“ಸಂತೃಪ್ತ ಜೀವನ’ ಗುರಿಯ ಹೊಸ ಶಿಕ್ಷಣ ನೀತಿ ಕರಡು ಸಿದ್ಧ
Team Udayavani, Sep 28, 2018, 10:10 AM IST
ಉಡುಪಿ: “ಸಂತೃಪ್ತ ಜೀವನ’ ಮುಖ್ಯ ಗುರಿಯಾಗಿರುವ ಹೊಸ ಶಿಕ್ಷಣ ನೀತಿಯ ಕರಡು ಸಿದ್ಧವಾಗಿದ್ದು, ಸಂಪುಟ ಅನುಮೋದನೆ ನೀಡಬೇಕಾಗಿದೆ ಎಂದು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಹಾಯಕ ಸಚಿವ ಡಾ| ಸತ್ಯಪಾಲ್ ಸಿಂಗ್ ಹೇಳಿದರು.
ಮಣಿಪಾಲದ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ಗುರುವಾರ ಡಾ| ಟಿಎಂಎ ಪೈ ಸಭಾಂಗಣದಲ್ಲಿ ನಡೆದ 26ನೇ ನಾಯಕತ್ವ ಉಪನ್ಯಾಸವನ್ನು ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಭೂತಾನ್ ದೇಶದಂತೆ ಸಂತೋಷಭರಿತ ಜೀವನವೇ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ವಾಗಿದೆ. ಎಲ್ಲರಿಗೂ ಕೈಗೆಟಕುವ ಶಿಕ್ಷಣ, ಗುಣಮಟ್ಟ, ಪ್ರಾದೇಶಿಕ ಅಸಮತೋಲನ ನಿವಾರಣೆ ನೀತಿಯ ಪ್ರಮುಖ ಸ್ತಂಭಗಳಾಗಿವೆ ಎಂದರು.
ಪರಸ್ಪರ ಪ್ರೀತಿಸುವ ಶಿಕ್ಷಣ ಇರಬೇಕು. ಆಯುರ್ವೇದ ಶಾಸ್ತ್ರವು ಮಾನವ ಶರೀರದ ಸುರಕ್ಷೆ, ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದೆ. ನಾವು ದ್ವಿಮುಖ ನೀತಿಯನ್ನು ಅನುಸರಿಸುತ್ತೇವೆ. ಇದನ್ನು ಹೋಗಲಾಡಿಸುವ ಶಿಕ್ಷಣ ಬರಬೇಕು ಎಂದರು. ನಿರ್ದೇಶಕ ಪ್ರೊ| ಮಧು ವೀರರಾಘವನ್ ಸ್ವಾಗತಿಸಿ ಟ್ಯಾಪ್ಮಿ ಟ್ರಸ್ಟ್ ಟ್ರಸ್ಟಿ ಡಾ| ಎಚ್. ಶಾಂತಾ ರಾಮ್ ಸಚಿವರನ್ನು ಗೌರವಿಸಿದರು. ಪ್ರಾಧ್ಯಾಪಕ ಡಾ| ರಾಜೀವ್ ಶಾ ಕಾರ್ಯಕ್ರಮ ನಿರ್ವಹಿಸಿದರು.
ರಾಹುಲ್ ಸಾಂಕೃತ್ಯಾಯನ ಗೊತ್ತೆ?
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ| ಸತ್ಯಪಾಲ್ ಸಿಂಗ್, ಪ್ರಸಿದ್ಧ ಲೇಖಕ ರಾಹುಲ್ ಸಾಂಕೃತ್ಯಾಯನ ಕಲಿತದ್ದು 8ನೇ ತರಗತಿ. ಅವರು 150 ಗ್ರಂಥಗಳನ್ನು ಬರೆದಿದ್ದರು, 36 ಭಾಷೆ ಬಲ್ಲವರಾಗಿದ್ದರು. ಅವರನ್ನು ಶ್ರೀಲಂಕಾ ಸರಕಾರ ವಿ.ವಿ.ಯ ಒಂದು ವಿಭಾಗದ ಮುಖ್ಯಸ್ಥರನ್ನಾಗಿ ನಿಯೋಜಿಸಿತ್ತು. ಪ್ರಾಚೀನ ಭಾರತದಲ್ಲಿ ಅಂಕ ಗಳಿಕೆಯ ಪರೀಕ್ಷೆ ಇರಲಿಲ್ಲ. ಪದವಿ, ಅಂಕವಿಲ್ಲದೆಯೂ ಹುದ್ದೆಗಳನ್ನು ನೀಡಬಹುದು ಎಂಬುದು ನನ್ನ ಅಭಿಮತ. ಇದು ಭಾರತದಲ್ಲಿ ಯಾವಾಗ ಜಾರಿಯಾಗುತ್ತದೆ ಎಂದು ಹೇಳಲಾಗದು ಎಂದರು.
ಎಲ್ಲ ಕ್ಷೇತ್ರದ ಶಿಕ್ಷಣವೂ ಮುಖ್ಯ
ವೈದ್ಯಕೀಯ, ಎಂಜಿನಿಯರಿಂಗ್ ಮಾತ್ರ ಜನಪ್ರಿಯವಾಗಿದೆಯಲ್ಲ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದಾಗ ಎಂಎಫ್ ಹುಸೇನ್ ಏನು ಓದಿದ್ದರು, ಕೋಟ್ಯಂತರ ರೂ. ಗಳಿಸಲಿಲ್ಲವೆ, ಆದ್ದರಿಂದ ಎಲ್ಲ ಕ್ಷೇತ್ರಗಳೂ ಮುಖ್ಯ. ಮಕ್ಕಳ ಮೇಲೆ ಕೋರ್ಸುಗಳನ್ನು ಹೇರಬಾರದು. ಬದುಕಿನ ಸಂತೋಷ ಮುಖ್ಯ ಎಂದರು.
