ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
ಸಮಾಜಮುಖೀ ಯೋಚನೆ, ಸಾಮುದಾಯಿಕ ಯೋಜನೆಗಳ ಸಾಕಾರ
Team Udayavani, Jan 16, 2025, 3:34 PM IST
– “ಸವಿತಾ ಆರೋಗ್ಯಶ್ರೀ’ (ವಿಮೆ) ಯೋಜನೆ
– “ನಮ್ಮ ಸಹಕಾರಿ ನಮ್ಮ ಮನೆ’ ಸಾಲ ಯೋಜನೆ
– “ನಮ್ಮ ಸಹಕಾರಿ ನಮ್ಮ ವಾಹನ’ ಯೋಜನೆ
– “ಸವಿತಾ ವಿವಾಹ ಸಾಲ’ ಯೋಜನೆ
ಉಡುಪಿ: ಉಡುಪಿ ಅಂಬಲಪಾಡಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಸಮಾಜಮುಖೀಯಾಗಿ ಚಿಂತನೆ ನಡೆಸಿ ತಮ್ಮ ಸಮುದಾಯದ ಅಭಿವೃದ್ಧಿಯೊಂದಿಗೆ ಸಮಾಜಕ್ಕೆ ವಿಶೇಷವಾದ ಕೊಡುಗೆ ನೀಡುವುದರೊಂದಿಗೆ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ.
ಸಾಂತ್ವಾನ-ಸಹಾಯಹಸ್ತ
2007ರಲ್ಲಿ ಸ್ಥಾಪನೆಗೊಂಡ ಸಹಕಾರಿ ಸಂಘವು ಕೊರೊನಾ ಸಂಕಷ್ಟ ಕಾಲದಲ್ಲಿ ಎರಡು ಬಾರಿ ಸುಮಾರು 9 ಲ.ರೂ.ಗೂ ಹೆಚ್ಚು ಮೌಲ್ಯದ ಉತ್ತಮ ಗುಣಮಟ್ಟದ ದಿನಸಿ ಸಾಮಗ್ರಿಗಳ ಕಿಟ್‌ಗಳನ್ನು ಕೌÒರಿಕ ಸಮುದಾಯದವರಿಗೆ ವಿತರಿಸಲಾಗಿದೆ. “ಸವಿತಾ ಹಿರಿಯ ನಾಗರಿಕ ವೇತನ’ ಯೋಜನೆಯಡಿ ಸಮುದಾಯದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಮತ್ತು 75 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಪಿಂಚಣಿ ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು ನೂರು ಮಂದಿಗೆ ನೀಡಲಾಗಿದೆ.
ವಿವಿಧ ಯೋಜನೆಗಳು:
“ಸವಿತಾ ಆರೋಗ್ಯಶ್ರೀ’ (ವಿಮೆ) ಯೋಜನೆ
“ಸವಿತಾ ಆರೋಗ್ಯಶ್ರೀ’ (ವಿಮೆ) ಯೋಜನೆ ಯಡಿ ಸಂಘದಲ್ಲಿ ನಿರಂತರ ವ್ಯವಹಾರ ಇರಿಸಿಕೊಂಡ ಕೌÒರಿಕರಿಗೆ ಆರೋಗ್ಯ ಸಮಸ್ಯೆ ಎದುರಾಗಿ ಆಸ್ಪತ್ರೆ ದಾಖಲಾದರೆ ಆತನ ಮತ್ತು ಆತನ ಕುಟುಂಬದವರಿಗೆ 5ರಿಂದ 25 ಸಾವಿರ ರೂ. ತನಕ ವಿಮಾ ಯೋಜನೆಯಡಿ ಸಹಾಯಧನ ಒದಗಿಸುವ ಯೋಜನೆ ರೂಪಿಸಲಾಗಿದೆ. “ನಿಧಿಯಾಗು ನೆರವಾಗು’ ಧ್ಯೇಯದಡಿ ಸಹಕಾರಿ ಸಂಘದಲ್ಲಿ ನೋಂದಾಯಿಸಲ್ಪಟ್ಟ ಸದಸ್ಯರು ಮರಣ ಹೊಂದಿದಲ್ಲಿ (ಅದೇ ದಿನ) ಅವರ ಕುಟುಂದವರಿಗೆ 10 ಸಾವಿರ ರೂ. ಮರಣ ನಿಧಿ ನೀಡಲಾಗುವುದು.
