ಸಂಸ್ಕೃತ ಸಂಸ್ಕಾರ ಸಂಪನ್ನ ಶ್ರೇಷ್ಠ ಭಾಷೆ
Team Udayavani, Feb 5, 2018, 9:50 AM IST
ಉಡುಪಿ: ಸಂಸ್ಕೃತವು ಸಂಸ್ಕಾರ ಸಂಪನ್ನವಾದ ಶ್ರೇಷ್ಠ ಭಾಷೆ. ಸಂಸ್ಕೃತ ಓದುವವರು, ಮಾತ ನಾಡು ವವರ ಸಂಖ್ಯೆ ಕಡಿಮೆ ಇರಬಹುದು; ಆದರೆ ಇದು ಅಲ್ಪ ಭಾಷೆಯಲ್ಲ, ಇದರಲ್ಲಿ ಅಗಾಧ ಶಕ್ತಿ ಅಡಗಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ರವಿವಾರ ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪಲಿಮಾರು ಮಠ, ಸಂಸ್ಕೃತ ಭಾರತೀ ಉಡುಪಿ ಮಂಡಲ, ಶ್ರೀ ರಾಮಕೃಷ್ಣ ಶಾರದಾ ಆಶ್ರಮ (ಬೈಲೂರು ಮಠ) ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಸಂಸ್ಕೃತದ ಯಾವುದೇ ಶಬ್ದ ಕೂಡ ಅರ್ಥಹೀನ ವಲ್ಲ. ಶಬ್ದವನ್ನು ತುಂಡು ಮಾಡಿ ದರೂ ಅದು ಒಳ್ಳೆಯ ಅರ್ಥ ವನ್ನೇ ನೀಡುತ್ತದೆ. ನಾವು ಅಂಚೆ ಚೀಟಿ, ನಾಣ್ಯದಂತಹ ಹಳೆಯ ಸೊತ್ತುಗಳನ್ನು ಸಂಗ್ರಹ ಮಾಡು ವಂತೆ ಇವುಗಳಿ ಗಿಂತಲೂ ಹಳೆಯದಾದ ಮತ್ತು ಶ್ರೇಷ್ಠವಾದ ಸಂಸ್ಕೃತ ಭಾಷೆಯನ್ನು ಕೂಡ ಸಂಗ್ರಹಿಸಿಟ್ಟುಕೊಳ್ಳಬೇಕು. ನಮ್ಮ ಮನೆ, ಮನಗಳಲ್ಲಿ ಸಂಸ್ಕೃತವನ್ನು ತುಂಬಿಸಿಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಆಳಜ್ಞಾನಕ್ಕೆ ಸಂಸ್ಕೃತ
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಂಸ್ಕೃತದಿಂದ ಆಳವಾದ ಜ್ಞಾನಾರ್ಜನೆ ಸಾಧ್ಯ. ಸಂಪಾದನೆಯ ದೃಷ್ಟಿಯಿಂದ ಇಂಗ್ಲಿಷ್‌ನಂತಹ ಭಾಷೆಗಳಿದ್ದರೆ ತ್ಯಾಗ ಮತ್ತು ಸಂತೋಷಕ್ಕಾಗಿ ಸಂಸ್ಕೃತವಿದೆ. ಈ ಭಾವನೆ ನಮ್ಮೆಲ್ಲರಲ್ಲಿಯೂ ಮೂಡಬೇಕು. ಸಂಸ್ಕೃತ ಕಲಿಯುವ ಕುರಿತಾಗಿ ಇರುವ ತಪ್ಪುಕಲ್ಪನೆಗಳು ದೂರವಾಗಬೇಕು. ಸಂಸ್ಕೃತವನ್ನು ಕಲಿಸಲು ಸರಕಾರಗಳು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ಉಡುಪಿ ನಗರಸಭೆ ಆಯುಕ್ತ ಮಂಜುನಾಥಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಸ್ಕೃತ ಭಾರತಿ ಉಡುಪಿ ಮಂಡಲದ ಅಧ್ಯಕ್ಷ ಪಿ. ಶ್ರೀಧರ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷೆ ಸುಮತಾ ನಾಯಕ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ರಾವ್ ವಂದಿಸಿದರು. ಮಹೇಶ ಕಾಕತ್ಕರ್, ಡಾ| ಪಾದೆಕಲ್ಲು ವಿಷ್ಣುಭಟ್ಟ, ಡಾ| ಎಸ್.ಆರ್. ಅರುಣ ಕುಮಾರ್, ಡಾ| ಪದ್ಮನಾಭ ಮರಾಠೆ, ಉದಯ ಕುಮಾರ್ ಸರಳತ್ತಾಯ, ನಾಡೋಜ ಡಾ| ಕೆ.ಪಿ. ರಾವ್ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಅಹಂ ಸಂಸ್ಕೃತಂ ಜಾನಾಮಿ...
ಪಲಿಮಾರು ಮಠದಲ್ಲಿ ಸಂಸ್ಕೃತ ಪಾಠದ ಸಂದರ್ಭ ಓರ್ವ ಜರ್ಮನ್ ಪ್ರಜೆ ಆಗಮಿಸಿದರು. ಅವರನ್ನು ಸ್ವಾಗತಿಸಲು ತೆರಳಿದ ಸಂಸ್ಕೃತ ವಿದ್ಯಾರ್ಥಿ “ಎಕ್ಸ್‌ಕ್ಯೂಸ್ ಮಿ’ ಎಂದು ಮಾತು ಆರಂಭಿಸಿದರು. ಆಗ ಜರ್ಮನಿ ಪ್ರಜೆ “ಅಹಂ ಸಂಸ್ಕೃತಂ ಜಾನಾಮಿ’ (ನನಗೆ ಸಂಸ್ಕೃತ ತಿಳಿದಿದೆ) ಎಂದರು. ಜರ್ಮನಿ ಸೇರಿದಂತೆ ಹಲವಾರು ವಿದೇಶಿಯರಿಗೆ ಸಂಸ್ಕೃತ ಜ್ಞಾನವಿದೆ. ಸೂಪರ್ ಕಂಪ್ಯೂಟರ್‌ಗಳಲ್ಲಿ ಸಂಸ್ಕೃತವನ್ನು ಅಳವಡಿಸಿದರೆ ಉತ್ತಮ ಎನ್ನುವ ಚಿಂತನೆ ಜಗತ್ತಿನಲ್ಲಿ ನಡೆಯುತ್ತಿದೆ ಎಂದು ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.