“ಉಡುಪಿಯಲ್ಲಿ ಶೀಘ್ರ ಜಿಲ್ಲಾ ಕನ್ನಡ ಭವನಕ್ಕೆ ಶಿಲಾನ್ಯಾಸ’
Team Udayavani, Jan 25, 2021, 4:00 AM IST
ಕೋಟ: ಉಡುಪಿ ಜಿಲ್ಲೆಯಲ್ಲಿ ಕನ್ನಡ ಭವನದ ನಿರ್ಮಾಣ ಅಗತ್ಯವಿದೆ. ನಾನು ಹಿಂದಿನ ಅವಧಿಯಲ್ಲಿ ಸಚಿವನಾಗಿದ್ದಾಗ ಇದಕ್ಕಾಗಿ 11 ಸೆಂಟ್ಸ್ ಜಾಗವನ್ನು ಮೀಸಲಿರಿಸುವಲ್ಲಿ ಶ್ರಮಿಸಿದ್ದೆ. ಈ ಬಾರಿ ಸರಕಾರದಿಂದ ಹೆಚ್ಚಿನ ಅನುದಾನ ಕನ್ನಡ ಭವನ ನಿರ್ಮಾಣಕ್ಕೆ ತರಲು ಜಿಲ್ಲೆಯ ನಾವೆಲ್ಲ ಜನಪ್ರತಿನಿಧಿಗಳು ಬದ್ಧರಾಗಿದ್ದೇವೆ. ಆದ್ದರಿಂದ ಆದಷ್ಟು ಶೀಘ್ರ ಕನ್ನಡ ಭವನದ ಶಿಲಾನ್ಯಾಸ ನಡೆಯಲಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾರಥ್ಯದಲ್ಲಿ, ವಿನಾಯಕ ಯುವಕ ಮಂಡಲ ಯಡ್ತಾಡಿ ಸಹಕಾರದಲ್ಲಿ, ಸಾಹಿತಿ ಬಾಬು ಶಿವ ಪೂಜಾರಿ ಯವರ ಅಧ್ಯಕ್ಷತೆಯಲ್ಲಿ ಜ. 24ರಂದು ಸಾೖಬ್ರಕಟ್ಟೆಯ ಮಹಾತ್ಮಾ ಗಾಂ ಧಿ ಪ್ರೌಢ ಶಾಲೆಯಲ್ಲಿ ಜರಗಿದ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನ “ಹಗ್ಗಿನ ಹನಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ಸಾಹಿತ್ಯದಲ್ಲಿ ಎಡ-ಬಲ- ಮಧ್ಯಮ ಪಂಥಗಳು ರಾರಾಜಿಸುತ್ತಿವೆ. ಇವೆಲ್ಲಕ್ಕಿಂತ ರಾಷ್ಟ್ರೀಯತೆಯನ್ನು ಸಾರುವ ರಾಷ್ಟ್ರೀಯ ಪಂಥ ಸಾಹಿತ್ಯದಲ್ಲಿ ಹೊರಹೊಮ್ಮಬೇಕಿದೆ ಎಂದರು.
ಸಾಹಿತ್ಯದಿಂದ ಸಾಮರಸ್ಯ :
ಹಿರಿಯ ಚಿಂತಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯಕ್ಕೆ ಜಾತಿ-ಧರ್ಮಗಳ ಭೇದವಿಲ್ಲ. ಹೀಗಾಗಿ ಸಾಹಿತ್ಯದ ಮೂಲಕ ಸಾಮರಸ್ಯ ಮೂಡಿಸಬಹುದು, ಸಮಾಜವನ್ನು ಒಗ್ಗೂಡಿಸ ಬಹುದು ಎಂದರು.
ಸಾಹಿತ್ಯ ಉತ್ತೇಜಿಸುವ ಕಾರ್ಯವಾಗಲಿ :
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತು ಗಳನ್ನಾಡಿ, ಜಿಲ್ಲೆಯಲ್ಲಿ ಕನ್ನಡದ ಮನಗಳನ್ನು ಒಟ್ಟುಗೂಡಿಸುವ, ಸಾಹಿತ್ಯವಾತಾವರಣ ಉತ್ತೇಜಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿವೆ. ಸಮ್ಮೇಳನಗಳು ಇದಕ್ಕೆ ಸಹಕಾರಿಯಾಗಿವೆ ಎಂದವರು ತಿಳಿಸಿದರು.
ಮೆರವಣಿಗೆಗೆ ಚಾಲನೆ ;
ಈ ಸಂದರ್ಭ ಸಾೖಬ್ರಕಟ್ಟೆ ಮುಖ್ಯ ಪೇಟೆಯಿಂದ ಸಮ್ಮೇಳನದ ಸಭಾಂಗಣದ ತನಕ ಭವ್ಯ ಮೆರವಣಿಗೆ ನಡೆಯಿತು.ಬ್ರಹ್ಮಾವರ ತಾ.ಪಂ. ಅಧ್ಯಕ್ಷೆ ಜ್ಯೋತಿಉದಯ ಪೂಜಾರಿ ಅವರು ಮೆರವಣಿಗೆಗೆಚಾಲನೆ ನೀಡಿದರು. ಜತೆಗೆ ಯಡ್ತಾಡಿ ಗ್ರಾ.ಪಂ. ಪಿಡಿಒ ವಿನೋದ್ ಕಾಮತ್ ಅವರೊಂದಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಿಕಟಪೂರ್ವ ತಾ| ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕೆದ್ಲಾಯ ಅವರು ಸಮ್ಮೇಳನಾಧ್ಯಕ್ಷ ಬಾಬು ಶಿವ ಪೂಜಾರಿಯವರಿಗೆ ಪರಿಷತ್ ಧ್ವಜ ಹಸ್ತಾಂತರಿಸಿದರು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಾ„ಬ್ರಕಟ್ಟೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ನಾಯ್ಕ, ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಕ.ಸಾ.ಪ. ಜಿಲ್ಲಾ ಸಂಘಟನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಕ.ಸಾ.ಪ. ಬ್ರಹ್ಮಾವರ-ಬಾಕೂìರು ವಲಯ ಘಟಕದ ಅಧ್ಯಕ್ಷ ಅಶೋಕ್ ಭಟ್, ವಿನಾಯಕ ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಸಮ್ಮೇಳನಾಧ್ಯಕ್ಷರ ಪತ್ನಿ ಪ್ರೇಮಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಸ್ವಾಗತಿಸಿ, ಸಾಂಸ್ಕೃತಿಕ ಚಿಂತಕ ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿಗಳಾದ ಮೋಹನ್ ಉಡುಪ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.