Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ
ಸಂತೆಕಟ್ಟೆ ರಸ್ತೆ ಕಥೆ ವ್ಯಥೆ ಕಾಣದವರು ಕಾಣಿ ಕೇಳದವರು ಕೇಳಿ
Team Udayavani, Sep 27, 2024, 6:50 AM IST
ಉಡುಪಿ: ಏನೇ ಆಗಲಿ ಕಾಮಗಾರಿಯೊಂದು ಆದಷ್ಟು ಬೇಗ ಮುಗಿಸಿ ನಮ್ಮ ಜೀವನ ಉಳಿಸಿ. ಒಂದೂವರೆ ವರ್ಷದಿಂದ ಆರ್ಥಿಕ ಸಂಕಷ್ಟದ ಜತೆಗೆ ಮಾನಸಿಕ ಹಿಂಸೆ ಎದುರಿಸುತ್ತಿದ್ದೇವೆ. ತಿಂಗಳು ಗಳಿಂದ ಬಾಡಿಗೆ ಕಟ್ಟಲಾಗದ ಸ್ಥಿತಿಯಲ್ಲಿದ್ದೇವೆ. ರಿಕ್ಷಾ, ಟೆಂಪೋ ಓಡಿಸುವುದು ಕಷ್ಟ. ಯಾರಿಗೇ ಹೇಳಿದರೂ ಪರಿಹಾರ ಸಿಗುತ್ತಿಲ್ಲ. ಇದು ನಿತ್ಯದ ಗೋಳು ಎನ್ನುತ್ತಾರೆ ಸಂತೆಕಟ್ಟೆ ಪರಿಸರದ ವ್ಯಾಪಾರಿಗಳು, ರಿಕ್ಷಾ, ಟೆಂಪೋ ಚಾಲಕರು, ನಿವಾಸಿಗಳು. ಅಕ್ಕಪಕ್ಕದ ವ್ಯಾಪಾರಿಗಳಿಗೂ ವ್ಯಾಪಾರ ವಿಲ್ಲದೇ ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಜನರು ಆಗ್ರಹಿಸಿದ್ದಾರೆ.
ಜನವರಿಯೊಳಗೆ ಓವರ್‌ಪಾಸ್ ಉದ್ಘಾಟನೆ
ಉಡುಪಿ: ಸಂತೆಕಟ್ಟೆ ಕಾಮಗಾರಿ ಚುರುಕುಗೊಳಿಸಲು ಖುದ್ದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜತೆಗೆ ಮಾತನಾಡಿರುವೆ. ಮುಂದಿನ ಜನವರಿ ಯೊಳಗೆ ತಾವೇ ಹೆದ್ದಾರಿಯನ್ನು ಉದ್ಘಾ ಟಿಸುವುದಾಗಿ ಹೇಳಿದ್ದು, ಅದಕ್ಕೂ ಮೊದಲು ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಯನ್ನು ತ್ವರಿತವಾಗಿ ನಡೆಸುವಂತೆ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ರಾ.ಹೆ. ಅಧಿಕಾರಿಗಳಿಗೆ ಮತ್ತು ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿ ಸಲಾಗಿದೆ. ನಾಲ್ಕಾರು ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈಗ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು.
ಮಲ್ಪೆ – ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆಲವು ಭಾಗದಲ್ಲಿ ಹಿಂದಿನ ಸರಕಾರ ಭೂ ಸ್ವಾಧೀನ ಮಾಡಿರಲಿಲ್ಲ. ಈಗ ಭೂ ಸ್ವಾಧೀನಕ್ಕೆ ಪ್ರಾರಂಭಿಕ ನೋಟಿಸ್ ನೀಡಲಾಗಿದೆ. ಇಂದ್ರಾಳಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಗೆ ರೈಲ್ವೇ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ನಾನು ಸಂಸದನಾದ ಮೇಲೆ ಅನುಮತಿ ಪಡೆದು ಕಾಮಗಾರಿ ಆರಂಭವಾಗಿದೆ ಎಂದರು.
ಜಿಲ್ಲೆಯಲ್ಲಿ 150 ಕೋ.ರೂ.ವೆಚ್ಚದ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ 6 ಎಕ್ರೆ ಭೂಮಿ ಮೀಸ ಲಿರಿಸಲಾಗಿದೆ. ಟೆಂಡರ್ ಪಡೆದ ಸಂಸ್ಥೆ ಕಾಮಗಾರಿ ಆರಂಭಿಸಿಲ್ಲ ಎಂದರು. ಸಂತೆಕಟ್ಟೆ ಸಮಸ್ಯೆ ಬಗ್ಗೆ ಉದಯವಾಣಿ ಸರಣಿ ಮೂಲಕ ಗಮನ ಸೆಳೆದಿತ್ತು.
ಓವರ್‌ಪಾಸ್ ಕಾಮಗಾರಿ ಮುಗಿದ ಕೂಡಲೇ ಮೇಲ್ಸೇತುವೆ ಮಾಡಲಿ. ರಾಜಕೀ ಯ ಹಸ್ತಕ್ಷೇಪ ಇಲ್ಲದೇ ಕಾಮಗಾರಿ ಬೇಗ ಮುಗಿಸಲಿ. ಸ್ಥಳೀಯರ ಅನುಕೂಲಕ್ಕೆ ಸರ್ವೀಸ್ ರಸ್ತೆಯನ್ನು ಸರಿಯಾಗಿ ನಿರ್ಮಿಸಿಕೊಡಲಿ.
