್ಟಿಗೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅವರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
“24×7 ಪೊಲೀಸ್ ತಂಡ ಸಕ್ರಿಯ’
ಕುಂದಾಪುರ ಡಿವೈಎಸ್‌ಪಿ, ವೃತ್ತ ನಿರೀಕ್ಷಕರು ಹಾಗೂ ಕುಂದಾಪುರ ಠಾಣಾಧಿಕಾರಿ ಹೀಗೆ 3 ತಂಡಧಿಗಳಾಗಿ ಆರೋಪಿಗಳ ಬಂಧನ ಕಾರ್ಯದಲ್ಲಿ ತೊಡಗಿದ್ದಾರೆ. ಉಳಿದವರ ಶೋಧ ಮುಂದುವರಿದಿದೆ. ಜಿಲ್ಲಾಧಿಕಾರಿಧಿಗಳ ನಿರ್ದೇಶನದಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಪೊಲೀಸ್ ಅಧಿಕಾರಿ, ಸಿಬಂದಿ ಸಾಕಷ್ಟು ಮಟ್ಟಿಗೆ ಗರಿಷ್ಠ ಮಟ್ಟದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲು ಯೋಜನೆ ರೂಪಿಸಿಕೊಂಡು ಗಸ್ತು ನಡೆಸುತ್ತಿದ್ದಾರೆ.
ಅಕ್ರಮ ಮರಳು ದಂಧೆ ತಡೆ: ಕಾರ್ಯಾಚರಣೆ ಮುಂದುವರಿಕೆ
ಜಿಲ್ಲಾಡಳಿತಕ್ಕೇ ಸವಾಲಾಗಿ ಬೆಳೆದಿರುವ ಅಕ್ರಮ ಮರಳುಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಈಗಾಗಲೇ ಟಾಸ್ಕ್ಧಿಫೋರ್ಸ್ ಸಭೆಯನ್ನು ಕರೆದು ಏನೇನು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಸ್ಪಷ್ಟವಾದ ಸೂಚನೆಯನ್ನು ಆಯಾ ಇಲಾಖಾಧಿಕಾರಿಗಳಿಗೆ ನೀಡಿದ್ದಾರೆ. ಅದರಂತೆ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi: ರೈಲು ಬಡಿದು ವ್ಯಕ್ತಿ ಸಾವು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.