ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ಸಪ್ತೋತ್ಸವಕ್ಕೆ ಚಾಲನೆ
Team Udayavani, Jan 10, 2021, 2:16 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶನಿವಾರ ವಾರ್ಷಿಕ ಸಪೊ¤àತ್ಸವವು ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಆರಂಭಗೊಂಡಿತು.
ಓಲಿ ಕೊಡೆ ಬಳಕೆ :
ಮೊದಲು ತೆಪ್ಪೋತ್ಸವ ನಡೆಯಿತು. ಈ ಬಾರಿ ತೆಪ್ಪವನ್ನು ಬಿದಿರಿನಿಂದ ಅಲಂಕರಿಸ
ಲಾಗಿತ್ತು. ಬಳಿಕ 2 ರಥಗಳ ಉತ್ಸವ ನಡೆಯಿತು. ಒಂದು ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದರಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ಇರಿಸಿ ಪೂಜಿಸಲಾಯಿತು. ಕೃಷ್ಣಾಪುರ, ಪಲಿಮಾರು ಹಿರಿಯ, ಕಿರಿಯ, ಸೋದೆ, ಕಾಣಿಯೂರು ಶ್ರೀಗಳು ಪಾಲ್ಗೊಂಡರು. ಮಳೆ ಬಂದ ಕಾರಣ ಸ್ವಾಮೀಜಿಯವರು ಓಲಿ ಕೊಡೆ ಹಿಡಿಯಬೇಕಾಯಿತು.
ಉದ್ಘಾಟನೆ :
ರಾಜಾಂಗಣದಲ್ಲಿ ಸಪ್ತೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಪರ್ಯಾಯ ಶ್ರೀ ಈಶಪ್ರಿಯತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.
ಪಂಚ ಶತಮಾನೋತ್ಸವ :
ಜ. 16ರಿಂದ ದ್ವೆ„ವಾರ್ಷಿಕ ಪರ್ಯಾಯ ಪದ್ಧತಿಯ 500ನೇ ವರ್ಷಾಚರಣೆ ಉದ್ಘಾಟನೆ ಜರಗಲಿದೆ.
- ನೂತನ ಮಾರ್ಗ ಇಂದಿನಿಂದ ಶ್ರೀಕೃಷ್ಣ ಮಠದಲ್ಲಿ ಭಕ್ತರು ದೇವರ ದರ್ಶನ ಮಾಡುವ ಮಾರ್ಗದಲ್ಲಿ ಮಾರ್ಪಾಟು ಮಾಡಿದ್ದು ಜ. 10ರಿಂದ ಆರಂಭವಾಗಲಿದೆ.
- ಭೋಜನ ಪ್ರಸಾದ ಆರಂಭ ಶನಿವಾರ ಏಕಾದಶಿಯಾದ ಕಾರಣ ರವಿವಾರದಿಂದ (ಜ. 10) ಭೋಜನ ಪ್ರಸಾದ ಪುನಃ ಆರಂಭವಾಗಲಿದೆ.
- ಜ. 14: ಮಕರಸಂಕ್ರಾಂತಿ ಉತ್ಸವ, ಸ್ವರ್ಣ ಛತ್ರ ಸಮರ್ಪಣೆ
- ಜ. 14 ಮಕರಸಂಕ್ರಾಂತಿಯಂದು ಮೂರು ರಥಗಳ ಉತ್ಸವ ಜರಗಲಿದೆ. ಈ ಹಿಂದೆ ಶಿಥಿಲಗೊಂಡಿದ್ದ ಸ್ವರ್ಣ ಛತ್ರವನ್ನು ದುರಸ್ತಿಗೊಳಿಸಿ ನವೀಕರಿಸಿದ್ದು ಇದರ ಸಮರ್ಪಣೆ ಮಕರಸಂಕ್ರಾಂತಿಯಂದು ನಡೆಯಲಿದೆ. ಜ. 15ರಂದು ಹಗಲು ಉತ್ಸವ ಚೂರ್ಣೋತ್ಸವ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.