ಬದುಕಿನ ಮ್ಯಾನೇಜ್ಮೆಂಟ್ ಮುಖ್ಯ
ನಾವು ಮ್ಯಾನೇಜ್ಮೆಂಟ್ ಶಿಕ್ಷಣ ನೀಡುತ್ತಿದ್ದೇವೆ. ಆದರೆ ಜೀವನದ ಮ್ಯಾನೇಜ್ಮೆಂಟ್ ಶಿಕ್ಷಣ ಪಡೆಯುತ್ತಿಲ್ಲ. ಕೆಲವರು ಜನ್ಮತಃ ನಾಯಕರು, ಬಹುತೇಕ ನಾಯಕರು ಬಳಿಕ ಸೃಷ್ಟಿಯಾದವರು. ನಾಯಕತ್ವಕ್ಕೆ ಬದ್ಧತೆ, ಸಮರ್ಪಣ ಮನೋ ಭಾವನೆ ಬೇಕು ಎಂದು ಡಾ| ಸಿಂಗ್ ಹೇಳಿದರು.
ಕಿರೀಟಕ್ಕೆ ತಲೆ ಮುಖ್ಯವೊ, ಮಾತು ಮುಖ್ಯವೋ?
ಇಂಗ್ಲಿಷ್ ಗೊತ್ತಿಲ್ಲದಿದ್ದರೆ ಸಂವಹನ ಗೊತ್ತಿಲ್ಲ ಎಂಬ ಭಾವನೆ ದೇಶದ ದೌರ್ಭಾಗ್ಯ. ಚಂದ್ರಗುಪ್ತನ ಪಟ್ಟಾಭಿಷೇಕ ಸಂದರ್ಭ “ರಾಜನ ಕಿರೀಟಕ್ಕೆ ತಲೆಯಲ್ಲ, ಭಾಷೆ ಮುಖ್ಯ. ಮಾತು ಚೆನ್ನಾಗಿಲ್ಲದಿದ್ದರೆ ರಾಜತ್ವ ಬಹಳ ದಿನ ಇರುವುದಿಲ್ಲ’ ಎಂದು ಚಾಣಕ್ಯ ಹೇಳಿದ್ದ.
ಜಬಾನ್ ಕಾ ಸಚ್ಚಾ , ಲಂಗೋಟ್ ಕಾ ಪಕ್ಕಾ !
ನಾಯಕನ ಗುಣನಡತೆ ಉತ್ತಮವಿರ ಬೇಕು. ನಮ್ಮಲ್ಲಿ “ಜಬಾನ್ ಕಾ ಸಚ್ಚಾ, ಲಂಗೋಟ್ ಕಾ ಪಕ್ಕಾ’ ಎಂಬ ಗಾದೆ ಇದೆ. ಅರ್ಥವಾಯಿತೆ ಎಂದು ಡಾ| ಸಿಂಗ್ ಪ್ರಶ್ನಿಸಿದಾಗ ವಿದ್ಯಾರ್ಥಿಗಳು “ಹೌದು’ ಎಂದು ಚಪ್ಪಾಳೆ ತಟ್ಟಿದರು.
ಮೊದಲು ಅನುಶಾಸನ, ಬಳಿಕ ಶಾಸನ ನಾಯಕರಾಗಲು ಬಯಸುವವರು ಮೊದಲು ಅನುಸರಿಸಬೇಕು, ಅನಂತರ ಬೇರೆಯವರಿಗೆ ಹೇಳಬೇಕು.
ಸಂಯೋಗದಿಂದ ಶರೀರ
ಶರೀರವು ದೇಹ, ಮನಸ್ಸು, ಬೌದ್ಧಿಕತೆ, ಆತ್ಮದ ಸಂಯೋಗವಾಗಿದೆ. ಹಿಂದೆ ವಿಜ್ಞಾನ ಮನಸ್ಸಿನ ಬಗೆಗೆ ಹೇಳುತ್ತಿರಲಿಲ್ಲ. ಈಗ ಒಪ್ಪುತ್ತಿದೆ. ಗಾಳಿಯಂತೆ ಮನಸ್ಸು, ಆತ್ಮವೂ ನೋಡಲು ಸಿಗದು. ವಿಜ್ಞಾನವೇ ಹೇಳುವಂತೆ ನಮ್ಮ ಭೂಮಿಯಂತಿರುವ 50,000 ಭೂಮಿ ಗಳಿವೆ. ವಿಶ್ವದಲ್ಲಿ 1.5 ಮಿಲಿಯ ಗ್ಯಾಲಕ್ಸಿಗಳಿವೆ. ಏತನ್ಮಧ್ಯೆ ಒಬ್ಬರ ಬೆರಳಚ್ಚಿನಂತೆ ಇನ್ನೊಬ್ಬರದ್ದಿಲ್ಲ. ಇದುವೇ ಜಗತ್ತಿನ ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.