“ಕ್ಷೌರಿಕ ಕೌಶಲಾಭಿವೃದ್ಧಿ’ ಯೋಜನೆ
“ಕ್ಷೌರಿಕ ಕೌಶಲಾಭಿವೃದ್ಧಿ’ ಯೋಜನೆಯಡಿ ಯುವಜನರನ್ನು ಕುಲ ಕಸುಬಿನತ್ತ ಆಕರ್ಷಿಸಲು ಕ್ಷೌರಿಕ ವೃತ್ತಿ ಕಲಿಯುವವರಿಗೆ (ಕಲಿಕಾ ಹಂತದಲ್ಲಿ) ವರ್ಷಕ್ಕೆ 12 ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾವುದು.
“ನಮ್ಮ ಸಹಕಾರಿ ನಮ್ಮ ಮನೆ’ ಸಾಲ ಯೋಜನೆ
“ನಮ್ಮ ಸಹಕಾರಿ ನಮ್ಮ ಮನೆ’ ಸಾಲ ಯೋಜನೆಯಡಿ ಶೇ.7.5 ಬಡ್ಡಿದರದಲ್ಲಿ 25 ಲ.ರೂ. ವರೆಗೆ ಸಾಲ ನೀಡಲಾಗುವುದು. ಈಗಾಗಲೇ 13 ಮಂದಿ ಫಲಾನುಭವಿಯಗಿದ್ದಾರೆ.
“ನಮ್ಮ ಸಹಕಾರಿ ನಮ್ಮ ವಾಹನ’ ಯೋಜನೆ
“ನಮ್ಮ ಸಹಕಾರಿ ನಮ್ಮ ವಾಹನ’ ಯೋಜನೆಯಡಿ ವಾಹನ ಖರೀದಿಗೆ ಶೇ.8.5 ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, 15 ಮಂದಿ ಫಲಾನುಭವಿಗಳಾಗಿದ್ದಾರೆ.
ನೂತನ ಸೆಲೂನ್ ತೆರೆಯಲು ಮತ್ತು ನವೀಕೃತಗೊಳಿಸಲು ಶೂನ್ಯ ಬಡ್ಡಿದರದಲ್ಲಿ ಸಾಲ.
ನೂತನ ಸೆಲೂನ್ ತೆರೆಯಲು ಮತ್ತು ನವೀಕೃತಗೊಳಿಸಲು 1 ವರ್ಷದ ತನಕ ಶೂನ್ಯ ಬಡ್ಡಿ, ಅನಂತರ ಶೇ.10ರ ಬಡ್ಡಿದರದಲ್ಲಿ 2 ಲ.ರೂ. ವರೆಗೆ ಸಾಲ ನೀಡಲಾಗುವುದು. ಈ ಯೋಜನೆಯಡಿ 40 ಮಂದಿ ಫಲಾನುಭವಿಗಳಾಗಿದ್ದಾರೆ.
“ಸವಿತಾ ಸಹಾಯಹಸ್ತ’ ಯೋಜನೆ
“ಸವಿತಾ ಸಹಾಯಹಸ್ತ’ದಡಿ ತುರ್ತು ಅವಶ್ಯಕತೆಗೆ 3 ಲ.ರೂ. ವರೆಗೆ ವೈಯಕ್ತಿಕ ಸಾಲ, ನೂರು ಮಂದಿ ಫಲಾನುಭವಿಗಳಾಗಿದ್ದಾರೆ.
“ನಮ್ಮ ಸಹಕಾರಿ ನಮ್ಮ ಶಿಕ್ಷಣ’ ಯೋಜನೆ
“ನಮ್ಮ ಸಹಕಾರಿ ನಮ್ಮ ಶಿಕ್ಷಣ’ ಯೋಜನೆಯಡಿ ಕ್ಷೌರಿಕರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಶೇ.9ರ ಬಡ್ಡಿದರದಲ್ಲಿ 5 ಲ.ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಐವರಿಗೆ ನೀಡಲಾಗಿದೆ.
