ಸಾಂತೂರು ಕೊಪ್ಲ: ನಗ-ನಗದು ಕಳವು
Team Udayavani, Dec 10, 2017, 3:46 PM IST
ಪಡುಬಿದ್ರಿ: ಇನ್ನಾ ಗ್ರಾಮದ ಸಾಂತೂರು ಕೊಪ್ಲ ಮುಕಮಾರ್ ಚರ್ಚ್ ಎದುರುಗಡೆಯ ಮನೆಯೊಂದರ ಬೀಗ
ಮುರಿದು ಶುಕ್ರವಾರ ರಾತ್ರಿಯ ವೇಳೆ ಒಳ ಪ್ರವೇಶಿಸಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿ, ಬೆಡ್ ರೂಮಿಗೂ ಹಾಕಿದ್ದ
ಬೀಗ ಮುರಿದು ಕಪಾಟಿನಲ್ಲಿದ್ದ ಸುಮಾರು 18 ಪವನು ಚಿನ್ನಾಭರಣ ಹಾಗೂ 7,000 ರೂ. ನಗದು ಸಹಿತ
ಸುಮಾರು 2.95ಲಕ್ಷ ರೂ. ಗಳ ಸೊತ್ತನ್ನು ಕಳವುಗೈದಿದ್ದಾರೆ.
ಬೆನಿಟಾ ಫ್ಲೆàವಿಯಾ ಡಿ”ಸಿಲ್ವ ಅವರು ನಂದಳಿಕೆ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನಿನ್ನೆ ರಜಾ ಹಾಕಿ ಜ. 14ರಂದು ನಡೆಯಲಿದ್ದ ತನ್ನ ಮಗನ ಮದುವೆ ಹೇಳಿಕೆಗಳಿಗಾಗಿ ಬಂಟ್ವಾಳದತ್ತ ತೆರಳಿದ್ದು ಶನಿವಾರ ನೇರವಾಗಿ ತನ್ನ ಶಾಲೆಗೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗಲಷ್ಟೇ ಅವರಿಗೆ ತನ್ನ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಯಲ್ಲಿ ಅತ್ತೆ, ಸೊಸೆ ರೇಷ್ಮಾ ಸೆರಾವೋ ಇಬ್ಬರೇ ಇದ್ದು ಸೊಸೆ ತನ್ನ ಅನಾರೋಗ್ಯದ ನಿಮಿತ್ತ 10 ದಿನಗಳ ಹಿಂದೆ ತನ್ನ ತಾಯಿ ಮನೆಗೆ ಹೋಗಿದ್ದರು. ಹಾಗಾಗಿ ಯಾರೂ ಮನೆಯಲ್ಲಿ ಇರಲಿಲ್ಲ. ಹಾಗಾಗಿ ಕಳ್ಳರು ನಿನ್ನೆ ರಾತ್ರಿಯಲ್ಲಿ
ವಿದ್ಯುತ್ ಇಲ್ಲದ ವೇಳೆಯಲ್ಲೇ ಬಂದು ಮುಖ್ಯ ದ್ವಾರ ಮತ್ತು ಬೆಡ್ ರೂಮಿನ ಬೀಗ ಮುರಿದು ಈ ಕೃತ್ಯವೆಸಗಿದ್ದಾರೆ.
ಎರಡನೇ ಪುತ್ರ ಗಲ್ಫ್ ದೇಶದಲ್ಲಿದ್ದು ತನ್ನ ಮದುವೆಗಾಗಿ 4 ಪವನಿನ ಹೊಸ ಕರಿಮಣಿ ಸರವನ್ನು ಕಳುಹಿಸಿದ್ದ. ಅದೂ ಸೇರಿದಂತೆ 10 ಪವನಿನ ಚಿನ್ನದ 1 ಜೈನು, 1 ಪವನಿನ ಒಂದು ಜೊತೆ ಬೆಂಡೋಲೆ, 1 ಪವನಿನ ಇನ್ನೊಂದು ಚೈನು, ತಲಾ 1 ಪವನಿನ ಎರಡು ಉಂಗುರ ಸಹಿತ 18ಪವನು ಚಿನ್ನಾಭರಣ ಹಾಗೂ 7000 ರೂ. ನಗದನ್ನು ಕಳ್ಳರು ಒಯ್ದಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಕಾರ್ಕಳ ಎಎಸ್‌ಪಿ ಹೃಷಿಕೇಶ್ ಸೋನಾವಳೆ, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಮತ್ತು ಪಡುಬಿದ್ರಿ ಪಿಎಸ್‌ಐ ಸತೀಶ್ ಭೇಟಿಯಿತ್ತಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ತನಿಖೆಯು ಮುಂದುವರಿದಿ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.