ಸಾಸ್ತಾನ ಟೋಲ್ ಕೇಂದ್ರ: ಕಾರು ಚಾಲಕನ ಮೇಲೆ ಹಲ್ಲೆ
Team Udayavani, May 22, 2017, 2:50 PM IST
ಕೋಟ: ಸಾಸ್ತಾನ ಟೋಲ್ ಕೇಂದ್ರದಲ್ಲಿ ಕಾರು ಚಾಲಕನ ಮೇಲೆ ಹಲ್ಲೆ ಗೈದ ಘಟನೆ ರವಿವಾರ ಸಂಜೆ ಸಂಭವಿಸಿದೆ. ಬ್ರಹ್ಮಾವರ ಬೈಕಾಡಿ ನಿವಾಸಿ ಪ್ರಭಾಕರ್ ಶೆಟ್ಟಿ ಹಲ್ಲೆಗೊಳಗಾದ ವ್ಯಕ್ತಿ.
ಪ್ರಭಾಕರ ಶೆಟ್ಟಿಯವರು ತನ್ನ ಮಗನೊಂದಿಗೆ ಬ್ರಹ್ಮಾವರದಿಂದ ಬೈಂದೂರಿಗೆ ತೆರಳುತ್ತಿದ್ದಾಗ ಸಾಸ್ತಾನ ಟೋಲ್ ಕೇಂದ್ರದಲ್ಲಿ ಸಿಬಂದಿಯ ಅಚಾತುರ್ಯದಿಂದ ಗೇಟ್‌ನ ರಾಡ್ ಇವರ ಕಾರಿನ ಮೇಲೆ ಬಿದ್ದು ಟೋಲ್ ಸಿಬಂದಿಯೊಂದಿಗೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಟೋಲ್ ಸಿಬಂದಿ ಹಾಗೂ ಹಿಂಬದಿಯಲ್ಲಿದ್ದ ವಾಹನದ ಸವಾರರು ಅವರ ಮೇಲೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಕೈಕಾಲು ಹಾಗೂ ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ಪ್ರಭಾಕರ ಶೆಟ್ಟಿಯವರು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟೋಲ್ ಸಿಬಂದಿ ವಿರುದ್ಧ ಆಕ್ರೋಶ
ವಾರದ ಹಿಂದೆ ಸುರತ್ಕಲ್ ಮೂಲದ ಮಹಿಳೆಗೆ ಟೋಲ್‌ನಲ್ಲಿ ಮಾನ ಹಾನಿಯಾಗುವಂತೆ ವರ್ತಿದ್ದು, ಇದೀಗ ಮತ್ತೆ ವಾಹನ ಸವಾರನ ವಿರುದ್ಧ ಹಲ್ಲೆ ನಡೆಸಲಾಗಿದೆ ಎಂದು ಟೋಲ್‌ಗೇಟ್ ಬಳಿ ಆಗಮಿಸಿದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು .
ಸರಿಯಾದ ಸಿ.ಸಿ. ಟಿವಿ ವ್ಯವಸ್ಥೆ ಇಲ್ಲದಿರುವುದರಿಂದ ಘಟನೆ ಸರಿಯಾಗಿ ಚಿತ್ರೀಕರಣಗೊಂಡಿಲ್ಲ ಎಂದು ಸ್ಥಳೀಯರು ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಿಬಂದಿ ಹಲ್ಲೆ ನಡೆಸಿಲ್ಲ
ಪ್ರಭಾಕರ್ ಶೆಟ್ಟಿ ಮೇಲೆ ಟೋಲ್ ಸಿಬಂದಿ ಹಲ್ಲೆ ನಡೆಸಿಲ್ಲ, ನಾವು ಶಾಂತ ರೀತಿಯಲ್ಲಿ ಅವರನ್ನು ಸಮಾಧಾನಿ ಸುವ ಯತ್ನ ನಡೆಸಿದ್ದೇವೆ. ಆದರೆ ಅವರು ಗಲಾಟೆ ಮಾಡುತ್ತಿದ್ದ ಕಾರಣ ಹಿಂಬದಿ ವಾಹನ ಗಳು ಬ್ಲಾಕ್ ಆಗಿದೆ. ಈ ಸಂದರ್ಭ ಆ ವಾಹನದ ಸವಾರರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಟೋಲ್ ಸಿಬಂದಿ ತಪ್ಪಿಲ್ಲ ಎಂದು ಟೋಲ್‌ನ ಮೇಲ್ವಿಚಾರಕರು ತಿಳಿಸಿದ್ದಾರೆ ಹಾಗೂ ಸಿ.ಸಿ. ಟಿವಿಯನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಿಬಂದಿಯಿಂದ ಈ ಹಲ್ಲೆ ನಡೆದಿಲ್ಲ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.