ಅಂಧತ್ವ ನಿವಾರಣೆಗೆ ಸರ್ವರ ಸಹಭಾಗಿತ್ವ ಅಗತ್ಯ: ಶೋಭಾ
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಕೃಷ್ಣಪ್ರಸಾದ್‌ಗೆ ಸಮ್ಮಾನ
Team Udayavani, Nov 5, 2019, 5:11 AM IST
ಬ್ರಹ್ಮಾವರ: ದೇಶದಲ್ಲಿ ಅಂಧತ್ವದಿಂದ 12 ಲಕ್ಷ ಮಂದಿ ಬಳಲುತ್ತಿದ್ದಾರೆ. ಮನಸ್ಸು ಮಾಡಿದರೆ 3 ವರ್ಷಗಳಲ್ಲಿ ಅದರ ನಿವಾರಣೆ ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಸೋಮವಾರ ಉಪ್ಪೂರು ಶ್ರೀ ರಾಮಕ್ಷತ್ರಿಯ ಸಭಾಭವನದಲ್ಲಿ ಉಡುಪಿ ರಾಮಕ್ಷತ್ರಿಯ ಸಮಾಜ ಬಾಂಧವರ ವತಿಯಿಂದ ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಕೃಷ್ಣಪ್ರಸಾದ್ ಅವರ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ 1 ಸಾವಿರ ಮಂದಿ ದೃಷ್ಟಿದೋಷದಿಂದ ಬಳಲು ತ್ತಿದ್ದು, ನೇತ್ರದಾನದಿಂದ ಅವರ ಬಾಳಿಗೆ ಬೆಳಕಾಗೋಣ. ಇಲ್ಲಿಂದಲೇ ಅಭಿ ಯಾನ ಆರಂಭಿಸೋಣ ಎಂದರು.
ಅಪೂರ್ವ ಸೇವೆ
ಡಾ| ಕೃಷ್ಣಪ್ರಸಾದ್ 20 ವರ್ಷಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿರುವಾಗಲೇ ಗ್ರಾಮಾಂತರ ಭಾಗಗಳಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಸಂಘಟಿಸಿದ್ದರು. ಪರಿವಾರ ಟ್ರಸ್ಟ್‌ನ “ಸರ್ವರಿಗೂ ನಯನ’ ಯೋಜನೆಯಡಿ ವೈಫಲ್ಯ ವಿಲ್ಲದೆ ನೂರಾರು ಶಸ್ತ್ರಚಿಕಿತ್ಸೆ ನಡೆಸಿ ದರು ಎಂದು ಶಾಸಕ ರಘುಪತಿ ಭಟ್ ಶ್ಲಾ ಸಿದರು. ಗೋವಾದಲ್ಲಿ ಇತ್ತೀಚೆಗೆ ನಡೆದ ನೇತ್ರತಜ್ಞರ ಬೃಹತ್ ಸಮ್ಮೇಳನ ದಲ್ಲಿ ಡಾ| ಕೃಷ್ಣಪ್ರಸಾದ್ ಅವರ ತಜ್ಞತೆ, ಸಾಮರ್ಥ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರಿಗಿರುವ ಗೌರವವನ್ನು ಕಣ್ಣಾರೆ ಕಂಡಿರುವುದಾಗಿ ಹೇಳಿದರು.
ಯಶಸ್ವಿನಿ ಆರಂಭಕ್ಕೆ ಮನವಿ
ಪ್ರಶಸ್ತಿ ಸ್ವೀಕಾರದ ವೇಳೆ ಮುಖ್ಯ ಮಂತ್ರಿಯವರಲ್ಲಿ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಪುನಃ ಪ್ರಾರಂಭಿಸುವಂತೆ ಮನವಿ ಮಾಡಿರುವುದಾಗಿ ಡಾ| ಕೃಷ್ಣಪ್ರಸಾದ್ ಹೇಳಿದರು.
ಪ್ರತಿ ಜಿಲ್ಲೆಯ ನೇತ್ರ ತಜ್ಞರು ಅವರ ವರ ಗ್ರಾಮಗಳಲ್ಲಿ ಅತಿ ಬಡವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವಂತೆ ವಿನಂತಿಸಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಮೇಕ್ ಇನ್ ಇಂಡಿಯಾ ಕಲ್ಪನೆಯಡಿ ಅಂತಾರಾಷ್ಟ್ರೀಯ ಗುಣ ಮಟ್ಟದ ಕಣ್ಣಿನ ಲೆನ್ಸ್ ದೇಶದಲ್ಲಿ ಉತ್ಪಾದನೆಯಾಗುತ್ತಿದೆ ಎಂದರು.
ಉಡುಪಿ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಗಣ್ಯರಾದ ಜನಾರ್ದನ ತೋನ್ಸೆ, ಗೀತಾಂಜಲಿ ಸುವರ್ಣ, ಬಿ. ಭುಜಂಗ ಶೆಟ್ಟಿ, ದಿನಕರ ಹೇರೂರು, ಆರತಿ, ವಿವಿಧ ಸಂಘಗಳ ಪ್ರತಿನಿಧಿಗಳಾದ ಕೃಷ್ಣ ಎನ್., ಮಂಜುಳಾ ಜಯಕರ್, ಯೋಗೀಶ್ ಗಾಣಿಗ, ಯೋಗೀಶ್ ಆಚಾರ್ಯ, ಲಕ್ಷ್ಮಣ ಕೋಟ್ಯಾನ್, ನಾರಾಯಣ ಶೆಟ್ಟಿ, ಪದ್ಮನಾಭ ರಾವ್, ಶ್ವೇತಾ ಮಧ್ಯಸ್ಥ, ಕೃಷ್ಣ ಆಚಾರ್ಯ, ಬಿ.ಕೆ. ಯಶವಂತ್, ಸುಬ್ರಹ್ಮಣ್ಯ ಭಟ್, ಸಂಜೀವ ಪೂಜಾರಿ ಮಾಯಾಡಿ, ಕರುಣಾಕರ್ ರಾವ್, ಮಹೇಶ್ ಕೋಟ್ಯಾನ್, ಉಮೇಶ್ ಜತ್ತನ್, ಕೆ. ಬಾಲಗಂಗಾಧರ ರಾವ್, ಸತೀಶ್ ಬಿ. ರಾವ್, ಪ್ರಕಾಶ್ ಕುಂದರ್, ಹೆರಿಯ ನರ್ನಾಡು ಮದಗ ಉಪಸ್ಥಿತರಿದ್ದರು.ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶೋಭಾ ಅವರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.