ಸಂಸದರ ಆದರ್ಶ ಗ್ರಾಮ ಯೋಜನೆಗೆ ಕಾಡೂರು ಆಯ್ಕೆ
Team Udayavani, Jun 3, 2018, 6:00 AM IST
ವಿಶೇಷ ವರದಿ – ಬ್ರಹ್ಮಾವರ: ಸಂಸದರ ಆದರ್ಶ ಗ್ರಾಮ ಯೋಜನೆಗೆ ನೂತನ ಬ್ರಹ್ಮಾವರ ತಾಲೂಕಿನ ಕಾಡೂರು ಗ್ರಾಮ ಆಯ್ಕೆ ಯಾಗಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ಗಾಂಧಿ ಘರ್ ದಾರದಹಳ್ಳಿ ಗ್ರಾಮದ ಬಳಿಕ ಆದರ್ಶ ಗ್ರಾಮಕ್ಕೆ ಆಯ್ಕೆಯಾದ ಎರಡನೇ ಗ್ರಾಮ ಇದು.
ಏನಿದು ಆದರ್ಶ ಗ್ರಾಮ ?
ಪ್ರತಿ ಸಂಸದರು ತಮ್ಮ ಕ್ಷೇತ್ರದಲ್ಲಿ ಕನಿಷ್ಠ 2, 3 ಗ್ರಾಮಗಳನ್ನು ಆರಿಸಿ ಅಭಿವೃದ್ಧಿ ಗೊಳಿಸುವುದಾಗಿದೆ. ಇಲ್ಲಿ ಜನರ ಮನಃ ಪರಿವರ್ತನೆ, ಸಾಂಸ್ಕೃತಿಕ ಮನಸ್ಸುಗಳ ನಿರ್ಮಾಣ, ಸಾಕ್ಷರತೆ, ಜನರ ಆರ್ಥಿಕ ಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತದೆ.
ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕೃತ
ಎಲ್ಲಾ ಯೋಜನೆಗಳ ಯಶಸ್ವೀ ಅನುಷ್ಠಾನಕ್ಕಾಗಿ ಕಾಡೂರು ಈಗಾಗಲೇ 5 ಲಕ್ಷ ರೂ. ವಿಶೇಷ ಅನುದಾನದೊಂದಿಗೆ ಗಾಂಧಿ ಗ್ರಾಮ ಪ್ರಶಸ್ತಿಯಿಂದ ಪುರಸ್ಕೃತ ವಾಗಿದೆ. ಇದೀಗ ಸಂಸದೆ ಶೋಭಾ ಕರಂದ್ಲಾಜೆ ಅವರು ಆದರ್ಶ ಗ್ರಾಮ ಯೋಜನೆಯಡಿ ಕಾಡೂರಿಗೆ ಆದ್ಯತೆ ನೀಡಿದ್ದಾರೆ.
ಅನುಷ್ಠಾನ ಪ್ರಕ್ರಿಯೆ
ಗ್ರಾಮ ಸಭೆಯ ಮೂಲಕ ನಾಗರಿಕರ ಬೇಡಿಕೆಗಳನ್ನಾಧರಿಸಿ ಕ್ರಿಯಾ ಯೋಜನೆ ರೂಪಿಸಿ ಇಲಾಖಾವಾರು ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತದೆ. ಪಶುವೈದ್ಯ ಆಸ್ಪತ್ರೆ, ರಂಗಮಂದಿರದಂತಹ ಬೇಡಿಕೆಗಳಿದ್ದು ನಿವೇಶನ ನೀಡಿಕೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕಿದೆ. ಆರ್ಥಿಕ ಸಾಕ್ಷರತೆ, ಸಾವಯವ ಕೃಷಿ, ಯುವಜನತೆಗೆ ಕೌಶಲಾಭಿವೃದ್ಧಿ, ಕೃಷಿ ಹಾಗೂ ತೋಟಗಾರಿಕೆಗೆ ಉತ್ತೇಜನದಂತಹ ಚಟುವಟಿಕೆ ಹಮ್ಮಿಕೊಂಡು ಸಮಗ್ರ ರೀತಿಯಲ್ಲಿ ಗ್ರಾಮದ ಅಭಿವೃದ್ಧಿ ಕ್ರಮ ಕೈಗೊಳ್ಳುವುದು ಯೋಜ ನೆಯ ಉದ್ದೇಶಗಳಲ್ಲಿ ಸೇರಿದೆ.