-ಸ್ಟೀವನ್, ಉದ್ಯಮಿ ಸಂತೆಕಟ್ಟೆ
ಕಾಮಗಾರಿ ತುಂಬಾ ನಿಧಾನವಾಗಿ ಸಾಗುತ್ತಿದೆ. ಕೇವಲ ಇಬ್ಬರು ಸೇರಿ ಬಂಡೆ ಒಡೆಯುತ್ತಿದ್ದಾರೆ. ಕನಿಷ್ಠ ಸರ್ವೀಸ್ ರಸ್ತೆಯನ್ನಾದರೂ ಬೇಗ ಮಾಡಿಕೊಡಬೇಕು. ನಿತ್ಯ ವಾಹನ ಕ್ರಾಸಿಂಗ್ ಮಾಡುವುದೇ ಸಮಸ್ಯೆ.
-ಉಮೇಶ್ ಶೆಟ್ಟಿ, ಗೌರವಾಧ್ಯಕ್ಷ, ಸಂತೆಕಟ್ಟೆ ಟ್ಯಾಕ್ಸಿ ಮೆನ್ ಮತ್ತು ಗೂಡ್ಸ್ ಟೆಂಪೋ ಯೂನಿಯನ್.
ಹೆದ್ದಾರಿ ಸಚಿವರ ಗಮನಕ್ಕೆ ತರುವೆ
ಸಂತೆಕಟ್ಟೆ ಕಾಮಗಾರಿ ವಿಳಂಬ ಹಾಗೂ ಸದ್ಯ ಸ್ಥಳೀಯರು, ಸವಾರರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಹೆದ್ದಾರಿಯ ಉನ್ನತ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಶೀಘ್ರವೇ ಕೇಂದ್ರ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು.
– ಯಶ್‌ಪಾಲ್ ಎ. ಸುವರ್ಣ, ಶಾಸಕರು,
ಸಂತೆಕಟ್ಟೆಯಲ್ಲಿ 32 ವರ್ಷಗಳಿಂದ ವ್ಯಾಪಾರ ನಡೆಸು ತ್ತಿರುವೆ. ಒಂದೂವರೆ ವರ್ಷದಲ್ಲಿ ಆದಷ್ಟು ನಷ್ಟ ಯಾವತ್ತೂ ಆಗಿಲ್ಲ. ಗ್ರಾಹಕರು ಬರಲು ಸರಿಯಾದ ರಸ್ತೆಯೇ ಇಲ್ಲ. ನಮ್ಮ ಗೋಳನ್ನು ಯಾರಿಗೆ ಹೇಳುವುದು?-ಸಂಜೀವ ಪೂಜಾರಿ,
-ಮೊಬೈಲ್ ಅಂಗಡಿ ಮಾಲಕ
ಬಹುತೇಕ ರಿಕ್ಷಾಗಳು ಸಿಎನ್‌ಜಿ ಆಗಿರುವುದರಿಂದ ಒಮ್ಮೆ ಹೊಂಡಕ್ಕೆ ಬಿದ್ದರೆ ಬೇರಿಂಗ್ ಕಟ್ ಆಗಿ 3-4 ಸಾವಿರಕ್ಕೂ ಅಧಿಕ ಖರ್ಚು ಬರುತ್ತದೆ. ನಮ್ಮ ಜೀವನವೇ ಕಷ್ಟವಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿಕೊಡಿ.
-ಜಯರಾಮ್, ಅಧ್ಯಕ್ಷ, ಸಂತೆಕಟ್ಟೆ ರಿಕ್ಷಾ ನಿಲ್ದಾಣ ಚಾಲಕ, ಮಾಲಕರ ಸಂಘ
ನಿತ್ಯ ಕುಂದಾ ಪುರದಿಂದ ಇಲ್ಲಿಗೆ ಬರಬೇಕು. ಬೈಕ್ ನಲ್ಲಿ 45ರಿಂದ 55 ನಿಮಿಷದಲ್ಲಿ ಬರುತ್ತಿ ದ್ದೆವು. ಈಗ 1 ಗಂಟೆ 20 ನಿಮಿಷ ಬೇಕು. ಒಂದು ಕಿ.ಮೀ. ಸುತ್ತುವರಿದು ಹೋಗಿ ಟೀ ಕುಡಿಯಬೇಕಾದ ಸ್ಥಿತಿ.
-ಜಿ.ಕೃಷ್ಣ, ಸಂತೆಕಟ್ಟೆಯಲ್ಲಿ ಉದ್ಯೋಗಿ.
ಕಾಮಗಾರಿ ಆರಂಭವಾದ ದಿನದಿಂದಲೂ ಗ್ರಾಹಕರು ಬರುತ್ತಿಲ್ಲ. ಶೇ.50ರಷ್ಟು ವ್ಯಾಪಾರ ಕುಸಿದಿದೆ. ಬದುಕು ನಡೆಸದಂತಾಗಿದೆ. . ಓವರ್‌ಪಾಸ್ ಕಾಮಗಾರಿ ಮುಗಿಸಿದರೆ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ.
-ವಿಶ್ವನಾಥ,
ಎಳನೀರು, ಹಣ್ಣು ವ್ಯಾಪಾರಿ, ಸಂತೆಕಟ್ಟೆ
ಪರ್ಯಾಯ ರಸ್ತೆಯನ್ನು ಸರಿಯಾಗಿ ನಿರ್ಮಿಸದೆ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು ತಪ್ಪು. ಹೆಚ್ಚುವರಿ ಸಿಬಂದಿ ನಿಯೋಜಿಸಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವು ದನ್ನು ತಪ್ಪಿಸಬೇಕು. ಈ ಕಿರಿಕಿರಿ ತಪ್ಪಬೇಕು. ಕೂಡಲೇ ಕಾಮಗಾರಿ ಮುಗಿಸಬೇಕು.
– ಗಣೇಶ್, ವ್ಯಾಪಾರಿ ಸಂತೆಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.