ಮಹಿಳಾ ಸ್ವಾವಲಂಬನೆಗೆ ಸವಿರುಚಿ ಸಂಚಾರಿ ಕ್ಯಾಂಟೀನ್
Team Udayavani, Jul 3, 2018, 6:00 AM IST
ಉಡುಪಿ: ಇಡ್ಲಿ, ಚಪಾತಿ, ಪೂರಿ, ರುಚಿಯಾದ ಊಟ ಇಲ್ಲಿ ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚು ರುಚಿ. ಬೆಲೆಯೂ ಕಡಿಮೆ. ಇಷ್ಟೆಲ್ಲ ಇರುವುದು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಸದಸ್ಯೆಯರೇ ಸೇರಿ ಮಾಡಿದ ಸವಿರುಚಿ ಕ್ಯಾಂಟೀನ್‌ನಲ್ಲಿ.
ಸ್ವಾವಲಂಬನೆಯತ್ತ ಹೆಜ್ಜೆಹಾಕಲು ಮಹಿಳೆಯರೇ ಶುರುಮಾಡಿದ ಈ ಕ್ಯಾಂಟೀನ್ ಈಗ ನಗರದಲ್ಲಿ ಕಾರ್ಯಾರಂಭ ಮಾಡಿದೆ. ಇದು ಜಿಲ್ಲೆಗೇ ಮೊದಲ ಸವಿರುಚಿ ಕ್ಯಾಂಟೀನ್.
7 ಮಹಿಳೆಯರ ತಂಡ
ಒಕ್ಕೂಟದ ಜಿಲ್ಲಾಧ್ಯಕ್ಷೆ ಸಹಿತ 7 ಮಂದಿ ಸದಸ್ಯೆಯರು ಈ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇದರಲ್ಲಿ ಚಾಲಕಿ, ಅಡುಗೆತಯಾರಿಸುವುದು ಎಲ್ಲವೂ ಅವರೇ.
ಬ್ರಹ್ಮಗಿರಿಯ ಸ್ತ್ರೀ ಶಕ್ತಿ ಭವನಕ್ಕೆ ಬೆಳಗ್ಗೆ ಬರುವ ಈ ಸದಸ್ಯೆಯರು ಆಹಾರ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ವಾಹನದಲ್ಲೇ ಚಹಾ-ತಿಂಡಿ ಮಾಡಿಕೊಟ್ಟರೆ, ಊಟವನ್ನು ಸ್ತ್ರೀ ಶಕ್ತಿ ಭವನದಿಂದ ತಂದು ಮಾರಾಟ ಮಾಡಲಾಗುತ್ತಿದೆ. ಮಣಿಪಾಲದ ಡಿಸಿ ಕಚೇರಿ ಮುಂಭಾಗದಲ್ಲಿ ಆರಂಭವಾದ ಸಂಚಾರಿ ಕ್ಯಾಂಟೀನ್, ಉಡುಪಿ ನಗರ ಸಭೆ ಕಾರ್ಯಾಲಯದ ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಏನೇನಿದೆ?
ತಿಂಡಿ: 10ರಿಂದ 20 ರೂ.ಇಡ್ಲಿ, ಚಪಾತಿ, ಪೂರಿ, ಪರೋಟ, ಗೋಳಿಬಜೆ, ನೀರುಳ್ಳಿ ಬಜೆ, ಪೋಡಿ, ಅಕ್ಕಿರೊಟ್ಟಿ, ಪುಂಡಿ, ಎಗ್ ಬೋಂಡ, ಪಲಾವ್, ಇತ್ಯಾದಿ.
ಚಹಾ, ಕಾಫಿ, ಹಾಲು: 10 ರೂ.
ತರಕಾರಿ ಊಟ: 25 ರೂ.
ಚಿಕನ್ ಸುಕ್ಕ: 30 ರೂ., ಕಬಾಬ್: 10ರೂ.
ಆದಾಯ ಸಮಾನಾಗಿ ಹಂಚಿಕೆ
ಸಂಚಾರಿ ಕ್ಯಾಂಟೀನ್ ಮೂಲಕ ವ್ಯಾಪಾರ ಮಾಡಿ, ಖರ್ಚು ಕಳೆದು ಉಳಿದ ಆದಾಯವನ್ನು ಮಹಿಳೆಯರು ಸಮಾನಾಗಿ ಹಂಚಿಕೊಳ್ಳುತ್ತಾರೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ.
