ಕತ್ತಲಲ್ಲಿ ಕಲ್ಲಿಮಾರು ಜನ, ವಿದ್ಯುತ್ ಅವಘಡದ ಭೀತಿಯಲ್ಲಿ ಶಾಲಾ ಮಕ್ಕಳು
Team Udayavani, Oct 4, 2019, 5:58 AM IST
ಬೆಳ್ಮಣ್: ಮುಂಡ್ಕೂರು ಕಲ್ಲಿಮಾರು ಬಳಿ ದಾರಿ ದೀಪದ ಮೀಟರ್ ತೆರೆದ ಸ್ಥಿತಿಯಲ್ಲಿದ್ದು ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರ ಸಹಿತ ಶಾಲಾ ಮಕ್ಕಳು ವಿದ್ಯುತ್ ಅವಘಡದ ಭೀತಿ ಎದುರಿಸುತ್ತಿದ್ದಾರೆ.
ದಾರಿ ದೀಪಕ್ಕೆ ವಿದ್ಯುತ್ ಪೂರೈಸುವ ಕಂಬದ ಮೀಟರ್ ತೆರೆದ ಸ್ಥಿತಿಯಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ದಾರಿ ದೀಪದ ನಿರ್ವಹಣೆ ನಡೆಸುತ್ತಿರುವ ಮುಂಡ್ಕೂರು ಗ್ರಾ.ಪಂ. ಆಡಳಿತ ಈ ಮೀಟರನ್ನು ಕೂಡಲೇ ದುರಸ್ತಿ ಪಡಿಸಿ ದಾರಿ ದೀಪದ ವ್ಯವಸ್ಥೆ ಯನ್ನೂ ಸರಿ ಪಡಿಸಬೇಕು ಎಂಬುದು ಈ ಭಾಗದ ನಾಗರಿಕರ ಆಗ್ರಹ.
ಚರ್ಚೆ ನಡೆಸಿ ಕ್ರಮ
ಈ ಬಗ್ಗೆ ಚರ್ಚೆ ನಡೆಸಿ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶುಭಾ ಪಿ. ಶೆಟ್ಟಿ, ಅಧ್ಯಕ್ಷೆ, ಮುಂಡ್ಕೂರು ಗ್ರಾ.ಪಂ.
ಆತಂಕ ಎದುರಾಗಿದೆ
ಇಲ್ಲಿನ ದಾರಿ ದೀಪದ ಕಂಬಕ್ಕೆ ಅಳವಡಿಸಲಾದ ಮೀಟರ್ ದುಸ್ಥಿತಿಯಲ್ಲಿದ್ದು, ಈ ಬಗ್ಗೆ ಆತಂಕ ಎದುರಾಗಿದೆ. ದಾರಿ ದೀಪ ವ್ಯವಸ್ಥೆಯೂ ಸರಿಯಾಗಿಲ್ಲ.
-ಸತ್ಯನಾರಾಯಣ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.