8 ದಿನಗಳ ಬಳಿಕ ಮರಳು ಪ್ರತಿಭಟನೆ ತಾತ್ಕಾಲಿಕ ಅಂತ್ಯ
Team Udayavani, Nov 2, 2018, 10:29 AM IST
ಉಡುಪಿ: ಮಣಿಪಾಲದ ರಜತಾದ್ರಿಯಲ್ಲಿ ನಡೆಯುತ್ತಿರುವ ಮರಳು ಪ್ರತಿಭಟನೆ 8 ದಿನದ ಬಳಿಕ ತಾತ್ಕಾಲಿಕ ಮುಕ್ತಾಯ ಕಂಡಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಸಭೆಯಲ್ಲಿ ಗಣಿ ಇಲಾಖೆ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಭಾಗವಹಿಸಿದ್ದು, ಈ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಂಘಟನೆಗಳ ಮುಖಂಡರೊಂದಿಗೆ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಆ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟು ನ. 20ರೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ನಿರ್ಧರಿಸಲಾಯಿತು.
ನಾನ್ ಸಿಆರ್‌ಝಡ್ ಸಮಸ್ಯೆ ಇಲ್ಲಿಯೇ ಪರಿಹರಿಸುವುದಾಗಿ ಭರವಸೆ ನೀಡಿದ ಕಠಾರಿಯಾ, ಸಿಆರ್‌ಝಡ್ ಸಮಸ್ಯೆ ಪರಿಸರ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಪ್ರತಿಭಟನ ಸ್ಥಳಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಬಂದ ಅವರು ಪ್ರತಿಭಟಕಾರರ ಮನವೊಲಿಸುವ ಯತ್ನ ಮಾಡಿದರು. ಸಿಎಂ ನಿರ್ದೇಶನ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಪರಿಸ್ಥಿತಿಯ ಅರಿವಾಗಿದೆ. 2011ರ ಮೊದಲು ನೋಟಿಫಿಕೇಶನ್ ಆಗಿದ್ದು ಅದರಲ್ಲಿ ಕೆಲವೊಂದು ನಿಯಮಾವಳಿಗಳನ್ನು ನೀಡಲಾಗಿದೆ. 2011ರ ನೋಟಿಫಿಕೇಶನ್ ಪ್ರಕಾರ ಯಾರಿಗೆಲ್ಲ ನೀಡಲಾಗಿದೆಯೋ ಅವರಿಗೆಲ್ಲ ನಾವು ಪರವಾನಿಗೆ ನೀಡುತ್ತೇವೆ. 2015-16ರಲ್ಲಿ ಹಸಿರು ಪೀಠದಲ್ಲಿ 2 ಪ್ರಕರಣ ದಾಖಲಾದ ಹಿನ್ನೆಲೆ 2 ವರ್ಷ ಮರಳುಗಾರಿಕೆಗೆ ಅವಕಾಶ ಇರಲಿಲ್ಲ. ಹೊಸ ಮರಳು ನೀತಿ ಕೂಡ ವಿಳಂಬವಾಗಿದೆ ಎಂದು ಕಠಾರಿಯಾ ಹೇಳಿದರು.
ಸುನೀಲ್ ಕುಮಾರ್ ಮತ್ತು ಶಾಸಕ ಭೋಜೇಗೌಡ ಪ್ರತಿಭಟನಾ ನಿರತರ ಮನವೊಲಿಸಿದರು. ಶಾಸಕ ರಘುಪತಿ ಭಟ್ ಮಾತನಾಡಿ, ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯೋಣ. ನ. 20ರೊಳಗೆ ಪರಿಹಾರವಾಗದೇ ಇದ್ದಲ್ಲಿ ಮತ್ತೆ ಪ್ರತಿಭಟನೆಗೆ ಕುಳಿತುಕೊಳ್ಳೊಣ ಎಂದರು. ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.