ಮರಳುದಿಬ್ಬ ತೆರವು: ಮಾನದಂಡ ನಿರ್ಧರಿಸಲು ಸೂಚನೆ: ಶಾಸಕ ಭಟ್
Team Udayavani, Dec 1, 2018, 10:06 AM IST
ಉಡುಪಿ: ಸಿಆರ್‌ಝಡ್ ವ್ಯಾಪ್ತಿಯ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕುರಿತು ರಾಜ್ಯ ಸರಕಾರ ಕೇಳಿರುವ ಸ್ಪಷ್ಟೀಕರಣವನ್ನು ಕೇಂದ್ರ ಸರಕಾರ ನೀಡಿದೆ. ಹಾಗಾಗಿ ಉಡುಪಿ ಜಿಲ್ಲೆಯಲ್ಲಿ 170 ಮಂದಿ ಪರವಾನಿಗೆದಾರರಿಗೂ ಲೀಸ್ ನೀಡಲು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಸಿಆರ್‌ಝಡ್ ಮರಳು ದಿಬ್ಬ ತೆರವುಗೊಳಿಸುವ ಬಗ್ಗೆ ಕೇಂದ್ರ ಸರಕಾರದಿಂದ ಸ್ಪಷ್ಟೀಕರಣ ಕೇಳಿತ್ತು. ಈಗ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸ್ಪಷ್ಟವಾದ ಸ್ಪಷ್ಟೀಕರಣವನ್ನು ರಾಜ್ಯ ಸರಕಾರಕ್ಕೆ ನೀಡಿದೆ.
“ಸಾಂಪ್ರದಾಯಿಕ ಮರಳುಗಾರಿಕೆಯವರನ್ನು ಗುರುತಿಸುವ ವಿಧಾನ ಹೇಗೆ?’ ಎಂಬ ಪ್ರಶ್ನೆಗೆ “ಇದಕ್ಕೆ ರಾಜ್ಯ ಸರಕಾರವೇ ಮಾನದಂಡ ರೂಪಿಸಬೇಕು’ ಎಂದು ಹೇಳಿದೆ. “2011ರ ಮೊದಲು ಮರಳುಗಾರಿಕೆ ನಡೆಸಿದವರಿಗೋ ಅಥವಾ ಅನಂತರ ಮರಳುಗಾರಿಕೆ ಮಾಡಿದ ಪರವಾನಿಗೆದಾರರಿಗೆ ಮರಳುಗಾರಿಕೆ ಲೀಸ್ ನೀಡುವುದೋ?’ ಎಂಬ ಪ್ರಶ್ನೆಗೆ “ಇದಕ್ಕೂ ರಾಜ್ಯ ಸರಕಾರವೇ ಅವಧಿ (ಕಟ್ ಆಫ್ ಡೇಟ್) ನಿಗದಿಪಡಿಸಿಕೊಳ್ಳಬಹುದು’ ಎಂದು ಸ್ಪಷ್ಟೀಕರಣ ನೀಡಿದೆ.
170 ಮಂದಿಗೂ ನೀಡಿ
“2011ರ ಮೊದಲಿನ ಪರವಾನಿಗೆದಾರರಿಗೆ ಮಾತ್ರ ಮರಳುಗಾರಿಕೆಗೆ ಅವಕಾಶ ನೀಡುತ್ತೇವೆ’ ಎಂದು ರಾಜ್ಯ ಸರಕಾರ ಹೇಳಿತ್ತು. ಆದರೆ ಈಗ ಕೇಂದ್ರ ಸರಕಾರವು 2011ರ ಅನಂತರದ ಪರವಾನಿಗೆದಾರರಿಗೂ ಅವಾಶ ನೀಡುವಂತೆ ಸೂಚಿಸಿದೆ. ಈ ಮೂಲಕ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವ ಹರ್ಷವರ್ಧನ್ ಜತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಈಗಾಗಲೇ ಎನ್‌ಜಿಟಿ ಕೋರ್ಟಿನಲ್ಲಿ ಅಫಿದವಿತ್ ನೀಡಿದಂತೆ 170 ಜನರಿಗೂ ತತ್‌ಕ್ಷಣ ಮರಳು ದಿಬ್ಬ ತೆರವುಗೊಳಿಸಲು ಲೀಸ್ ನೀಡಿ ಮರಳುಗಾರಿಕೆಗೆ ರಾಜ್ಯ ಸರಕಾರ ಮತ್ತು ಜಿÇÉಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.