ಸಾಮಾಜಿಕ ಅರಣ್ಯ ಪೋಷಣೆ ಮೂಲಕ ಸಮಾಜಕ್ಕೆ ಮಾದರಿ
Team Udayavani, Nov 28, 2020, 9:54 AM IST
ಕಟಪಾಡಿ, ನ. 27: ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದು ನಿಂತ ಗಿಡಗಳು, ಅವುಗಳ ಸುತ್ತ ಮಣ್ಣಿನ ಕಟ್ಟೆ, ಸುತ್ತಮುತ್ತಲ ಹುಲ್ಲುಗಳನ್ನು ತೆಗೆದು ಓರಣವಾಗಿ ಇಟ್ಟ ಸ್ಥಳ. ಇದು ಯಾವುದೋ ಪಾರ್ಕ್‌ನ ದೃಶ್ಯವಲ್ಲ. ಬದಲಾಗಿ ಇದೊಂದು ಮನೆ ಸನಿಹ ದಲ್ಲಿರುವ ಸಾಮಾಜಿಕ ಅರಣ್ಯವನ್ನು ಕಾಳಜಿ ವಹಿಸಿ ಪೋಷಿಸಿದ್ದಕ್ಕೊಂದು ಮಾದರಿ.
ಈ ದೃಶ್ಯ ಕಾಣಸಿಗುವುದು ಕಟಪಾಡಿ- ಶಿರ್ವ ರಸ್ತೆಯ ಸುಭಾಸ್ ನಗರ ಎಂಬಲ್ಲಿ. ಸಮಾಜ ಸೇವಕರಾದ ಮ್ಯಾಕ್ಸಿಂ ಆಲ್ವ ಅವರೇ ಇದರ ಹಿಂದಿನ ವ್ಯಕ್ತಿ. ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಹೊಣೆಗಾರಿಕೆ ಯಡಿಯಲ್ಲಿ ಗಿಡಗಳನ್ನು ನೆಟ್ಟಿತ್ತು. ಆದರೆ ಇಲ್ಲಿ ಹುಲ್ಲು ಪೊದೆಗಳು ತುಂಬಿ ನಡೆ ದಾಡಲು ಕಷ್ಟವಾಗಿತ್ತು ಅಲ್ಲದೇ ದಾರಿಹೋಕರು, ವಾಹನ ಸವಾರರು ತ್ಯಾಜ್ಯ ಎಸೆಯಲು ಆರಂಭಿಸಿದ್ದರು. ಇದರಿಂದ ಮ್ಯಾಕ್ಸಿಂ ಅವರಿಗೆ ಮನೆಗೆ ನಡೆದಾಡು ವುದೂ ಕಷ್ಟ ಎಂಬ ಸ್ಥಿತಿ ಬಂದಿತ್ತು.
ಇದಕ್ಕೆಲ್ಲ ಮ್ಯಾಕ್ಸಿಂ ಅವರು ಅಂತ್ಯ ಹಾಡಿ ಇಡೀ ಪ್ರದೇಶವನ್ನು ಪರಿವರ್ತನೆಗೊಳಿಸಲು ಉದ್ದೇಶಿಸಿದರು. ಅದರಂತೆ ಕಸ ಗಳನ್ನು ತೆಗೆದು, ಗಿಡಗಂಟಿಗಳನ್ನು ಸ್ವತ್ಛ ಗೊಳಿಸಿದ್ದಾರೆ. ಗಿಡಗಳಿಗೆ ಕಟ್ಟೆ ಕಟ್ಟಿ ನೀರೆರೆದು ಪೋಷಿಸಿದ್ದಾರೆ. ಬಾನಾಡಿಗಳಿಗೆ ಉಪಯುಕ್ತವಾಗುವಂತೆ ನಡುವೆ ಹಣ್ಣುಗಳ ಗಿಡಗಳನ್ನೂ ನೆಟ್ಟು ಗೊಬ್ಬರ ಹಾಕಿದ್ದಾರೆ. ಇದರಿಂದ ರಸ್ತೆ ಬದಿ ಕಣ್ಸೆಳೆಯುವ ಸುಂದರ ಪ್ರದೇಶವೊಂದು ನಿರ್ಮಾಣಗೊಂಡಿದೆ. ರಸ್ತೆ ಪಕ್ಕದ ಈ ಭಾಗದಲ್ಲಿನ ಸ್ವತ್ಛತೆ ಗಮನ ಸೆಳೆಯುತ್ತಿದೆ. ಇಲ್ಲಿ ಬೆಳಗ್ಗಿನ ವಾಕಿಂಗ್ ಮನಮೋಹಕ ಎನಿಸುತ್ತದೆ ಎನ್ನುತ್ತಾರೆ ಸ್ಥಳೀಯರಾದ ಕುರ್ಕಾಲು ಸದಾಶಿವ ಬಂಗೇರ ಅವರು.
ಪ್ರಕೃತಿಗೆ ಉತ್ತಮ ಕೊಡುಗೆ : ಮನೆಯ ಮುಂಭಾಗದಲ್ಲಿ ತ್ಯಾಜ್ಯ ಎಸೆಯುವವರು ಇದೀಗ ಎಸೆಯುತ್ತಿಲ್ಲ. ಪರಿಸರದ ಸ್ವತ್ಛತೆಯ ಜತೆಗೆ ಪ್ರಕೃತಿಗೆ ಉತ್ತಮ ಕೊಡುಗೆ ನೀಡಿರುವ ಹೆಮ್ಮೆ ಇದೆ. –ಮ್ಯಾಕ್ಸಿಂ ಆಲ್ವ , ಸಮಾಜ ಸೇವಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.