ಸಂವಿಧಾನ ರಕ್ಷಿಸಿ ದೇಶ ಉಳಿಸಿ ಸಮಾವೇಶ
Team Udayavani, Apr 25, 2018, 8:25 AM IST
ಉಡುಪಿ: ದಲಿತ ಸಂಘರ್ಷ ಸಮಿತಿಗಳ ಮಹಾಒಕ್ಕೂಟ ಹಾಗೂ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಎ. 24ರಂದು ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂಟಪದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಜನ್ಮದಿನಾಚರಣೆ – ಸಂವಿಧಾನ ರಕ್ಷಿಸಿ ದೇಶ ಉಳಿಸಿ ಸಮಾವೇಶ ನಡೆಯಿತು. ನಟ ಪ್ರಕಾಶ್ ರೈ ಮಾತನಾಡಿ, ಧರ್ಮ ದೀಪ ಹಚ್ಚುವ ಕೆಲಸ ಮಾಡಬೇಕು ವಿನಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಧರ್ಮವು ಮನುಷ್ಯನನ್ನು ವಿಕಾಸದೆಡೆಗೆ ಒಯ್ಯಬೇಕು ಎಂದರು. ರಾಜ್ಯ ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್ ಸಮಾವೇಶ ಉದ್ಘಾಟಿಸಿದರು. ‘ನಾನು ಗೌರಿ’ ಪತ್ರಿಕೆಯ 2ನೇ ಸಂಚಿಕೆಯನ್ನು ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
ಕೋಮು ಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್, ಒಕ್ಕೂಟದ ಗೌರವಾಧ್ಯಕ್ಷ ಸುಂದರ್ ಮಾಸ್ತರ್, ಧರ್ಮಗುರು ಫಾ| ವಿಲಿಯಂ ಮಾರ್ಟಿಸ್, ವಿವಿಧ ಸಂಘಟನೆಗಳ ಮುಖಂಡರಾದ ಶ್ಯಾಮ್ ರಾಜ್ ಬಿರ್ತಿ, ಬೊಗ್ರ ಕೊರಗ, ಯಾಸಿನ್ ಮಲ್ಪೆ, ಎಸ್.ಎಸ್. ಪ್ರಸಾದ್, ವೆಲೇರಿಯನ್ ಫೆರ್ನಾಂಡಿಸ್, ಚಂದ್ರ ಅಲ್ತಾರ್, ಶ್ಯಾಮ್‌ಸುಂದರ್ ಉಪಸ್ಥಿತರಿದ್ದರು. ಜಿ. ರಾಜಶೇಖರ್ ಸ್ವಾಗತಿಸಿದರು. ಕೆ. ಫಣಿರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲಿನಿಂದ ಕೆ.ಎಂ. ಮಾರ್ಗ- ಹಳೆ ಪೋಸ್ಟ್ ಆಫೀಸ್ ರಸ್ತೆಯಾಗಿ ಭುಜಂಗ ಪಾರ್ಕ್‌ವರೆಗೆ ಮೆರವಣಿಗೆ ನಡೆಸಲಾಯಿತು.
ಕ್ಯಾಂಡಲ್ ಪ್ರತಿಭಟನೆ
ಸಮಾವೇಶದ ಬಳಿಕ ದೇಶದಲ್ಲಿ ಬಾಲಕಿಯರು, ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರವನ್ನು ಖಂಡಿಸಿ ಕ್ಯಾಂಡಲ್ ಉರಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಾಯಿತು. ಇತರ ಗಣ್ಯರೊಂದಿಗೆ ಸಾಹಿತಿ ವೈದೇಹಿ, ಪತ್ರಕರ್ತೆ ಸಬೀಹಾ ಫಾತಿಮಾ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.