“ಸವಿತಾ ವಿವಾಹ ಸಾಲ’ ಯೋಜನೆ
“ಸವಿತಾ ವಿವಾಹ ಸಾಲ’ ಯೋಜನೆಯಡಿ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಲಾಗುವುದು. ಈಗಾಗಲೇ 12 ಮಂದಿಗೆ ವಿತರಿಸಲಾಗಿದೆ.
“ಅತ್ಯುತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ’
ಕೊರೊನಾ ಸಂದರ್ಭ ಮಾಡಲ್ಪಟ್ಟ ಸಮಾಜಮುಖೀ ಕಾರ್ಯಗಳನ್ನು ಪರಿಗಣಿಸಿದ ರಾಜ್ಯ ಸೌಹಾರ್ದ ಸಹಕಾರಿಯು 2020ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ 67ನೇ ರಾಷ್ಟ್ರೀಯ ಸಹಕಾರಿ ಸಮ್ಮೇಳನದಲ್ಲಿ ಸಂಘಕ್ಕೆ “ಅತ್ಯುತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಿದೆ.
ವೈದ್ಯಕೀಯ ಪರೀಕ್ಷಾ ಸೇವೆ
ಸಹಕಾರಿ ಚಳುವಳಿಯಲ್ಲಿ ಪ್ರಥಮ ಬಾರಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಿಸಲಾಗಿದ್ದು, ಈ ಸೆಂಟರ್ ಸಮುದಾಯದ ಆರೋಗ್ಯದ ಮೇಲೆ ಗಮನಹರಿಸಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಸೇವೆಗಳನ್ನು ಅತ್ಯಲ್ಪ ದರದಲ್ಲಿ ಒದಗಿಸುವ ಉದ್ದೇಶ ಹೊಂದಿದೆ. ಇಲ್ಲಿ ರಕ್ತ, ಮೂತ್ರ, ಕಫ ಪರೀಕ್ಷೆ ಸಹಿತ ಮೊದಲಾದ ಪರೀಕ್ಷೆಗಳನ್ನು ನಡೆಸಿ ಶೀಘ್ರವಾಗಿ ಶುದ್ಧ, ನಿಖರ ಮತ್ತು ವಿಶ್ವಾಸಾರ್ಹವಾದ ವರದಿಯನ್ನು ನೀಡುವ ಗುರಿ ಇರಿಸಿಕೊಂಡಿದೆ. ಅಲ್ಲದೆ ಮನೆಯಿಂದ ಹೊರಗೆ ಬರಲು ಆಗದವರು, ವಯಸ್ಸಾದವರು, ಹಾಸಿಗೆ ಹಿಡಿದಿರುವವರ ಮನೆಗೆ ತೆರಳಿ ರಕ್ತ ಸಂಗ್ರಹಿಸಿ ಪರೀಕ್ಷೆ ವರದಿಯನ್ನು ಸಕಾಲದಲ್ಲಿ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು.
ಈ ಕೇಂದ್ರದಲ್ಲಿ ಪ್ರತಿಯೊಂದು ಪರೀಕ್ಷೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ. 15 ವರ್ಷಕ್ಕೂ ಮೇಲ್ಪಟ್ಟು ಅನುಭವವುಳ್ಳ ತಂತ್ರಜ್ಞರೊಂದಿಗೆ ವರದಿಯಲ್ಲಿ ನಿಖರತೆ ಮತ್ತು ಗುಣಮಟ್ಟದ ಕಾಯ್ದುಕೊಳ್ಳುವ ದೃಷ್ಟಿಯಿಂದ ನುರಿತ ಬಯೋಕೆಮಿಸ್ಟ್‌ಗಳು ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ಸದಸ್ಯರಿಗೆ ಶೇ.15ರಿಂದ 20ರ ತನಕ ರಿಯಾಯಿತಿ ನೀಡಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಣಿಪಾಲ, ಉಪಾಧ್ಯಕ್ಷ ಗೋವಿಂದ ಭಂಡಾರಿ ಬನ್ನಂಜೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
9242425340, 9880153929
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.