ಸೌಕರ್ಯಗಳ ಕೊರತೆ
ಪಂ. ವ್ಯಾಪ್ತಿ ಅಭಿವೃದ್ಧಿ ಹೊಂದಿದ್ದರೂ ಎ.ಟಿ.ಎಂ., ಪೆಟ್ರೋಲ್ ಪಂಪ್‌ನಂತಹ ಸೌಲಭ್ಯಗಳಿಲ್ಲ. ಇದಕ್ಕಾಗಿ ನೆರೆಯ ಹೆಗ್ಗುಂಜೆ ಮೈರ್ಕೊಮೆ, ಕೊಕ್ಕರ್ಣೆ ಅಥವಾ ಬಾರಕೂರಿಗೆ ತೆರಳಬೇಕು.
ಗಾಂಧಿ ಗಾಂವ್
ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೂ ಸಹ ಬಾರ್ ಇಲ್ಲ. 4 ವರ್ಷಗಳ ಹಿಂದೆಯೇ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪರವಾನಿಗೆ ನೀಡದಂತೆ ಪಂಚಾಯತ್ ನಿರ್ಣಯ ಕೈಗೊಳ್ಳಲಾಗಿತ್ತು.
ಒಂದಷ್ಟು ಮಾಹಿತಿ
ಕಾಡೂರು ಹಾಗೂ ನಡೂರು ಕಂದಾಯ ಗ್ರಾಮಗಳಲ್ಲಿ ಯೋಜನೆಯು ಅನುಷ್ಠಾನಗೊಳ್ಳಲಿದೆ. 5,800 ಪ್ರಸ್ತುತ ಜನಸಂಖ್ಯೆ. 1,000 ಪುರುಷರಿಗೆ ಸರಾಸರಿ 1,085 ಮಹಿಳೆಯರಿದ್ದಾರೆ. 0ರಿಂದ 6 ವಯಸ್ಸಿನ 1,000 ಬಾಲಕರಿಗೆ ಹೆಣ್ಮಕ್ಕಳ ಅನುಪಾತ 900ರಷ್ಟಿದೆ(ರಾಜ್ಯದಲ್ಲಿ ಸರಾಸರಿ 948). ಶೇ.78ರಷ್ಟು ಸಾಕ್ಷರತೆಯಿದೆ. 12 ಮಂದಿ ಗ್ರಾ.ಪಂ. ಸದಸ್ಯರಿದ್ದು ಆನಂದ ನಾಯ್ಕ ಅಧ್ಯಕ್ಷರಾಗಿ, ಶಾರದಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೇಡಿಕೆ ಏನು ?
ಹೆಚ್ಚಿನ ಭಾಗ ಅರಣ್ಯಗಳಿಂದ ಆವೃತವಾಗಿರುವ ಈ ಪ್ರದೇಶಕ್ಕೆ ರಸ್ತೆಗಳೇ ಹೆಚ್ಚಿನ ಬೇಡಿಕೆ. ಪ್ರಮುಖವಾಗಿ ನಡೂರು-ಪ್ರಗತಿ ನಗರದಿಂದ ಅಲೆಯ-ಗುಡ್ಡೆಅಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆದ್ಯತೆಯ ಬೇಡಿಕೆಯಾಗಿದೆ. ಈ ಯೋಜನೆಯಡಿ ವಿಶೇಷ ಅನುದಾನದ ಲಭ್ಯತೆ ಇಲ್ಲದಿದ್ದರೂ ಸಂಸದರ ನಿಧಿ, ಶಾಸಕರ ಅನುದಾನ ಹಾಗೂ ವಿವಿಧ ಯೋಜನೆಗಳಡಿ ಪ್ರಥಮ ಆದ್ಯತೆ ನೀಡಿ ಹೆಚ್ಚಿನ ಅನುದಾನ ನೀಡುವ ಅವಕಾಶವಿದೆ.
ಸಕಾರಾತ್ಮಕ ಬದಲಾವಣೆ
ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಆಗಿದೆ. ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ.
– ಮಹೇಶ್, ಕಾಡೂರು,ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.