ಬಜೆಟ್‌ನಲ್ಲಿ ಶಂಕರನಾರಾಯಣ ತಾಲೂಕು ರಚನೆಯ ಕನಸು!
Team Udayavani, Feb 7, 2019, 12:55 AM IST
ಕುಂದಾಪುರ: ಬಜೆಟ್ ಬಂದಾಗಲೆಲ್ಲ ಶಂಕರನಾರಾಯಣ ಭಾಗದ ಜನತೆ ಈ ಬಾರಿಯಾದರೂ ಶಂಕರನಾರಾಯಣ ತಾಲೂಕು ಹೊಸದಾಗಿ ರಚನೆಯಾದೀತೇ ಎಂದು ಕನಸು ಕಟ್ಟುತ್ತಾರೆ. ಈ ಬಾರಿಯೂ ಕನಸು ಮೊಳಕೆಯೊಡೆದಿದೆ. ಬ್ರಿಟಿಷರ ಕಾಲದಿಂದಲೂ ಎಲ್ಲ ಸರಕಾರಿ ಕಚೇರಿ ಹೊಂದಿರುವ ಈ ಭಾಗದಲ್ಲಿ ಉಪ ನೋಂದಣಿ ಕಚೇರಿ ವ್ಯಾಪ್ತಿಯ 42 ಗ್ರಾಮಗಳನ್ನು ಸೇರಿಸಿ ಶಂಕರನಾರಾಯಣವನ್ನು ತಾಲೂಕಾಗಿ ಘೋಷಿಸಬೇಕೆಂದು ಹೋರಾಟ ನಡೆಯುತ್ತಿದೆ.
ಆಚಾರ್ಯರ ಪ್ರಯತ್ನ
ಅಂದಿನ ಗೃಹ ಸಚಿವ ಡಾ| ವಿ.ಎಸ್.ಆಚಾರ್ಯರು ಹೋರಾಟ ತಿಳಿದು ಕುಂದಾಪುರ ನಿರೀಕ್ಷಣಾ ಬಂಗಲೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ,ಡಿಸಿ, ಸಿ.ಇ.ಒ. ಸಮ್ಮುಖ ಮಾಹಿತಿ ಕಲೆ ಹಾಕಿ ಎಲ್ಲ ಗ್ರಾ.ಪಂ.ಗಳು ನಿರ್ಣಯಿಸಿದರೆ ಕೂಡಲೇ ವಿಶೇಷ ತಹಶೀಲ್ದಾರ್ ನೇಮಿಸುವ ಭರವಸೆ ನೀಡಿದ್ದರು. ಸಮಿತಿಯು ಎಲ್ಲ ಗ್ರಾಮಗಳ ಪಂಚಾಯತ್ ನಿರ್ಣಯ ತಯಾರು ಮಾಡುವಾಗಲೇ ಡಾ| ವಿ.ಎಸ್. ಆಚಾರ್ಯರು ಅಕಾಲಿಕ ನಿಧನ ಹೊಂದಿದ್ದು ತಾಲೂಕು ರಚನೆಗೆ ಹಿನ್ನಡೆಯಾಯಿತು.
ಶೆಟ್ಟರ ಪ್ರಯತ್ನ
ವಿಧಾನ ಪರಿಷತ್ ಸದಸ್ಯಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಅರ್ಜಿ ಸಮಿತಿಯಲ್ಲಿ ತಾಲೂಕು ರಚನೆ ಕುರಿತು ಅಹವಾಲು ಮಂಡಿಸಿ ಆಗ ಪ್ರಶ್ನೆ ಕೇಳುತ್ತಾ ಹೊಸ ತಾಲೂಕಿನ ಕನಸನ್ನು ಊರ್ಜಿತದಲ್ಲಿಟ್ಟಿದ್ದಾರೆ ಉಡುಪಿ ಜಿಲ್ಲಾಡಳಿತ ಸಮಗ್ರ ವರದಿ ತಯಾರಿಸಿ 2014, ಡಿ 22 ಎಡಿಎಂಸಿಆರ್: 74/ 2014 -15 ರಂದು ಶಂಕರನಾರಾಯಣಕ್ಕೆ ತಾಲೂಕಿನ ಅಗತ್ಯದ ಕುರಿತು ವರದಿಯನ್ನು ಸರಕಾರಕ್ಕೆ ಕಳುಹಿಸಿದೆ. ವರದಿ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿ ಕೊಠಡಿಯಲ್ಲಿ ಬಾಕಿಯಾಗಿದೆ.
ಕಾರ್ಡ್ ಚಳವಳಿ
ಎರಡು ವರ್ಷಗಳ ಹಿಂದೆ 5,000 ಅಂಚೆಕಾರ್ಡ್‌ಗಳನ್ನು ವಿವಿಧ ಗ್ರಾಮಗಳಿಂದ ಜನರಿಂದ ಬರೆಸಿ ಅಂಚೆ ಕಾರ್ಡ್ ಚಳವಳಿ ಮಾಡಿ ಸರಕಾರಕ್ಕೆ ಕಳುಹಿಸುವಲ್ಲಿ ಸಮಿತಿ ಶ್ರಮಿಸಿತ್ತು. ಜಿಲ್ಲಾಡಳಿತದ ವರದಿಯೊಳಗೆ ಇರುವ ಮಡಾಮಕ್ಕಿ, ಶೇಡಿಮನೆ, ಬೆಳ್ವೆ, ಅಲಾºಡಿ ಗ್ರಾಮಗಳು ನೂತನ ಹೆಬ್ರಿ ತಾಲೂಕಿಗೆ ಹೋಗಿ, ಹಳ್ಳಿಹೊಳೆ ಬೈಂದೂರು ತಾಲೂಕಿಗೆ ಸೇರಿತು.
ಹೊಸ ತಾಲೂಕಿಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮಿತಿ ಮನವಿ ಸಲ್ಲಿಸಿದೆ. ಈ ಸಾಲಿನ ಬಜೆಟ್‌ಗಾಗಿ ಕಾದು ನೋಡ ಬೇಕೆಂದು ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದ್ದಾರೆ.
ನಿರೀಕ್ಷೆಯಿದೆ
ಶಂಕರನಾರಾಯಣವು 1972ರವರೆಗೆ ಬೈಂದೂರು ಕ್ಷೇತ್ರ, 1973ರಿಂದ 2008ರ ವರೆಗೆ ಕುಂದಾಪುರ ಕ್ಷೇತ್ರ, 2008 ರಿಂದ ಪುನಃ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ. ಹೀಗಾಗಿ ಜನಪ್ರತಿನಿಧಿಗಳೂ ಬದಲಾಗುತ್ತಿದ್ದು ಈ ಬಾರಿಯಾದರೂ ಹೊಸ ತಾಲೂಕು ಘೋಷಣೆಯಾಗುವುದೇ ಎಂಬ ನಿರೀಕ್ಷೆಯಲ್ಲಿದ್ದೇವೆ.
– ನ್ಯಾಯವಾದಿ ಎ. ರತ್ನಾಕರ ಶೆಟ್ಟಿ ಹೋರಾಟ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.