10 ಲಕ್ಷ ರೂ. ನೆರವು
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಕ್ಯಾಂಟೀನ್‌ಗೆ10 ಲಕ್ಷರೂ. ಬಡ್ಡಿರಹಿತ ಸಹಾಯ ನೀಡಲಾಗಿದೆ. ಇದರಿಂದ ವಾಹನ ಹಾಗೂ ಅಗತ್ಯ ಪರಿಕರಗಳನ್ನು ಖರೀದಿಸಲಾಗಿದೆ. 6ನೇ ತಿಂಗಳಿಂದ ತಿಂಗಳಿಗೆ 15 ಸಾವಿರ ರೂ. ನಂತೆ ಅಸಲನ್ನು ಹಿಂದಿರುಗಿಸಬೇಕಿದೆ.
ಪ್ಲಾಸ್ಟಿಕ್ ಬಳಕೆ ಇಲ್ಲ
ಕ್ಯಾಂಟೀನ್‌ನಲ್ಲಿ ಯಾವುದಕ್ಕೂ ಪ್ಲಾಸ್ಟಿಕ್ ಬಳಕೆ ಇಲ್ಲ. ಸ್ಟೀಲ್ ತಟ್ಟೆ-ಲೋಟಗಳನ್ನೇ ಬಳಸಲಾಗುತ್ತದೆ. ತ್ಯಾಜ್ಯ ಹಾಕಲು ಬಾಕ್ಸ್ ಇದೆ. ಸಂಜೆ ಕಸವನ್ನು ನಗರಸಭೆಯತ್ಯಾಜ್ಯ ವಾಹನಕ್ಕೆ ನೀಡಲಾಗುತ್ತದೆ. ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ.
ಹೊರಗಿನ ಆಹಾರ ಇಲ್ಲ
ಕ್ಯಾಂಟೀನ್‌ನಲ್ಲಿ ಯಾವುದೇ ಹೊರಗಿನ ಆಹಾರ ಇಲ್ಲ. ಪುಂಡಿ, ಅಕ್ಕಿರೊಟ್ಟಿಯನ್ನು ಮಹಿಳೆಯರು ಮನೆಯಲ್ಲೇ ಮಾಡಿ ಹಾಟ್‌ಬಾಕ್ಸ್‌ನಲ್ಲಿಟ್ಟು ತರುತ್ತಾರೆ. ಉತ್ತಮ ರುಚಿಯ ಆರೋಗ್ಯಕರ ಆಹಾರ ಪೂರೈಸಲಾಗುತ್ತಿದೆ.
ತಾ. ಘಟಕ ಗಳಿಗೂ ಕ್ಯಾಂಟೀನ್ ವಿಸ್ತರಣೆ
ಸ್ವ ಉದ್ಯೋಗಕ್ಕಾಗಿ ಕ್ಯಾಂಟೀನ್ ಒಂದು ಉತ್ತಮ ಅವಕಾಶ. ಸರಕಾರಿ ಕಚೇರಿಗಳ ಮುಂಭಾಗ, ಜನ ಸೇರುವಲ್ಲಿ ಸಂಚಾರಿ ಕ್ಯಾಂಟೀನ್ ನಿಲ್ಲಿಸಲು ಅನುವು ಮಾಡಿಕೊಟ್ಟು ಮಹಿಳೆಯರ ಸ್ವಾವಲಂಬನೆಯ ನಡೆ ಪ್ರೋತ್ಸಾಹಿಸಬೇಕಿದೆ. ಮುಂದೆ ತಾ. ಘಟಕಗಳಿಗೂ ಕ್ಯಾಂಟೀನ್ ವಿಸ್ತರಣೆ ಆಗಲಿದೆ.
– ಧನಲಕ್ಷ್ಮೀ ಸುಧಾಕರ್ ಪೂಜಾರಿ, ಜಿಲ್ಲಾಧ್ಯಕ್ಷರು, ಸ್ತ್ರೀ ಶಕ್ತಿ ಒಕ್ಕೂಟ
– ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.