ಸಂಗಮ್ ರಸ್ತೆ ಸಂಚಾರ ಸ್ಥಗಿತ ; ಸಾರ್ವಜನಿಕರ ಆಕ್ರೋಶ
Team Udayavani, May 26, 2019, 6:10 AM IST
ಕುಂದಾಪುರ: ಇಲ್ಲಿನ ಸಂಗಮ್ ಜಂಕ್ಷನ್ ಬಳಿ ಕುಂದಾಪುರ ನಗರದಿಂದ ಆನಗಳ್ಳಿಗೆ ಸಂಚರಿಸುವ ಮಾರ್ಗವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಸೂಚನೆಯಂತೆ ಸ್ಥಗಿತಗೊಳಿಸಲಾಗಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಸದ್ಯದ ಮಟ್ಟಿಗೆ ಯಾವುದೇ ಅವಘಢ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಸಿ ಡಾ| ಎಸ್. ಮಧುಕೇಶ್ವರ್ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಂಗಮ್ ಜಂಕ್ಷನ್ ಬಳಿ ಕುಂದಾಪುರದ ಅಂಚೆ ಕಚೇರಿ ಮಾರ್ಗದಿಂದ ಆನಗಳ್ಳಿಗೆ ಸಂಚರಿಸುವ ರಸ್ತೆಯನ್ನು ತಾತ್ಕಾಲಿಕವಾಗಿ ತಡೆಗೋಡೆಯಿಟ್ಟು ಶುಕ್ರವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ.
ಎಸಿಯವರ ಈ ನಿರ್ಧಾರದಿಂದ ಸಂಗಮ್, ಆನಗಳ್ಳಿ ಕಡೆಗೆ ಹಾಗೂ ಬೈಂದೂರು ಕಡೆಯಿಂದ ನೇರವಾಗಿ ನಗರಕ್ಕೆ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗ ಹೆಮ್ಮಾಡಿ, ತಲ್ಲೂರು, ಆನಗಳ್ಳಿ ಕಡೆಯಿಂದ ಬರುವ ವಾಹನ ಸವಾರರು ಕುಂದಾಪುರ ನಗರಕ್ಕೆ ಬರಬೇಕಾದರೆ ಸಂತೆ ಮಾರುಕಟ್ಟೆ ಬಳಿ ಅಥವಾ ಶಾಸ್ತ್ರಿ ಸರ್ಕಲ್ ಮೂಲಕವಾಗಿ ಸುತ್ತು ಬಳಸಿ ಬರಬೇಕಿದೆ.
ತಡೆ ತೆರವಿಗೆ ಆಗ್ರಹ
ಸಂಗಮ್ ಜಂಕ್ಷನ್ ಬಳಿ ಅಳವಡಿಸಿರುವ ತಾತ್ಕಾಲಿಕ ತಡೆಗೋಡೆಯನ್ನು ತತ್‌ಕ್ಷಣ ತೆರವು ಮಾಡಬೇಕು, ಇಲ್ಲದಿದ್ದರೆ ಇಲ್ಲಿ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಪ್ರಯಾಸ ಪಡಬೇಕಾಗುತ್ತದೆ. ಅದಲ್ಲದೆ ಹೆದ್ದಾರಿಯಲ್ಲಿ ಆಗಾಗ ಟ್ರಾಫಿಕ್ ಜಾಂ ಕೂಡ ಆಗುತ್ತಿರುತ್ತದೆ. ಇದಲ್ಲದೆ ಆದರ್ಶ ಆಸ್ಪತ್ರೆಗೆ ಹೋಗಬೇಕಾದರೂ ಸುತ್ತುಬಳಸಿ ತೆರಳಬೇಕಾಗಿದೆ. ಶುಕ್ರವಾರ ಸಂಜೆ ವೇಳೆಗೆ ಇಲ್ಲಿ ಸೇರಿದ ಸಾರ್ವಜನಿಕರು ಕೂಡಲೇ ಇದನ್ನು ತೆರವು ಮಾಡಬೇಕು ಹಾಗೂ ಇಲ್ಲಿ ಅಗತ್ಯವಿರುವ ಅಂಡರ್‌ಪಾಸ್ ನಿರ್ಮಾಣಕ್ಕೆ ಕೂಡ ಎಸಿಯವರಿಗೆ ಆಗ್ರಹಿಸಿದ್ದಾರೆ.
ಪತ್ರಿಕೆ ಸರಣಿ ವರದಿ
ಸಂಗಮ್ ಜಂಕ್ಷನ್‌ನಲ್ಲಿರುವ ವಾಹನ ಸಂಚಾರದ ಗೊಂದಲಗಳ ಬಗ್ಗೆ ‘ಉದಯವಾಣಿ’ ಪತ್ರಿಕೆಯು ಕೆಲ ದಿನಗಳಿಂದ ನಿರಂತರವಾಗಿ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.